Asianet Suvarna News Asianet Suvarna News

ಧೋನಿ ಹೊಗಳಿ ಕ್ಯಾಪ್ಟನ್ ಕೊಹ್ಲಿ ತೆಗಳಿದ ಗೌತಮ್ ಗಂಭೀರ್..!

ಟೀಂ ಇಂಡಿಯಾ ನಾಯಕ ಕೊಹ್ಲಿ ವಿರುದ್ಧ ಅವಕಾಶ ಸಿಕ್ಕಾಗಲೆಲ್ಲಾ ಗಂಭೀರ್ ಕಿಡಿಕಾರುತ್ತಲೇ ಬಂದಿದ್ದಾರೆ. ವಾರದಲ್ಲಿ ಏನಿಲ್ಲ ಎಂದರೂ ಮೂರು ಬಾರಿ ಕೊಹ್ಲಿ ವಿರುದ್ಧ ಗೌತಮ್ ಗಂಭೀರ್ ವಾಗ್ದಾಳಿ ನಡೆಸುತ್ತಲೇ ಬಂದಿದ್ದಾರೆ.

ಬೆಂಗಳೂರು(ಜೂ.20): ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿಯನ್ನು ಸದ್ಯ ಯಾರಾದರೂ ಬಯ್ಯುವವರಿದ್ದಾರೆ ಎಂದರೆ ಅದು ಬೇರೆ ಯಾರು ಅಲ್ಲ ಮಾಜಿ ಕ್ರಿಕೆಟಿಗ ಹಾಗೂ ಹಾಲಿ ಸಂಸದ ಗೌತಮ್ ಗಂಭೀರ್.

ಟೀಂ ಇಂಡಿಯಾ ನಾಯಕ ಕೊಹ್ಲಿ ವಿರುದ್ಧ ಅವಕಾಶ ಸಿಕ್ಕಾಗಲೆಲ್ಲಾ ಗಂಭೀರ್ ಕಿಡಿಕಾರುತ್ತಲೇ ಬಂದಿದ್ದಾರೆ. ವಾರದಲ್ಲಿ ಏನಿಲ್ಲ ಎಂದರೂ ಮೂರು ಬಾರಿ ಕೊಹ್ಲಿ ವಿರುದ್ಧ ಗೌತಮ್ ಗಂಭೀರ್ ವಾಗ್ದಾಳಿ ನಡೆಸುತ್ತಲೇ ಬಂದಿದ್ದಾರೆ.

ಸುಷಾಂತ್ ಸಿಂಗ್ ರಜಪೂತ್ ಇಲ್ಲದೇ ಧೋನಿ-2 ಸಾಧ್ಯವಿಲ್ಲ..!

ಒಂದು ಕಾಲದಲ್ಲಿ ದೋಸ್ತಿಗಳಾಗಿದ್ದ ಕೊಹ್ಲಿ-ಗಂಭೀರ್ ಇದೀಗ ಹಾವು-ಮುಂಗುಸಿಯಂತೆ ಆಡಲಾರಂಭಿಸಿದ್ದಾರೆ. ಧೋನಿ ಮೂರನೇ ಕ್ರಮಾಂಕದಲ್ಲಿ ಆಡಿದ್ರೆ ಅದೆಷ್ಟೋ ದಾಖಲೆಗಳನ್ನು ನಿರ್ಮಿಸಬಹುದಿತ್ತು. ಆದರೆ ತಂಡದ ಅಗತ್ಯಕ್ಕನುಗುಣವಾಗಿ ಬೇರೆ ಬೇರೆ ಕ್ರಮಾಂಕದಲ್ಲಿ ಧೋನಿ ಆಡಿದ್ದಾರೆ ಎನ್ನುವ ಮೂಲಕ ಗಂಭೀರ್ ಕ್ಯಾಪ್ಟನ್ ಕೊಹ್ಲಿ ಕಾಲೆಳೆದಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.