Hindu Activist Harsha Murder: 8 ಆರೋಪಿಗಳ ಮೇಲಿರೋ ಡೆಡ್ಲಿ ಕೇಸ್‌ಗಳೆಷ್ಟು ಗೊತ್ತಾ?
*ಯುವತಿಯರಿಂದ ಪದೇಪದೇ ವಿಡಿಯೋ ಕಾಲ್ ಮಾಡಿಸಿ,ಹೊರಗೆ ಕರೆಸಿ ಹರ್ಷ ಹತ್ಯೆ?
*ಹರ್ಷ ಹತ್ಯೆ: 8 ಬಂಧಿತರ ಮೇಲಿರುವ ಡೆಡ್ಲಿ ಕೇಸ್‌ಗಳೆಷ್ಟು ಗೊತ್ತಾ?
*ಹತ್ಯೆಗೀಡಾದ ರಾತ್ರಿ ಹರ್ಷನ ಜತೆಗಿದ್ದ ಸ್ನೇಹಿತನಿಂದ ಮಹತ್ವದ ಮಾಹಿತಿ ಬಹಿರಂಗ
ಶಿವಮೊಗ್ಗ (ಫೆ. 24): ರಾಜ್ಯಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿರುವ ಶಿವಮೊಗ್ಗದ ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆಯ ಸಂಚನ್ನು ಕಾರ್ಯರೂಪಕ್ಕಿಳಿಸಲು ಯುವತಿಯರಿಬ್ಬರನ್ನು ಬಳಸಲಾಯಿತೇ ಎಂಬ ಅನುಮಾನ ಮೂಡಿದೆ. ಹತ್ಯೆಗೀಡಾಗುವ ಮೊದಲು ಅಪರಿಚಿತ ಯುವತಿಯರಿಬ್ಬರಿಂದ ನೆರವು ಯಾಚಿಸಿ ಪದೇ ಪದೇ ವಿಡಿಯೋ ಕರೆ ಬಂದಿತ್ತು. ಅವರ ನೆರವಿಗೆ ತೆರಳುತ್ತಿದ್ದಾಗಲೇ ಹರ್ಷನನ್ನು ಬರ್ಬರವಾಗಿ ಹತ್ಯೆ ಮಾಡಲಾಯಿತು ಎಂಬ ಮಾಹಿತಿ ಇದೀಗ ಬಹಿರಂಗವಾಗಿದೆ. ಇನ್ನು ವಿಶೇಷವೆಂದರೆ ಹರ್ಷ ಹತ್ಯೆ ಬಳಿಕ ಆತನ ಮೊಬೈಲ್ ಕೂಡ ನಾಪತ್ತೆಯಾಗಿದೆ. ಹರ್ಷನ ಹತ್ಯೆ ಬಳಿಕ ಹಂತಕರೇ ಈ ಮೊಬೈಲ್ ಕೊಂಡೊಯ್ದಿರಬಹುದು ಎಂಬ ಅನುಮಾನ ಮೂಡಿದೆ.
ಇನ್ನು ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮತ್ತಿಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಎಂಟಕ್ಕೇರಿದೆ. ಶಿವಮೊಗ್ಗದ ಇಲಿಯಾಸ್ ನಗರದ ಫರಾಜ್ ಪಾಷಾ (24), ವಾದಿ ಎ ಹುದಾ ನಗರದ ಅಬ್ದುಲ್ ಖಾದರ್(25) ಬಂಧಿತರು. ಮೊದಲ ದಿನ ಬಂಧಿಸಲ್ಪಟ್ಟಮಹ್ಮದ್ ಖಾಸಿಫ್ ಮತ್ತು ಸೈಯದ್ ನದೀಂ ಇಬ್ಬರನ್ನೂ ಮಂಗಳವಾರಂದೇ ಕೋರ್ಟ್ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.
ಇದನ್ನೂ ಓದಿ: Harsha Murder Case : SDPI ಮತ್ತು PFI ಬ್ಯಾನ್ ಫಿಕ್ಸ್?
ಇದೀಗ ರಿಹಾನ್ ಷರೀಫ್, ಆಸಿಫ್ ಉಲ್ಲಾಖಾನ್, ಅಬ್ದುಲ್ ಅಫ್ನಾನ್ ಮತ್ತು ನಿಹಾನ್ ಎಂಬ ನಾಲ್ವರು ಆರೋಪಿಗಳನ್ನು ಬುಧವಾರ ನ್ಯಾಯಾಲಯದ ಎದುರು ಹಾಜರುಪಡಿಸಿದ್ದು, ಇವರನ್ನೂ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಬಂಧನಕ್ಕೊಳಗಾದ ಈ ಎಂಟು ಆರೋಪಿಗಳ ಮೇಲಿರುವ ಒಟ್ಟು ಪ್ರಕರಣಗಳ ಸಂಖ್ಯೆ ಎಷ್ಟು ಗೊತ್ತಾ? ಅಷ್ಟಕ್ಕೂ ಆರೋಪಿ ಖಾಸಿಫ್‌ಗೂ ಹಿಂದೂ ಕಾರ್ಯಕರ್ತ ಹರ್ಷನಿಗೂ ದ್ವೇಷದ ಹಿಂದೆ ಅಡಗಿರುವ ಕಾರಣವೇನು? ಇಲ್ಲಿದೆ ಈ ಕುರಿತ ಒಂದು ವರದಿ