Asianet Suvarna News Asianet Suvarna News

ಶಿವಮೊಗ್ಗದಲ್ಲಿ ಯುವಕನ ಮೇಲೆ ಅಟ್ಯಾಕ್: ಹರ್ಷ ಹತ್ಯೆಯ ಆರೋಪಿಗೆ ಇದೆ ಲಿಂಕ್?

ಮಲೆನಾಡಿನಲ್ಲಿ ಮತ್ತೆ ದುಷ್ಕರ್ಮಿಗಳ ಅಟ್ಟಹಾಸ ಶುರುವಾಗಿದ್ದು, ಹರ್ಷನ ಕೊಲೆ ನಂತರವೂ ದಾಂಧಲೆ ಮುಂದುವರೆದಿದೆ.
 

First Published Oct 26, 2022, 12:54 PM IST | Last Updated Oct 26, 2022, 12:54 PM IST

ಶಿವಮೊಗ್ಗದ ಭರ್ಮಪ್ಪ ನಗರದಲ್ಲಿ ಪ್ರಕಾಶ್ ಎಂಬ ಯುವಕನ ಮೇಲೆ ಅಟ್ಯಾಕ್ ಮಾಡಲಾಗಿದ್ದು, ಹರ್ಷ ಹತ್ಯೆಯ A1 ಆರೋಪಿ ಖಾಸೀಫ್‌'ಗೂ ಇದಕ್ಕೂ ಲಿಂಕ್ ಇದೆ ಎನ್ನಲಾಗಿದೆ. ಹರ್ಷನ ಹತ್ಯೆ ಮಾಡಿದ ಖಾಸೀಫ್ ಸಹೋದರ ಫರ್ಹಾಜ್ 5 ಜನರ ಗ್ಯಾಂಗ್ ಜೊತೆ ಸೇರಿ ಈ ಅಟ್ಯಾಕ್ ಮಾಡಿದ್ದು, ಈತ 2020ರ ಜೀವನ್ ಮರ್ಡರ್ ಕೇಸ್ ನಲ್ಲಿ ಆರೋಪಿಯಾಗಿದ್ದು, ಹಾಗೂ ಇವನ ವಿರುದ್ಧ ರಾಬರಿ, ದರೋಡೆ, ಮರ್ಡರ್ ಸೇರಿ ನಾಲ್ಕಕ್ಕೂ ಹೆಚ್ಚು ಕೇಸ್ ಇವೆ. ಫರ್ಹಾಜ್'ಗೆ ಕ್ರಿಮಿನಲ್ ಮಾರ್ಕೆಟ್ ಫೌಜಾನ್, ಅಜರ್ ಗ್ಯಾಂಗ್ ಸಾಥ್ ನೀಡಿದೆ.

AICC ಗಾದಿ ಏರಿ ಭಾವುಕರಾದ ಖರ್ಗೆ: ರಾಜೀನಾಮೆ ಸಲ್ಲಿಸಿದ ಪದಾಧಿಕಾರಿಗಳು

Video Top Stories