Asianet Suvarna News Asianet Suvarna News

ವಿಶ್ವ ಕ್ರಿಕೆಟ್‌ನ 'ಕಾಮಿಡಿ ಪೀಸ್' ಪಾಕಿಸ್ತಾನ..!

ಪಾಕಿಸ್ತಾನದ ಆಟಗಾರರ ಫನ್ನಿ ಕ್ರಿಕೆಟ್ ಕ್ಷಣಗಳಿಗೆ ಕ್ರಿಕೆಟ್ ಅಭಿಮಾನಿಗಳು ಸಾಕ್ಷಿಯಾಗಿದ್ದಾರೆ. ಅದು ರನೌಟ್ ಓಡುವಾಗ, ಕ್ಯಾಚ್ ಹಿಡಿಯುವಾಗ ಎಡವಟ್ಟು ಮಾಡಿಕೊಳ್ಳುವ ಮೂಲಕ ಕಾಮಿಡಿ ಪೀಸ್‌ಗಳು ಎನಿಸಿಕೊಂಡಿದ್ದಾರೆ.

ಪೋಚೆಫ್‌ಸ್ಟ್ರೋಮ್‌(ಫೆ.05): ಹಿರಿಯಕ್ಕನ ಚಾಳಿ ಮನೆ ಮಂದಿಗೆಲ್ಲಾ ಎನ್ನುವ ಮಾತುಗಳು ಅಕ್ಷರಶಃ ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಒಪ್ಪುತ್ತದೆ. ಪಾಕಿಸ್ತಾನ ಸೀನಿಯರ್ ಟೀಂ ನಂತೆ ಜೂನಿಯರ್ಸ್ ತಂಡವು ಎಡವಟ್ಟಿನ ರನೌಟ್ ಆಗುವ ಮೂಲಕ ಕ್ರಿಕೆಟ್ ಜಗತ್ತಿನಲ್ಲಿ ನಗೆಪಾಟಲಿಗೆ ಈಡಾಗಿದೆ.

ಅಂಡರ್ 19 ವಿಶ್ವಕಪ್: ನಮ್ಮ ಹುಡುಗರು ಪಾಕ್ ಬಗ್ಗುಬಡಿದಿದ್ದು ಹೇಗೆ..?

ಹೌದು, ಪಾಕಿಸ್ತಾನದ ಆಟಗಾರರ ಫನ್ನಿ ಕ್ರಿಕೆಟ್ ಕ್ಷಣಗಳಿಗೆ ಕ್ರಿಕೆಟ್ ಅಭಿಮಾನಿಗಳು ಸಾಕ್ಷಿಯಾಗಿದ್ದಾರೆ. ಅದು ರನೌಟ್ ಓಡುವಾಗ, ಕ್ಯಾಚ್ ಹಿಡಿಯುವಾಗ ಎಡವಟ್ಟು ಮಾಡಿಕೊಳ್ಳುವ ಮೂಲಕ ಕಾಮಿಡಿ ಪೀಸ್‌ಗಳು ಎನಿಸಿಕೊಂಡಿದ್ದಾರೆ.

ಪಾಕ್‌ಗೆ ಮಿಸುಕಾಡಲು ಬಿಡದ ಹುಡುಗರು, ಅಂಡರ್-19 ಫೈನಲ್‌ಗೆ ಭಾರತ

ಇದೀಗ ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಪಾಕ್ ಕಿರಿಯರ ತಂಡ, ಸೀನಿಯರ್ಸ್ ತಂಡವನ್ನೇ ಅನುಕರಿಸಿದ್ದಾರೆ. ಅಷ್ಟಕ್ಕೂ ಏನಾಯ್ತು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ... 
 

Video Top Stories