Asianet Suvarna News Asianet Suvarna News

'ಕೊರೋನಾದಿಂದ ಕೆನಡಾದಲ್ಲೂ ಕನ್ನಡಿಗರು ಸೇಫ್': ಕನ್ನಡತಿ ಗೀತಾ

ಕೆನಡಾ ಸರ್ಕಾರ ಇಲ್ಲಿನ ಜನರಿಗೆ ಸಂಪೂರ್ಣ ಸಹಕಾರ ನೀಡುತ್ತಿದೆ. ಅಗತ್ಯ ವಿದ್ದಾಗ ಆರ್ಥಿಕ ಸಹಾಯವನ್ನು ನೀಡಿದೆ. ಇದರ ಜತೆಗೆ ಕಮ್ಯೂನಿಟಿ ಮಟ್ಟದಲ್ಲಿ ಕೊರೋನಾ ವೈರಸ್ ಹರಡಂತೆ ತಡೆಯಲು ಸರ್ಕಾರ ಸಾಕಷ್ಟು ಮುನ್ನೆಚ್ಚರಿಕಾ ಕ್ರಮವನ್ನು ತೆಗೆದುಕೊಂಡಿದೆ. ಜನರಿಗೂ ಈ ಬಗ್ಗೆ ಕೆನಡಾ ಸರ್ಕಾರ ಅರಿವು ಮೂಡಿಸುವ ಕೆಲಸ ಮಾಡುತ್ತಿದೆ ಎಂದಿದ್ದಾರೆ.

ಟೊರೊಂಟೊ(ಮಾ.29): ಜನರು ಜವಾಬ್ದಾರಿಯಿಂದ ವರ್ತಿಸುವುದರ ಜತೆಗೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುತ್ತಿದ್ದಾರೆ. ಕನ್ನಡಿಗರು ಕೆನಡಾದಲ್ಲಿ ಕೊರೋನಾ ವೈರಸ್‌ನಿಂದ ಸಂಪೂರ್ಣವಾಗಿ ಸುರಕ್ಷಿತರಾಗಿದ್ದಾರೆ ಎಂದು ಕೆನಡಾದ ಟೊರೊಂಟೊದಲ್ಲಿ ನೆಲೆಸಿರುವ ಗೀತಾ ಸುವರ್ಣ ನ್ಯೂಸ್‌ಗೆ ತಿಳಿಸಿದ್ದಾರೆ.

'ಕ್ಯಾಲಿಫೋರ್ನಿಯಾದಲ್ಲಿ ಕನ್ನಡಿಗರೆಲ್ಲರೂ ಕೊರೋನಾದಿಂದ ಸೇಫ್'; ಕನ್ನಡತಿ ವಸುಧಾ ಹೇಳಿಕೆ

ಇಲ್ಲಿ ಸರ್ಕಾರ ಇಲ್ಲಿನ ಜನರಿಗೆ ಸಂಪೂರ್ಣ ಸಹಕಾರ ನೀಡುತ್ತಿದೆ. ಅಗತ್ಯವಿದ್ದಾಗ ಆರ್ಥಿಕ ಸಹಾಯವನ್ನು ನೀಡಿದೆ. ಇದರ ಜತೆಗೆ ಕಮ್ಯೂನಿಟಿ ಮಟ್ಟದಲ್ಲಿ ಕೊರೋನಾ ವೈರಸ್ ಹರಡಂತೆ ತಡೆಯಲು ಸರ್ಕಾರ ಸಾಕಷ್ಟು ಮುನ್ನೆಚ್ಚರಿಕಾ ಕ್ರಮವನ್ನು ತೆಗೆದುಕೊಂಡಿದೆ. ಜನರಿಗೂ ಈ ಬಗ್ಗೆ ಕೆನಡಾ ಸರ್ಕಾರ ಅರಿವು ಮೂಡಿಸುವ ಕೆಲಸ ಮಾಡುತ್ತಿದೆ ಎಂದಿದ್ದಾರೆ.

ಲಾಕ್‌ಡೌನ್‌ ತೆರವು ಬೆನ್ನಲ್ಲೇ, ಚೀನಾದಲ್ಲಿ ಜನರ ದೊಂಬಿ, ಗಲಾಟೆ!

ಸರ್ಕಾರದ ಆದೇಶವನ್ನು ಎಲ್ಲರೂ ಪಾಲಿಸಬೇಕು. ವರ್ಕ್ ಫ್ರಂ ಹೋಮ್ ಅವಕಾಶ ಇದೆ ಎಂದು ಪಾರ್ಟಿ ಮಾಡುವುದಲ್ಲ, ಬದಲಾಗಿ ಎಲ್ಲರೂ ಆದಷ್ಟು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಜವಾಬ್ದಾರಿಯುತವಾಗಿ ವರ್ತಿಸಿ ಎಂದು ದೇಶದ ಜನತೆಗೆ ಗೀತಾ ಮನವಿ ಮಾಡಿಕೊಂಡಿದ್ದಾರೆ.