Asianet Suvarna News Asianet Suvarna News

ಸೇಡಿನ ಕಿಚ್ಚಿಗೆ ಬಿದ್ದಿದ್ದು 3 ಹೆಣ, ತಮ್ಮನ ಮೇಲಿನ ದ್ವೇಷಕ್ಕೆ ಅಣ್ಣನ ಕೊಲೆ: ಹಾಡಹಗಲೇ ಆಟೋ ಡ್ರೈವರ್ ಹತ್ಯೆ..!

ಯಾರೋ ಮಾಡಿದ ತಪ್ಪಿಗೆ ಇನ್ಯಾರಿಗೋ ಶಿಕ್ಷೆ.. ತನ್ನ ಪಾಡಿಗೆ ಇದ್ದ ಹೇಮಂತನನ್ನ ಮುಜ್ಜು ಸಹೋದರ ಕೊಂದು ಮುಗಿಸಿದ್ದಾನೆ. ಈ ವಿಷ್ಯ ಜೈಲಿನಲ್ಲಿದ್ದ ಹೇಮಂತನ ತಮ್ಮನಿಗೆ ಗೊತ್ತಾಗಿ ಜೈಲಿನ ಸೆಲ್‌ನಲ್ಲಿ ಕೊತ ಕೊತ ಕುದಿಯುತ್ತಿದ್ದಾನೆ. ಈಗಾಗಲೇ ಈ ಸೇಡಿನ ಕಿಚ್ಚಿಗೆ ಮೂರು ಹೆಣಗಳು ಬಿದ್ದಿವೆ. 

ಶಿವಮೊಗ್ಗ(ಡಿ.23):  ಅವನು ಆಟೋ ಡ್ರೈವರ್. ತನ್ನ ಪಾಡಿಗೆ ತಾನು ಆಟೋ ಓಡಿಸಿಕೊಂಡು ಹೆಂಡತಿ ಮತ್ತು ಇಬ್ಬರು ಮಕ್ಕಳನ್ನ ಚೆನ್ನಾಗಿ ನೋಡಿಕೊಳ್ತಿದ್ದ.. ಆದ್ರೆ ಆವತ್ತು ಆಟೋ ಬಾಡಿಗೆಗೆ ಅಂತ ಹೋದವನು ಮಧ್ಯಾಹ್ನ ಆಗುವಷ್ಟರಲ್ಲಿ ಹೆಣವಾಗಿದ್ದ.. ಹಾಡಹಗಲಲ್ಲೇ ಆತನನ್ನ ಬರ್ಬರವಾಗಿ ಕೊಂದು ಮುಗಿಸಿದ್ರು. ಇನ್ನೂ ಇದೇ ಕೇಸ್‌ನ ತನಿಖೆ ನಡೆಸಿದ ಪೊಲೀಸರು ಕೊಲೆ ನಡೆದು ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನ ಬಂಧಿಸಿದ್ರು.  ಆರೋಪಿಗಳ ವಿಚಾರಣೆ ನಡೆಸಿದಾಗ ಅಲ್ಲಿ ಸಿಕ್ಕಿದ್ದು ಒಂದು ಸೇಡಿನ ಕಥೆ.. ಹಾಗಾದ್ರೆ ಆಟೋ ಡ್ರೈವರ್ ಕೊಲೆಯ ಇನ್ಸೈಡ್ ಸ್ಟೋರಿಯೇ ಇವತ್ತಿನ ಎಫ್.ಐ.ಆರ್.

ಅದು ಮೂರುವರೆ ವರ್ಷದ ಹಿಂದೆ ನಡೆದಿದ್ದ ಕೊಲೆ. ಆ ಕೊಲೆಗೆ ಸಾಕ್ಷಿಯಾಗಿದ್ದವರೇ ಹೇಮಂತನ ಸಹೋದರ ಮತ್ತು ಆತನ ಗೆಳೆಯರು.. ಯಾವಾಗ ಕೇಸ್ ತನ್ನ ವಿರುದ್ಧವಾಗ್ತಿದೆ ಅನ್ನೋದು ಕೊಲೆಯ ಆರೋಪಿಯಾಗಿದ್ದ ಮುಜ್ಜುಗೆ ಗೊತ್ತಾಯ್ತೋ ಹೇಮಂತನ ತಮ್ಮನಿಗೆ ವಾರ್ನ್ ಮಾಡಿದ್ದ.. ಆದ್ರೆ ಅವನ ವಾರ್ನ್ಗೆ ಹೇಮಂತನ ತಮ್ಮನ ಉತ್ತರ ಕೊಲೆಯಾಗಿತ್ತು.. ತನಗೆ ವಾರ್ನ್ ಮಾಡಿದವನಿಗೇ ಆತ ಮಚ್ಚು ಬೀಸಿದ್ದ.. ಇನ್ನೂ ಯಾವಾಗ ಮುಜ್ಜು ಸತ್ತನೋ ಮಜ್ಜು ತಮ್ಮ ಪ್ರತೀಕಾರದ ಶಪಥ ಮಾಡಿದ್ದ.. ಸಮಯ ನೋಡಿಕೊಂಡು ತನ್ನ ಅಣ್ಣನನ್ನ ಕೊಂದವನ ಅಣ್ಣನ್ನಾದ ಹೇಮಂತನನ್ನ ಕೊಂದೇಬಿಟ್ಟ.

ಮೂರು ಹೆಣ ಹಾಕಿ ಕಾಶಿಗೆ ಹೋಗಿ ತಲೆ ಬೋಳಿಸಿದ್ದ: ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಅಮ್ಮ-ಮಕ್ಕಳ ಭೀಕರ ಕೊಲೆ!

ಯಾರೋ ಮಾಡಿದ ತಪ್ಪಿಗೆ ಇನ್ಯಾರಿಗೋ ಶಿಕ್ಷೆ.. ತನ್ನ ಪಾಡಿಗೆ ಇದ್ದ ಹೇಮಂತನನ್ನ ಮುಜ್ಜು ಸಹೋದರ ಕೊಂದು ಮುಗಿಸಿದ್ದಾನೆ. ಈ ವಿಷ್ಯ ಜೈಲಿನಲ್ಲಿದ್ದ ಹೇಮಂತನ ತಮ್ಮನಿಗೆ ಗೊತ್ತಾಗಿ ಜೈಲಿನ ಸೆಲ್‌ನಲ್ಲಿ ಕೊತ ಕೊತ ಕುದಿಯುತ್ತಿದ್ದಾನೆ. ಈಗಾಗಲೇ ಈ ಸೇಡಿನ ಕಿಚ್ಚಿಗೆ ಮೂರು ಹೆಣಗಳು ಬಿದ್ದಿವೆ. 

Video Top Stories