Asianet Suvarna News Asianet Suvarna News

ವಿನಯ್ ಕುಲಕರ್ಣಿ ಪರ ನಿಂತ ಸ್ವಾಮೀಜಿಗೆ ನ್ಯಾಯ ಕೇಳಿ ಯೋಗೇಶ್ ಗೌಡ ತಾಯಿ ಪತ್ರ

ಬಂಧಿತ ವಿನಯ್ ಕುಲಕರ್ಣಿ ಪರ ವಹಿಸಿ ಮಾತಾಡಿದ್ದಕ್ಕೆ, ಜಯಮೃತ್ಯುಂಜಯ ಸ್ವಾಮೀಜಿಗೆ ಯೋಗೇಶ್ ಗೌಡ ತಾಯಿ ಪತ್ರ ಬರೆದಿದ್ದಾರೆ. ತಮಗೆ ನ್ಯಾಯ ಕೊಡಿಸುವಂತೆ ಕೇಳಿಕೊಂಡಿದ್ದಾರೆ. 

ಬೆಂಗಳೂರು (ನ. 07): ಬಂಧಿತ ವಿನಯ್ ಕುಲಕರ್ಣಿ ಪರ ವಹಿಸಿ ಮಾತಾಡಿದ್ದಕ್ಕೆ, ಜಯಮೃತ್ಯುಂಜಯ ಸ್ವಾಮೀಜಿಗೆ ಯೋಗೇಶ್ ಗೌಡ ತಾಯಿ ಪತ್ರ ಬರೆದಿದ್ದಾರೆ. 

ವಿನಯ್ ಕುಲಕರ್ಣಿ ಬಂಧನ ರಾಜಕೀಯ ಪ್ರೇರಿತ; ಸಿಬಿಐ ನಡೆಯನ್ನು ಖಂಡಿಸಿದ ಮೃತ್ಯುಂಜಯ ಸ್ವಾಮೀಜಿ

ನನ್ನ ಮಗ ಯೋಗೀಶ್ ಗೌಡನನ್ನು ರಾಜಕೀಯ ದ್ವೇಷಕ್ಕಾಗಿ ಕಳೆದುಕೊಂಡ ನನ್ನ ಕರುಳಿನ ದುಃಖ ನಿಮಗೆ ತಿಳಿಯುತ್ತಿಲ್ಲವೇ? ಆತನ ಮಕ್ಕಳು ಅನಾಥರಾದ ಬಗ್ಗೆ ನಿಮಗೆ ಅನುಕಂಪವಿಲ್ಲವೇ? ಪೊಲೀಸ್ ದರ್ಪದಿಂದ ಒತ್ತಡ ಹೇರಿ ಸಮಸ್ಯೆಯಲ್ಲಿದ್ದಾಗ ನಾನು ಬದುಕಿದ್ದೇ ಬಸವನ ಕೃಪೆಯಿಂದ. ನ್ಯಾಯಕ್ಕಾಗಿ ನಮ್ಮ ಹೋರಾಟವನ್ನು ಮುಂದುವರೆಸಿದ್ದೇವೆ. ಅನ್ಯಾಯ, ಅಪಮಾನ ಅನುಭವಿಸುತ್ತಿರುವ ನಮಗೆ ನ್ಯಾಯ ಒದಗಿಸಲು ಬನ್ನಿ. ಧ್ವನಿ ಎತ್ತಿ. ಬಡ ಪಂಚಮಸಾಲಿ ಯುವ ನಾಯಕನ ಕೊಲೆ ಮಾಡಿದ ಕಟುಕರು ಶಿಕ್ಷೆ ಅನುಭವಿಸುವಂತಾಲಿ. ನಿಮ್ಮ ಆಶೀರ್ವಾದಕ್ಕೆ, ಸಾಂತ್ವನಕ್ಕೆ ನಾವು ಕಾದಿದ್ದೇವೆ' ಎಂದು ಪತ್ರ ಬರೆದಿದ್ದಾರೆ. 

Video Top Stories