Asianet Suvarna News Asianet Suvarna News

ಯೋಗೇಶ್ ಗೌಡ ಹತ್ಯೆ ತನಿಖೆಯಲ್ಲಿ ವಿನಯ್ ಕೈವಾಡದ ಶಂಕೆ ವ್ಯಕ್ತ; ಜೈಲು ಬಹುತೇಕ ಪಕ್ಕಾ?

ಧಾರವಾಡ ಜಿ. ಪಂ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿನಯ್ ಕುಲಕರ್ಣಿಯವರನ್ನು 3 ದಿನಗಳ ಕಾಲ ಸಿಬಿಐ ವಶಕ್ಕೆ ಪಡೆದಿದೆ. 

ಬೆಂಗಳೂರು (ನ. 07): ಧಾರವಾಡ ಜಿ. ಪಂ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿನಯ್ ಕುಲಕರ್ಣಿಯವರನ್ನು 3 ದಿನಗಳ ಕಾಲ ಸಿಬಿಐ ವಶಕ್ಕೆ ಪಡೆದಿದೆ. ಇಂದು ಅವರ ಹುಟ್ಟುಹಬ್ಬವಿದ್ದು, ಆ ಸಂಭ್ರಮವಿಲ್ಲದಂತಾಗಿದೆ. ಜೈಲಿನಲ್ಲೇ ಕಣ್ಣೀರು ಹಾಕುತ್ತಿದ್ದಾರೆ. ರಾತ್ರಿಯಿಡೀ ನಿದ್ದೆ ಮಾಡದೇ ಸೆಲ್‌ನಲ್ಲಿ ಸುತ್ತಾಡಿದ್ದಾರೆ. 

ವಿನಯ್ ಕುಲಕರ್ಣಿ ಪರ ನಿಂತ ಸ್ವಾಮೀಜಿಗೆ ನ್ಯಾಯ ಕೇಳಿ ಯೋಗೇಶ್ ಗೌ ತಾಯಿ ಪತ್ರ

ಗುರುವಾರ ಬೆಳಿಗ್ಗೆಯಿಂದ ಸತತ 10 ಗಂಟೆಗಳ ಕಾಲ ವಿನಯ್ ಕುಲಕರ್ಣಿ ವಿಚಾರಣೆ ನಡೆದಿದೆ. 3 ದಿನಗಳ ಕಾಲ ವಶಕ್ಕೆ ನೀಡುವಂತೆ ಸಿಬಿಐ ಕೋರಿತ್ತು. ತನಿಖೆಯಲ್ಲಿ ಮೇಲ್ನೋಟಕ್ಕೆ ಸಾಕಷ್ಟು ಕಡೆಗಳಲ್ಲಿ ಕುಲಕರ್ಣಿ ಕೈವಾಡದ ಶಂಕೆ ವ್ಯಕ್ತವಾಗಿದೆ. ತನಿಖೆ ಚುರುಕುಗೊಂಡಿದ್ದು ಮುಂದೇನಾಗಬಹುದು ಎಂದು ಕಾದು ನೋಡಬೇಕಿದೆ. 

 

Video Top Stories