Asianet Suvarna News Asianet Suvarna News

ಬೆಳಗಾವಿ;  ಸುಳ್ಳು ದಾಖಲೆ ಸೃಷ್ಟಿಸಿ  ವಾಹನ ಮಾರುತ್ತಿದ್ದ ಗ್ಯಾಂಗ್ ಸೆರೆ

* ಸುಳ್ಳು ದಾಖಲಾತಿ ಸೃಷ್ಟಿಸಿ ಅಂತರರಾಜ್ಯಗಳಲ್ಲಿ ವಾಹನ ಮಾರಾಟ ಮಾಡುತ್ತಿದ್ದ  ಗ್ಯಾಂಗ್
* ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ
* ಫೈನಾನ್ಸ್ ನಿಂದ ಹಣ ಪಡೆದುಕೊಳ್ಳುತ್ತಿದ್ದರು
* ಮಹಾರಾಷ್ಟ್ರದಲ್ಲಿಯೂ ಜಾಲ ಹೊಂದಿದ್ದರು

ಬೆಳಗಾವಿ(ಜು.  07) ವಾಹನಗಳ ಸುಳ್ಳು ದಾಖಲಾತಿ ಸೃಷ್ಟಿಸಿ ಅಂತರರಾಜ್ಯಗಳಲ್ಲಿ ವಾಹನ ಮಾರಾಟ ಮಾಡುತ್ತಿದ್ದ  ಗ್ಯಾಂಗ್ ಒಂದನ್ನು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಒಟ್ಟು 2 ಕೋಟಿ 60 ಲಕ್ಷ ಮೌಲ್ಯದ, 9 ಟಿಪ್ಪರ್‌ ವಾಹನ, 1 ಜೆಸಿಬಿ, 2 ಟ್ರಕ್‌ಗಳನ್ನ ವಶಪಡಿಸಿಕೊಳ್ಳಲಾಗಿದೆ. ಮಹಾರಾಷ್ಟ್ರ ಮೂಲದ ಫಯಾಜ ದಾಲಾಯತ ಎನ್ನುವವರು ನೀಡಿದ ದೂರಿನ ಹಿನ್ನೆಲೆ ತನಿಖೆ ನಡೆಸಿದ ಪೊಲೀಸರು ಪ್ರಮುಖ ಆರೋಪಿ ಯೂಸುಫ್ ಸೈಯದ್‌ನನ್ನು ಬಂಧಿಸಿ ಮೋಸದ ಜಾಲವನ್ನ ಭೇದಿಸಿದ್ದಾರೆ. 

ಪ್ರಕರಣದ ಪ್ರಮುಖ ಆರೋಪಿ ಯೂಸುಫ್ ತನ್ನ ಸಹಚರೊಂದಿಗೆ ಸೇರಿಕೊಂಡು, ಫೈನಾನ್ಸ್ ಕಂಪನಿಗಳಿಂದ ಲೋನ್ ಪಡೆದು ಹಣ ಮರು ಪಾವತಿ ಮಾಡಲು ಆಗದೆ ವಾಹನಗಳನ್ನ ಮಾರಾಟ ಮಾಡುವವರನ್ನ ಹುಡುಕುತಿದ್ದ. ಅಂಥವರನ್ನ ಗುರುತಿಸಿ ನಿಮ್ಮ ವಾಹನವನ್ನು ಮಾರಾಟ ಮಾಡಿ ಕೊಡುತ್ತೇವೆ,  ಜೊತೆಗೆ ಇನ್ಶುರೆನ್ಸ್‌ ಕಂಪನಿಯಿಂದ ನಿಮಗೆ ಹಣ ಕೂಡ ಕೊಡಿಸುತ್ತೇವೆ ಎಂದು ನಂಬಿಸಿ ಕಡಿಮೆ ಬೆಲೆಗೆ ವಾಹನ ಪಡೆಯುತ್ತಿದ್ದ. 

ಬೆಂಗಳೂರು ಟು ಚಿಕ್ಕಬಳ್ಳಾಪುರ; 15 ವರ್ಷ ಹಿಂದಿನ ಕೊಲೆ  ಪತ್ತೆಗೆ ಕಾರಣವಾದ  ಬೆರಳಚ್ಚು!

ಬಳಿಕ ಅದೇ ವಾಹನಗಳನ್ನ ಪ್ರಕರಣದ ಎರಡನೇ ಆರೋಪಿಯಾದ ದಾಂಡೇಲಿಯ ದಿಲಾವರ ಕಾಕರ ಜೊತೆ ಸೇರಿ, ವಾಹನದ ಚೆಸ್ಸಿ ನಂಬರ್  ಹಾಗೂ ನಂಬರ್ ಪ್ಲೇಟ್ ಬದಲಾಯಿಸುತಿದ್ರು.  ಅದಕ್ಕೆ ಬೇರೆ ಆರ್‌ಸಿ ತಯಾರಿಸಿ ಬೇರೆ ಬೇರೆ ರಾಜ್ಯಗಳಿಗೆ ಮಾರಾಟ ಮಾಡುತ್ತಿದ್ರು. ದೂರುದಾರ ಫಯಾಜ ದಲಾಯತ್ ಕೂಡ ಆರೋಪಿ ಯೂಸುಫ್‌ಗೆ ಒಂದು ಜೆಸಿಬಿ ನೀಡಿದ್ದ. 30 ಲಕ್ಷ ಮೌಲ್ಯದ  ಜೆಸಿಬಿಯನ್ನ 12 ಲಕ್ಷಕ್ಕೆ ಮಾರಾಟ ಮಾಡಿ, 6 ಲಕ್ಷ ರೂಪಾಯಿಗಳನ್ನ ಮುಂಗಡವಾಗಿ ಪಡೆದಿದ್ದ. ಬಹಳ ದಿನಗಳು ಕಳೆದಿದ್ದರೂ ವಾಹನದ ಆರ್.ಸಿ ಪತ್ರಗಳನ್ನ ನೀಡದೆ ಸತಾಯಿಸುತ್ತಿದ್ದ ಈ ಹಿನ್ನಲೆ ಫಯಾಜ್ ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ರು.  ತನಿಖೆ ನಡೆಸುವ ವೇಳೆ ಇಡಿ ಪ್ರಕರಣ ಬೆಳಕಿಗೆ ಬಂದಿದೆ.

Video Top Stories