Asianet Suvarna News Asianet Suvarna News

Basavalinga Swamiji Death: ಸ್ವಾಮೀಜಿ ಹನಿಟ್ರ್ಯಾಪ್‌ಗೆ ವ್ಯವಸ್ಥಿತ ಪ್ಲಾನ್? ಒಂದಲ್ಲ, ಎರಡಲ್ಲ 20 ವಿಡಿಯೋ?

Basavalinga Swamiji Suicide: ಸ್ವಾಮೀಜಿ ಹನಿಟ್ರ್ಯಾಪ್‌ಗೆ ವ್ಯವಸ್ಥಿತವಾಗಿ ಸಂಚು ರೂಪಿಸಲಾಗಿದ್ದು, ಪಕ್ಕಾ ಪ್ಲ್ಯಾನ್‌ ಮಾಡಿ ಶ್ರೀಗಳನ್ನು ಖೆಡ್ಡಾಗೆ ಕೆಡವಿದ್ರಾ ಎಂಬ ಅನುಮಾನ ಈಗ ವ್ಯಕ್ತವಾಗಿದೆ. 

First Published Oct 27, 2022, 5:14 PM IST | Last Updated Oct 27, 2022, 5:14 PM IST

ರಾಮನಗರ (ಅ. 27): ಕಂಚುಗಲ್ ಬಂಡೇಮಠದ ಪೀಠಾ​ಧ್ಯ​ಕ್ಷ​ರಾ​ಗಿದ್ದ ಶ್ರೀ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ (Basavalinga Swamiji Death) ಪ್ರಕರಣಕ್ಕೆ ಕ್ಷಣಕ್ಕೊಂದು ಟ್ವಿಸ್ಟ್‌ ಸಿಗುತ್ತಿದೆ. ಸ್ವಾಮೀಜಿ ಹನಿಟ್ರ್ಯಾಪ್‌ಗೆ (Honey Trap) ವ್ಯವಸ್ಥಿತವಾಗಿ ಸಂಚು ರೂಪಿಸಲಾಗಿದ್ದು, ಪಕ್ಕಾ ಪ್ಲ್ಯಾನ್‌ ಮಾಡಿ ಶ್ರೀಗಳನ್ನು ಖೆಡ್ಡಾಗೆ ಕೆಡವಿದ್ರಾ ಎಂಬ ಅನುಮಾನ ಈಗ ವ್ಯಕ್ತವಾಗಿದೆ. ಶ್ರೀಗಳದ್ದು ಕೇವಲ ಒಂದೇ ಒಂದು ವಿಡಿಯೋ ಅಲ್ಲ, ಬ್ಲಾಕ್‌ಮೇಲರ್ಸ್‌ 20 ವಿಡಿಯೋ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. 20 ಹನಿಟ್ರ್ಯಾಪ್‌ ವಿಡಿಯೋ ಇಟ್ಟಕೊಂಡು ಸ್ವಾಮೀಜಿಗೆ ಬೆದರಿಕೆ ಹಾಕಲಾಗಿತ್ತು ಎನ್ನಲಾಗಿದೆ. ಡೆತ್‌ನೋಟ್‌ನಲ್ಲಿ ಕೆಲವರು ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ನನಗೆ ಯಾರ ಸಹಾಯವೂ ಇರಲಿಲ್ಲ. ಕೆಲವರಿಂದ ಬೆದರಿಕೆ ಕರೆಗಳೂ ಬಂದಿವೆ ಎಂದು ಶ್ರೀಗಳು ಉಲ್ಲೇಖಿಸಿದ್ದಾರೆ ಎಂದು ಹೇಳಲಾಗಿದೆ.  ಈ ಕುರಿತ ಕಂಪ್ಲೀಟ್‌ ವರದಿ ಇಲ್ಲಿದೆ 

ಸ್ವಾಮೀಜಿಯ ಸಾವಿಗೆ ಕಾರಣವಾಯ್ತಾ ಆ ವಿಡಿಯೋ? ಹನಿಟ್ರ್ಯಾಪ್‌ಗೆ ಒಳಗಾದ್ರಾ ಬಂಡೆ ಮಠದ ಸ್ವಾಮೀಜಿ?

Video Top Stories