Asianet Suvarna News Asianet Suvarna News

ವಿಶ್ವ ವಿಕಲಚೇತನರ ವ್ಹೀಲ್‌ಚೇರ್ ಕ್ರಿಕೆಟ್‌ ಚಾಂಪಿಯನ್‌ಶಿಪ್‌ ಪ್ರೋಮೋ ರಿಲೀಸ್

ಡಿಸೆಂಬರ್‌ನಲ್ಲಿ ನಡೆಯಲಿರುವ ಈ ಟೂರ್ನಿಗೆ ಮಹರಾಷ್ಟ್ರ, ಡೆಲ್ಲಿ, ಬರೋಡ ಹಾಗೂ ಉತ್ತರಪ್ರದೇಶ ಆತಿಥ್ಯವನ್ನು ವಹಿಸಿದೆ. ಇನ್ನು ಈ ಟೂರ್ನಿಯಲ್ಲಿ ಉತ್ತರಖಂಡ, ತೆಲಂಗಾಣ, ತಮಿಳುನಾಡು, ಮಧ್ಯಪ್ರದೇಶ, ರಾಜಸ್ಥಾನ, ಗುಜರಾತ್, ಹರ್ಯಾಣ ಹಾಗೂ ಒಡಿಶಾ ತಂಡಗಳು ಪಾಲ್ಗೊಳ್ಳಲಿವೆ. 

ನವದೆಹಲಿ(ನ.15): ಕೊರೋನಾ ದುಸ್ವಪ್ನದ ನಡುವೆ 13ನೇ ಆವೃತ್ತಿಯ ಐಪಿಎಲ್ ಟೂರ್ನಿ ಯಶಸ್ವಿಯಾದ ಬೆನ್ನಲ್ಲೇ ಭಾರತದ ದಿವ್ಯಾಂಗ ಕ್ರಿಕೆಟ್ ನಿಯಂತ್ರಣ ಮಂಡಳಿಯು ವಿಶ್ವ ವಿಕಲಚೇತನರ ವ್ಹೀಲ್‌ಚೇರ್ ಕ್ರಿಕೆಟ್ ಚಾಂಪಿಯನ್‌ಶಿಪ್ 2020 ಆಯೋಜಿಸಿದೆ.

ಡಿಸೆಂಬರ್‌ನಲ್ಲಿ ನಡೆಯಲಿರುವ ಈ ಟೂರ್ನಿಗೆ ಮಹರಾಷ್ಟ್ರ, ಡೆಲ್ಲಿ, ಬರೋಡ ಹಾಗೂ ಉತ್ತರಪ್ರದೇಶ ಆತಿಥ್ಯವನ್ನು ವಹಿಸಿದೆ. ಇನ್ನು ಈ ಟೂರ್ನಿಯಲ್ಲಿ ಉತ್ತರಖಂಡ, ತೆಲಂಗಾಣ, ತಮಿಳುನಾಡು, ಮಧ್ಯಪ್ರದೇಶ, ರಾಜಸ್ಥಾನ, ಗುಜರಾತ್, ಹರ್ಯಾಣ ಹಾಗೂ ಒಡಿಶಾ ತಂಡಗಳು ಪಾಲ್ಗೊಳ್ಳಲಿವೆ. 

ಕೋಟ್ಯಾಂತರ ಜನರ ಪಾಲಿಗೆ ಸ್ಪೂರ್ತಿಯ ಚಿಲುಮೆಯಾದ ಸಚಿನ್‌ ತೆಂಡುಲ್ಕರ್‌ಗೆ ಬಿಸಿಸಿಐ ಧನ್ಯವಾದ

ವಿಶ್ವ ವಿಕಲಚೇತನರ ವ್ಹೀಲ್‌ಚೇರ್ ಕ್ರಿಕೆಟ್ ಚಾಂಪಿಯನ್‌ಶಿಪ್ 2020 ಆಡಲು ಎಲ್ಲಾ ಆಟಗಾರರು ಸಜ್ಜಾಗಿದ್ದು, ಭಾರತದ ದಿವ್ಯಾಂಗ ಕ್ರಿಕೆಟ್ ನಿಯಂತ್ರಣ ಮಂಡಳಿಯು ಟೂರ್ನಿಯ ಕುರಿತಂತೆ ಪ್ರೋಮೋ ಬಿಡುಗಡೆ ಮಾಡಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
 
Video Top Stories