Asianet Suvarna News Asianet Suvarna News

ಮಹಿಳೆ ಬಳಿ ಇತ್ತಾ ಶ್ರೀಗಳ ಖಾಸಗಿ ವಿಡಿಯೋ?: ಡೆತ್‌ನೋಟ್‌ನಲ್ಲಿ ಸೂಸೈಡ್ ಸೀಕ್ರೆಟ್?

ಸ್ವಾಮೀಜಿಗಳ ಸಾವಿಗೆ ನಿಜವಾದ ಕಾರಣವೇನು..? ಅವರು ಬರೆದಿಟ್ಟ ಮೂರು ಪುಠಗಳ ಡೆತ್‌ನೋಟ್‌ನಲ್ಲಿ ಏನಿದೆ..? 

First Published Oct 26, 2022, 12:06 PM IST | Last Updated Oct 26, 2022, 12:06 PM IST

ರಾಮನಗರ(ಅ.26): ಅದು ರಾಮನಗರದ ಪ್ರತಿಷ್ಠಿತ ಮಠ. ಅದೊಂದು ಮಠದಿಂದ ಪ್ರತಿ ನಿತ್ಯ ಸಾವಿರಾರು ಮಂದಿ ತಮ್ಮ ಹೊಟ್ಟೆ ತುಂಬಿಸಿಕೊಳ್ತಿದ್ರು. ಆದ್ರೆ ಮೊನ್ನೆ ಇದ್ದಕ್ಕಿದ್ದಂತೆ ಇದೇ ಮಠದಲ್ಲಿ ನಡೆಯಬಾರದ್ದು ನಡೆದು ಹೋಗಿದೆ. ಆ ಮಠದ ಅಧಿಪತಿ ತಮ್ಮದೇ ಕೊಠಡಿಯಲ್ಲಿ ನೇಣುಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ರು. ನೂರಾರು ಕೋಟಿ ಆಸ್ತಿ ಇರುವ ಅದೊಂದು ಮಠದಲ್ಲಿ ಹೀಗೆ ಮಠಾಧಿಪತಿಗಳೇ ಸಾವನ್ನಪ್ಪಿದ್ದು ಕೇವಲ ಮಠದ ಭಕ್ತರಷ್ಟೇ ಅಲ್ಲ ಇಡೀ ಜಿಲ್ಲೆಯನ್ನ ಬೆಚ್ಚಿ ಬೀಳಿಸಿತ್ತು. ಆ ಸ್ವಾಮೀಜಿಯ ಸಾವಿನ ಸುತ್ತ ಹತ್ತಾರು ಅನುಮಾನಗಳು ಹುಟ್ಟಿಕೊಂಡಿದ್ವು. ಅಷ್ಟಕ್ಕೂ ದೀಪಾವಳಿ ಹಬ್ಬದ ದಿನವೇ ಇಹಲೋಕ ತ್ಯಜಿಸಿದ ಬಂಡೆ ಮಠದ ಸ್ವಾಮೀಜಿಗಳ ಸೂಸೈಡ್ ಸೀಕ್ರೆಟ್ ಮತ್ತು ಸ್ವಾಮೀಜಿಯ ಸಾವಿನ ನಂತರ ಹುಟ್ಟಿಕೊಂಡಿರೋ ಊಹಾಪೋಹಗಳ ಇನ್ಸೈಡ್ ಸ್ಟೋರಿಯೇ ಇವತ್ತಿನ ಎಫ್ಐಆರ್....

ಯಸ್... ಬಸವಲಿಂಗ ಸ್ವಾಮೀಜಿ ಸಾವು ಅವರ ಭಕ್ತರಿಗಷ್ಟೇ ಅಲ್ಲದೇ ಪ್ರತಿಷ್ಠಿತ ಮಠಗಳ ಪೀಠಾಧಿಪತಿಗಳಿಗೂ ಶಾಕ್ ಆಗುವಂತೆ ಮಾಡಿತ್ತು. ಅಷ್ಟಕ್ಕೂ ಸ್ವಾಮೀಜಿಗಳ ಸಾವಿಗೆ ನಿಜವಾದ ಕಾರಣವೇನು..? ಅವರು ಬರೆದಿಟ್ಟ ಮೂರು ಪುಠಗಳ ಡೆತ್‌ನೋಟ್‌ನಲ್ಲಿ ಏನಿದೆ..? 

ಬಂಡೆಮಠದ ಶ್ರೀ ಬಸವಲಿಂಗ ಸ್ವಾಮೀಜಿ ಸಾವು, ಡೆತ್ ನೋಟ್ ನಲ್ಲಿ ಮಹಿಳೆ ಬಗ್ಗೆ ಉಲ್ಲೇಖ!

ಸ್ವಾಮೀಜಿಗಳ ಸಾವಿನ ಸುತ್ತ ಈಗ ಹಲವು ಅನುಮಾನಗಳು ಹುಟ್ಟಿಕೊಂಡಿವೆ. ಹಲವು ಜನ ಹಲವಾರು ಅನುಮಾನಗಳನ್ನ ವ್ಯಕ್ತಪಡಿಸುತ್ತಿದ್ದಾರೆ. ಅದ್ರೆ ಅದಕ್ಕೆಲ್ಲಾ ಕಾರಣವಾಗಿರೋದು ಅವರ ಕೊಠಡಿಯಲ್ಲಿ ಸಿಕ್ಕ ಮೂರು ಪಠಗಳ ಡೆತ್ ನೋಟ್. ಅವರೇ ಬರೆದುಕೊಂಡಿರುವಂತೆ. ಅವರನ್ನ ಕೆಲವರು ಬ್ಲ್ಯಾಕ್ಮೇಲ್ ಮಾಡ್ತಿದ್ದರಂತೆ. ಅಷ್ಟೇ ಒಬ್ಬ ಮಹಿಳೆ ಅವರಿಗೆ ಫೋನ್ ಮಾಡಿ ಬೆದರಿಸುತ್ತಿದ್ದರಂತೆ.

ಸದ್ಯ ಪೊಲೀಸರು ತನಿಖೆಯನ್ನ ಆರಂಭಿಸಿದ್ದಾರೆ. ಬಂಡೆ ಮಠದ ಸ್ವಾಮಿಜಿಗಳ ಸಾವಿನ ಸೀಕ್ರೆಟ್ ತನಿಖೆಯ ನಂತರ ಬಟಾಬಯಲಾಗಲಿದೆ. ಒಂದು ವೇಳೆ ಅವರನ್ನ ಯಾರಾದರೂ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್ಮೇಲ್ ಮಾಡಿದ್ದೇ ಆದ್ರೆ ಅವರ ವಿರುದ್ಧ ಕಠಿಣ ಕ್ರಮವಾಗಲೇಬೇಕು. ಅಷ್ಟೇ ಅಲ್ಲ, ಮಠದ ಆಸ್ತಿಗಾಗಿ ಸ್ವಾಮೀಜಿಗಳನ್ನ ಕಾಡುತ್ತಿದ್ರೂ ಅದೂ ಕೂಡ ಬಯಲಾಗಲೇಬೇಕು. 
 

Video Top Stories