Asianet Suvarna News Asianet Suvarna News

ಇನ್ನಾದರೂ ಟೀಂ ಇಂಡಿಯಾದಲ್ಲಿ ಪಾಂಡೆಗೆ ಸಿಗುತ್ತಾ ಖಾಯಂ ಸ್ಥಾನ..?

ಮನೀಶ್ ಪಾಂಡೆ ಟೀಂ ಇಂಡಿಯಾ ನಾಲ್ಕನೇ ಕ್ರಮಾಂಕದ ಮೇಲೆ ಕಣ್ಣಿಟ್ಟಿದ್ದಾರೆ. ವಿಜಯ್ ಹಜಾರೆ ಟ್ರೋಫಿಯಲ್ಲಿ ಅಬ್ಬರಿಸುತ್ತಿರುವ ಮನೀಶ್ ಪಾಂಡೆಗೆ ಇನ್ನಾದರೂ ಟೀಂ ಇಂಡಿಯಾದಲ್ಲಿ ಖಾಯಂ ಸ್ಥಾನ ಸಿಗುತ್ತಾ ಎನ್ನುವುದರ ಬಗೆಗಿನ ವಿಶ್ಲೇಷಣೆ ಇಲ್ಲಿದೆ ನೋಡಿ...

ಬೆಂಗಳೂರು[ಅ.17]: ಮನೀಶ್ ಪಾಂಡೆ ದೇಶಿ ಕ್ರಿಕೆಟ್’ನಲ್ಲಿ ದಶಕಗಳಿಂದಲೂ ರನ್ ಹೊಳೆಯನ್ನೇ ಹರಿಸುತ್ತಿದ್ದಾರೆ. ಆದರೂ ಟೀಂ ಇಂಡಿಯಾದಲ್ಲಿ ಖಾಯಂ ಸದಸ್ಯ ಸ್ಥಾನ ಮಾತ್ರ ದಕ್ಕಿಲ್ಲ. 

ಟೀಂ ಇಂಡಿಯಾದ ಇಬ್ಬರು ಕ್ರಿಕೆಟಿಗರಿಗೆ ಮದುವೆ ಫಿಕ್ಸ್!

ಹಾಲಿ ನಡೆಯುತ್ತಿರುವ ವಿಜಯ್ ಹಜಾರೆ ಟ್ರೋಫಿಯಲ್ಲೂ ಪಾಂಡೆ ಬ್ಯಾಟ್ ಅಬ್ಬರಿಸಿದೆ. ಹೀಗಿರುವ ಟೀಂ ಇಂಡಿಯಾ ಮಧ್ಯಮ ಕ್ರಮಾಂಕದ ಸಮಸ್ಯೆಗೆ ಪಾಂಡೆ ಉತ್ತರವಾಗಬಲ್ಲರಾ ಎನ್ನುವುದು ಸದ್ಯದ ಕುತೂಹಲ.

ಪಾಂಡೆ ವಿಜಯ್ ಹಜಾರೆ ಟೂರ್ನಿಯಲ್ಲಿ 8 ಪಂದ್ಯಗಳನ್ನಾಡಿ ನೂರರ ಸರಾಸರಿಯಲ್ಲಿ 500ಕ್ಕೂ ಅಧಿಕ ರನ್ ಬಾರಿಸಿದ್ದಾರೆ. ಈ ಮೂಲಕ ನಾಲ್ಕನೇ ಕ್ರಮಾಂಕದ ಪ್ರಬಲ ಸ್ಪರ್ಧಿ ಎಂದು ಆಯ್ಕೆಗಾರರಿಗೆ ಬ್ಯಾಟ್ ಮೂಲಕವೇ ಉತ್ತರಿಸಿದ್ದಾರೆ. ಇನ್ನಾದರೂ ಪಾಂಡೆಗೆ ಖಾಯಂ ಸ್ಥಾನ ಸಿಗುತ್ತಾ ಎನ್ನುವುದು ಕಾಲವೇ ಉತ್ತರಿಸಬೇಕಿದೆ. 
 

Video Top Stories