Asianet Suvarna News Asianet Suvarna News

2 ಕೊಲೆಗಳಿಗೆ ಕಾರಣ ಹೆಣ್ಣು..ಹೊನ್ನು..! 20 ಕೋಟಿ ಒಡೆಯ ಬೀದಿಗೆ ಬಂದಿದ್ದೇಗೆ..?

ಸಂಘದ ಜಟಾಪಟಿಯೇ ಕೊಲೆಗೆ ಕಾರಣವಾಯ್ತಾ..?
ಅವನನ್ನ ಮುಗಿಸಲು ಸುಪಾರಿ ಕೊಡಲಾಗಿತ್ತಾ..?
ಎರಡು ಹೆಣ ಹಾಕಿ ಸೀದಾ ಪೊಲೀಸ್ ಠಾಣೆಗೆ ಹೋದ..!

ಇದು ಇಡೀ ಬೆಂಗಳೂರಿನ್ನೇ (Bengaluru)ಬೆಚ್ಚಿಬೀಳಿಸಿದ್ದ ಡಬಲ್ ಮರ್ಡರ್(Double Murder) ಕಥೆ. ಬೆಂಗಳೂರಿನ ಜನನಿಬೀಡ ಪ್ರದೇಶಗಳಲ್ಲೊಂದಾದ ಕುಂಬಾರಪೇಟೆಗೆ ನುಗ್ಗಿದ್ದ ಹಂತಕ ನೋಡ ನೋಡ್ತಿದ್ದಂತೆ ಎರಡು ಹೆಣ ಹಾಕಿದ್ದ. ಮೊದಲು ತನ್ನ ದುಷ್ಮನ್‌ಗೆ ಚಾಕು ಹಾಕಿದ್ರೆ ನಂತರ ಆತನನ್ನ ತಡೆಯಲು ಬಂದಿದ್ದ ಅಮಾಯಕನೂ ಉಸಿರು ಚೆಲ್ಲಬೇಕಾಯ್ತು. ಆದರೆ ಅಲ್ಲಿ ಅಷ್ಟೆಲ್ಲಾ ನಡೆದಿದ್ದು ಹೆಣ್ಣು. ಹೊನ್ನಿಗಾಗಿ ಅನ್ನೋದು ಮಾತ್ರ ವಿಪರ್ಯಾಸ. ಸಂಬಂಧಿಕನೇ ಬಂದು ಅಲ್ಲಿ ಬರ್ಬರವಾಗಿ ಕೊಂದು ಹೋಗಿದ್ದ. ಆತ 20 ಕೋಟಿ ಆಸ್ತಿಯ ಒಡೆಯ. ಆದ್ರೆ ಇವತ್ತು ಅಕ್ಷರಶಹ ಬೀದಿಗೆ ಬಂದಿದ್ದ. ಹೆಂಡತಿ (Wife) ಹೆಸರಿಗೆ ಇಡೀ ಆಸ್ತಿ ಇತ್ತು. ಆದ್ರೆ ಆಕೆ ಡಿವೋರ್ಸ್ ಕೊಟ್ಟು ತನ್ನ ದಾರಿ ನೋಡಿಕೊಂಡಳು. ಇನ್ನೂ ಗಾಯದ ಮೇಲೆ ಬರೆ ಎಂಬಂತೆ ತನ್ನ ಸ್ನೇಹಿತ ಮತ್ತು ದೂರದ ಸಂಬಂಧಿಯೂ ಆಗಿದ್ದ ಸುರೇಶ, ಭದ್ರನ ಹೆಂಡತಿಯಿಂದ ಒಂದು ಪ್ರಾಪರ್ಟಿಯನ್ನ ಅರ್ಧ ರೇಟಿಗೆ ಖರೀದಿಸಿಸಿದ್ದ. ಜೊತೆಗೆ ಕುಂಬಾರದ ಸಂಘದ ಪ್ರಾಪರ್ಟಿಯನ್ನೂ ತನ್ನ ಹೆಸರಿಗೆ ಮಾಡಿಕೊಂಡಿದ್ದ. ಇದೆಲ್ಲದ್ರಿಂದ ಕುಪಿತಗೊಂಡ ಭದ್ರ, ಸುರೇಶನನ್ನೇ ಮುಗಿಸಲು ನಿರ್ಧರಿಸಿದ. ಅದರಂತೆ ಆವತ್ತು ಅವನ ಅಂಗಡಿಗೇ ನುಗ್ಗಿ ಬೇಕಾಬಿಟ್ಟಿ ಚಾಕು ಹಾಕಿದ್ದ. ಹೆಣ್ಣು ಹೊನ್ನು ಮಣ್ಣಿನ ದಾಹವು. ಇಲ್ಲಿ 2 ಹೆಣಗಳು ಬೀಳುವಂತೆ ಮಾಡಿತ್ತು. ಇನ್ನೂ ಭದ್ರ ಜೈಲು ಸೇರಿದ್ರೆ ಸುರೇಶ ಮಸಣ ಸೇರಿದ. ಆದ್ರೆ ಏನೂ ತಪ್ಪು ಮಾಡದ ಸುರೇಶನ ಸ್ನೇಹಿತ ಪ್ರಾಣಬಿಟ್ಟಿದ್ದು ನಿಜಕ್ಕೂ ದುರಂತ.

ಇದನ್ನೂ ವೀಕ್ಷಿಸಿ:  Narendra Modi: ನಯಾ ಕಾಶ್ಮೀರದ ಬಗ್ಗೆ ಮೋದಿ ವರ್ಣನೆ..! 25 ವರ್ಷಗಳಲ್ಲಿ ವಿಕಸಿತ ಭಾರತದ ಸಂಕಲ್ಪ..!