Asianet Suvarna News Asianet Suvarna News

'ಥ್ಯಾಂಕ್ಯೂ ಕಿಚ್ಚ' ಎಂದು ಸೆಹ್ವಾಗ್‌ ಹೇಳಿದ್ದೇಕೆ?

-ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದೆ ಕಿಚ್ಚನಿಗೆ ಧನ್ಯವಾದ ತಿಳಿಸಿದ ಸೆಹ್ವಾಗ್‌
-ಅಭಿನಯ ಚಕ್ರವರ್ತಿಗೆ  ಪ್ರೀತಿಗೆ 'ಥ್ಯಾಂಕ್ಯೂ ಕಿಚ್ಚ' ಎಂದ ವೀರು
-ಕಿಚ್ಚ ಮತ್ತು  ಸೆಹ್ವಾಗ್‌ ಮಧ್ಯೆ ಇದೆ ಬಿಡಿಸಲಾಗದ ಸ್ನೇಹ!

First Published Oct 22, 2021, 11:58 AM IST | Last Updated Oct 22, 2021, 12:07 PM IST

ಅಭಿಯನಯ ಚಕ್ರವರ್ತಿ ಕಿಚ್ಚಾ ಸುದೀಪ್‌ (kichcha Sudeep) ಮತ್ತು ವಿರೇಂದ್ರ ಸೆಹ್ವಾಗ್ (Virender Sehwag) ಮಧ್ಯೆ ಬಿಡಿಸಲಾಗದ ಸ್ನೇಹ ಇದೆ. ಕಿಚ್ಚನ ಮೇಲಿನ ಪ್ರೀತಿಗೆ ವಿರೇಂದ್ರ ಸೆಹ್ವಾಗ್ ಕೆಸಿಸಿ ಕ್ರಿಕೆಟ್‌ ಟೂರ್ನಿಯಲ್ಲಿ ಭಾಗವಹಿಸಿದ್ದರು. ಈಗ ಸುದೀಪ್‌ ಪ್ರೀತಿಗೆ ಮನಸೋತ ಸೆಹ್ವಾಗ್‌,  ಅಭಿನಯ ಚಕ್ರವರ್ತಿಗೆ ಧನ್ಯವಾದ ತಿಳಿಸಿದ್ದಾರೆ.  

ಅಕ್ಟೋಬರ್‌ 20 ರಂದು ವಿರೇಂದ್ರ ಸೆಹ್ವಾಗ್‌ ಜನ್ಮದಿನ (Birthday), ಆ ದಿನ ನೆನಪಿನಲ್ಲಿಟ್ಟುಕೊಂಡು ಕಿಚ್ಚಾ ಸುದೀಪ್ ಟ್ವೀಟರ್‌ನಲ್ಲಿ (twitter) ಶುಭಾಶಯ ಹೇಳಿದ್ದಾರೆ.  ಕಿಚ್ಚನ ಪ್ರೀತಿಯ ಟ್ವೀಟ್‌ಗೆ ರಿಪ್ಲೈ  ಮಾಡಿರುವ ವಿರೇಂದ್ರ ಸೆಹ್ವಾಗ್‌ 'ಥ್ಯಾಂಕ್ಯು ಕಿಚ್ಚಾ',  ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಾವಿಬ್ಬರು ಬ್ಯಾಟಿಂಗ್‌ ಮಾಡಿದ ಆ ದಿನಗಳು ನನಗೆ ಇನ್ನೂ ನೆನಪಿವೆ. ಆಲ್‌ ದಿ ಬೆಸ್ಟ್‌ ಕಿಚ್ಚಾ ಎಂದ ಹೇಳಿದ್ದಾರೆ. ಕಿಚ್ಚಾ ಮತ್ತು ವಿರೇಂದ್ರ ಟ್ವೀಟ್‌ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ವಿವಾಹ ವಾರ್ಷಿಕೋತ್ಸವದ ಖುಷಿಯಲ್ಲಿ ಮಿಂದೆದ್ದ ಸುದೀಪ್ ದಂಪತಿ

ಕೋಟಿಗೊಬ್ಬ 3 ಸಿನಿಮಾದ ಸಂಭ್ರಮದಲ್ಲಿರುವ ಕಿಚ್ಚಾ ʼವಿಷಿಂಗ್‌ ಯು ದ ಬೆಸ್ಟ್‌ ಆಲ್ವೇಸ್ ವಿರೇಂದ್ರ ಸೆಹ್ವಾಗ್‌ ಸರ್‌, ಹ್ಯಾಪಿ ರಿಟರ್ನ್ಸ್‌ʼಎಂದು ಟ್ವೀಟರ್‌ನಲ್ಲಿ ಹುಟ್ಟುಹಬ್ಬದ   ಶುಭಾಶಯ ಕೋರಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಸೆಹ್ವಾಗ್ ಕಿಚ್ಚನಿಗೆ ಧನ್ಯವಾದ ತಿಳಿಸಿದ್ದರು. ಇತ್ತೀಚೆಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್  ಮತ್ತು ಪ್ರಿಯಾ (Priya) ವೈವಾಹಿಕ ಜೀವನಕ್ಕೆ 20 ವರ್ಷ ತುಂಬಿದ್ದು, ಅಕ್ಟೋಬರ್‌ 19 ರಂದು  ಈ ಸಂಭ್ರಮವನ್ನು (Celebration) ಅವರು ಒಟ್ಟಾಗಿ ಆಚರಿಸಿದ್ದರು. 

Video Top Stories