'ಗಲಭೆ ತೋರಿಸಿದ್ದು ಮಾಧ್ಯಮಗಳ ಷಡ್ಯಂತ್ರವಂತೆ' ಅವಾಜ್ ಬೇರೆ ಹಾಕ್ತಾರೆ!

ಬೆಂಗಳೂರು ಗಲಭೆಯಲ್ಲಿ ಮೃತಪಟ್ಟವರು ಹುತಾತ್ಮರು/ ಒಂದು ಕಡೆ ಚಾಮರಾಜಪೇಟೆ ಶಾಸಕರ ಹೇಳಿಕೆ/ ಆರೋಪಿಗಳನ್ನು ಕೋರ್ಟ್ ಗೆ ಕರೆದುಕೊಂಡು ಹೋಗುವಾಗ ಸುವರ್ಣ ನ್ಯೂಸ್ ಸಿಬ್ಬಂದಿಗೆ ಅವಾಜ್

First Published Aug 18, 2020, 10:14 PM IST | Last Updated Aug 18, 2020, 10:14 PM IST

ಬೆಂಗಳೂರು (ಆ. 18)  ಪೊಲೀಸರ ವಶದಲ್ಲಿ ಇದ್ದರೂ ಬೆಂಗಳೂರು ಗಲಭೆ ಕೋರರಿಗೆ ಮಾತ್ರ ಬುದ್ಧಿ ಬಂದಿಲ್ಲ.   ಪುಂಡಾಟ ಮಾಡಿದ್ದನ್ನು ನಡೆದಂತೆ ತೋರಿಸಿದ್ದಕ್ಕೆ ಮಾಧ್ಯಮಗಳ ಮೇಲೆಯೇ ಆವಾಜ್ ಹಾಕುವ ಮಟ್ಟಕ್ಕೆ ಪುಂಡರು ಬಂದಿದ್ದಾರೆ. 

'ಸೊಕ್ಕು ಇಳಿದಿಲ್ಲ' ವರದಿಗೆ ತೆರಳಿದ್ದ ಸುವರ್ಣ ಸಿಬ್ಬಂದಿಗೆ ಪುಂಡರ ಅವಾಜ್!

ಮುಖಕ್ಕೆ ಬಳಿದುಕೊಂಡಿರುವ ಮಸಿಯನ್ನು ತೊಳೆದುಕೊಳ್ಳುವುದು ಬಿಟ್ಟು ಕನ್ನಡಿಯನ್ನು ಬೈಯಲು ತೊಡಗಿದ್ದಾರೆ. ಬೆಂಗಳೂರು ಗಲಭೆ ವರದಿ ಮಾಡಿದ್ದು ಮಾಧ್ಯಮಗಳ ಷಡ್ಯಂತ್ರವಂತೆ!