Asianet Suvarna News Asianet Suvarna News

ಬಾಂಗ್ಲಾ ಎದುರು ಟೀಂ ಇಂಡಿಯಾ ಗೆಲುವಿನ ನಾಗಾಲೋಟ ಮುಂದುವರೆಸುತ್ತಾ..?

ಟೀಂ ಇಂಡಿಯಾ ಇದುವರೆಗೂ ಬಾಂಗ್ಲಾ ವಿರುದ್ಧ 8 ಟಿ20 ಪಂದ್ಯಗಳನ್ನಾಡಿದ್ದು, ಎಂಟರಲ್ಲೂ ಗೆಲುವಿನ ನಗೆ ಬೀರಿದ್ದು, ಈ ಗೆಲುವಿನ ನಾಗಾಲೋಟ ಮುಂದುವರೆಸುವ ವಿಶ್ವಾಸದಲ್ಲಿದೆ. ರೋಹಿತ್ ಶರ್ಮಾ ನೇತೃತ್ವದ ಯುವ ಟೀಂ ಇಂಡಿಯಾ ಗೆಲುವಿನೊಂದಿಗೆ ಸರಣಿ ಶುಭಾರಂಭ ಮಾಡಲು ಎದುರು ನೋಡುತ್ತಿದೆ.

First Published Nov 3, 2019, 4:56 PM IST | Last Updated Nov 3, 2019, 4:56 PM IST

ನವದೆಹಲಿ[ನ.03]: ಭಾರತ-ಬಾಂಗ್ಲಾದೇಶ ನಡುವಿನ ಮೊದಲ ಟಿ20 ಪಂದ್ಯ ಆರಂಭಕ್ಕೆ ಕೌಂಟ್ ಡೌನ್ ಶುರುವಾಗಿದೆ. ಆದರೆ ಉಭಯ ತಂಡಗಳಿಗೆ ಡೆಲ್ಲಿಯಲ್ಲಿ ಮುಸುಕಿರುವ ಹೊಗೆಯದ್ದೇ ತಲೆನೋವಾಗಿ ಪರಿಣಮಿಸಿದೆ.

ದೆಹಲಿ ಮಾಲಿನ್ಯಕ್ಕೆ ಬಿಸಿಸಿಐ ಕಂಗಾಲು, ಮೊದಲ ಪಂದ್ಯ ರದ್ದಾಗೋ ಭೀತಿ!

ಟೀಂ ಇಂಡಿಯಾ ಇದುವರೆಗೂ ಬಾಂಗ್ಲಾ ವಿರುದ್ಧ 8 ಟಿ20 ಪಂದ್ಯಗಳನ್ನಾಡಿದ್ದು, ಎಂಟರಲ್ಲೂ ಗೆಲುವಿನ ನಗೆ ಬೀರಿದ್ದು, ಈ ಗೆಲುವಿನ ನಾಗಾಲೋಟ ಮುಂದುವರೆಸುವ ವಿಶ್ವಾಸದಲ್ಲಿದೆ. ರೋಹಿತ್ ಶರ್ಮಾ ನೇತೃತ್ವದ ಯುವ ಟೀಂ ಇಂಡಿಯಾ ಗೆಲುವಿನೊಂದಿಗೆ ಸರಣಿ ಶುಭಾರಂಭ ಮಾಡಲು ಎದುರು ನೋಡುತ್ತಿದೆ.'

ಭಾರತ-ಬಾಂಗ್ಲಾ ಟಿ20: ಕನ್ನಡಿಗರಿಗೆ ಸಿಗುತ್ತಾ ಚಾನ್ಸ್..?

2018ರ ಮಾರ್ಚ್ 18ರಂದು ಶ್ರೀಲಂಕಾದಲ್ಲಿ ನಡೆದ ನಿದಾಸ್ ಟ್ರೋಫಿ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಉಭಯ ತಂಡಗಳು ಮುಖಾಮುಖಿಯಾಗಿದ್ದವು. ರೋಚಕತೆಯಿಂದ ಕೂಡಿದ್ದ ಪಂದ್ಯದಲ್ಲಿ ಕಾರ್ತಿಕ್ ವಿರೋಚಿತ ಗೆಲುವು ತಂದುಕೊಟ್ಟಿದ್ದರು. ಈಗ ಉಭಯ ತಂಡಗಳ ಬಲಾಬಲ ಹೇಗಿದೆ ಎನ್ನುವುದರ ವಿಶ್ಲೇಷಣೆ ಇಲ್ಲಿದೆ ನೋಡಿ...     

 

Video Top Stories