ಮಾಹಿತಿ ಕೊಟ್ಟವನಿಗೆ ಹಾಕಿದ್ರು ಸ್ಕೆಚ್: ಭ್ರಷ್ಟರ ವಿರುದ್ಧ ಹೋರಾಡಿದವ ಪ್ರಾಣ ಬಿಟ್ಟ

ಭ್ರಷ್ಟಾಚಾರದ ಇಂಚಿಂಚು ಕಹಾನಿಯನ್ನು ಸುವರ್ಣ ನ್ಯೂಸ್'ಗೆ ಹೇಳಿದ್ದ ಆರ್.ಟಿ.ಐ ಕಾರ್ಯಕರ್ತ ಇಂದು ಹೆಣವಾಗಿ ಹೋಗಿದ್ದಾನೆ. ಏನಿದು ಸ್ಟೋರಿ? ಇಲ್ಲಿದೆ ಡಿಟೇಲ್ಸ್.

First Published Jan 11, 2023, 4:20 PM IST | Last Updated Jan 11, 2023, 4:20 PM IST

ಅವನು RTI ಕಾರ್ಯಕರ್ತ. ಎಲ್ಲೇ ಅನ್ಯಾಯ ಆಗ್ತಿದೆ ಅಂತ ಗೊತ್ತಾದ್ರೂ, ಅಲ್ಲಿ ಹಾಜರ್ ಆಗಿಬಿಡ್ತಿದ್ದ. ಭ್ರಷ್ಟರ ವಿರುದ್ಧ ಆತ ಸಮರ ಸಾರಿದ್ದ. ಅವನದ್ದೇ ಗ್ರಾಮದ ಒಬ್ಬ ಭ್ರಷ್ಟ ಪಿಡಿಓನನ್ನ ಆತ ಹೇಗೆಲ್ಲಾ ಕಾಡಿದ್ದ ಅಂದ್ರೆ, ಈತನಿಂದಲೇ ಆತ ಐದೈದು ಬಾರಿ ಸಸ್ಪೆಂಡ್ ಕೂಡ ಆಗಿದ್ದ. ಇನ್ನೂ ನಮ್ಮದೇ ಕವರ್ ಸ್ಟೋರಿ ತಂಡ ನಡೆಸಿದ್ದ ಒಂದು ಸ್ಟಿಂಗ್ ಆಪರೇಷನ್'ಗೆ ಆತ ಮೇಜರ್ ಇನ್ಫಾರ್ಮೆಷನ್ ಕೂಡ ಕೊಟ್ಟಿದ್ದ. ಆದ್ರೆ ಆತ ಕೊಟ್ಟ ಮಾಹಿತಿಯಿಂದ ನಾವು ಎಪಿಸೋಡ್ ಮಾಡಿ ಜನರ ಮುಂದೆ ಇಟ್ವಿ. ಪರಿಣಾಮ ಇವತ್ತು ಆ ಭ್ರಷ್ಟ ಅಧಿಕಾರಿ ಅಮಾನತ್ತಿನಲ್ಲಿದ್ದಾನೆ. ಆದ್ರೆ ನಮಗೆ ಮಾಹಿತಿ ಕೊಟ್ಟ ಆ RTI ಕಾರ್ಯಕರ್ತ ಬರ್ಬರವಾಗಿ ಹೆಣವಾಗಿ ಹೋಗಿದ್ದಾನೆ. ಯಾವಾಗ ಅವನ ಹೆಣ ಬಿತ್ತೋ ಎಲ್ಲರೂ ಅಂದುಕೊಂಡಿದ್ದು ಆತನಿಂದ ಸಸ್ಪೆಂಡ್ ಆದ ಅಧಿಕಾರಿಯೇ ಈ ಕೊಲೆ ಮಾಡಿಸಿದ್ದಾನೆ ಅಂತ. ಅಷ್ಟಕ್ಕೂ ನ್ಯಾಯಕ್ಕಾಗಿ ಹೋರಾಡಿ ಪ್ರಾಣವನ್ನೇ ಬಿಟ್ಟ RTI ಕಾರ್ಯಕರ್ತನ ಮರ್ಡರ್ ಕಹನಿಯ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ‌.

ಚಳಿಗಾಲದಲ್ಲಿ ಆರೋಗ್ಯದ ಕಾಳಜಿ ಹೇಗೆ ? ಜಯದೇವ ಆಸ್ಪತ್ರೆಯ ಡಾ.ಸಿಎನ್ ಮಂ ...