'ಕೊರೋನಾದಿಂದ ಕ್ಯಾಲಿಫೋರ್ನಿಯಾದಲ್ಲಿ ಕನ್ನಡಿಗರೆಲ್ಲರೂ ಸೇಫ್'
ಕೊರೋನಾ ವೈರಸ್ ಭೀಕರತೆಯನ್ನು ಮೊದಲೇ ಆಲೋಚಿಸಿ ಅಮೆರಿಕಾ ಹಲವು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿದೆ. ಅದರ ಭಾಗವಾಗಿ ಅಗತ್ಯ ವಸ್ತುಗಳನ್ನು ಖರೀದಿಸಲು ಸ್ಥಳ ಹಾಗೂ ಸಮಯವನ್ನು ನಿಗದಿ ಪಡಿಸಲಾಗಿತ್ತು ಎಂದು ಕನ್ನಡತಿ ವಸುಧಾ ತಿಳಿಸಿದ್ದಾರೆ.
ಕ್ಯಾಲಿಫೋರ್ನಿಯಾ(ಮಾ.29): ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿರುವ ಕನ್ನಡಿಗರು ಕೊರೋನಾ ವೈರಸ್‌ನಿಂದ ಸೇಫಾಗಿದ್ದೀವಿ. ಅಮೆರಿಕಾದಲ್ಲಿರುವ ಉದ್ಯೋಗಿಗಳಿಗೆಲ್ಲರಿಗೂ ವರ್ಕ್ ಫ್ರಂ ಹೋಮ್ ನೀಡಲಾಗಿದೆ ಎಂದು ಸ್ಯಾನ್‌ಫ್ರಾನ್ಸಿಸ್ಕೋದಲ್ಲಿ ನೆಲೆಸಿರುವ ಕನ್ನಡತಿ ವಸುಧಾ ಹೆಗಡೆ ಸುವರ್ಣ ನ್ಯೂಸ್‌ಗೆ ತಿಳಿಸಿದ್ದಾರೆ.
ಕೊರೋನಾಗೆ ರಾಜಮನೆತನದ ಮೊದಲ ಬಲಿ, ರಾಜಕುಮಾರಿ ಸಾವು!
ಕೊರೋನಾ ವೈರಸ್ ಭೀಕರತೆಯನ್ನು ಮೊದಲೇ ಆಲೋಚಿಸಿ ಅಮೆರಿಕಾ ಹಲವು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿದೆ. ಅದರ ಭಾಗವಾಗಿ ಅಗತ್ಯ ವಸ್ತುಗಳನ್ನು ಖರೀದಿಸಲು ಸ್ಥಳ ಹಾಗೂ ಸಮಯವನ್ನು ನಿಗದಿ ಪಡಿಸಲಾಗಿತ್ತು ಎಂದು ವಸುಧಾ ತಿಳಿಸಿದ್ದಾರೆ.
ಲಾಕ್‌ಡೌನ್ ತೆರವು ಬೆನ್ನಲ್ಲೇ, ಚೀನಾದಲ್ಲಿ ಜನರ ದೊಂಬಿ, ಗಲಾಟೆ!
ಇದೇ ರೀತಿ ಎಲ್ಲರೂ ಮನೆಯಲ್ಲೇ ಉಳಿದುಕೊಂಡು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ನಮ್ಮ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದೇವೆ. ಅದೇ ರೀತಿ ಭಾರತದಲ್ಲಿಯೂ ಸರ್ಕಾರ ಮಾಡಿರುವ ಲಾಕ್‌ಡೌನ್ ಆದೇಶವನ್ನು ಎಲ್ಲರೂ ಪಾಲಿಸುವ ಮೂಲಕ ಕೊರೋನಾದಿಂದ ದೂರವಿರಿ ಎಂದು ಕನ್ನಡತಿ ವಸುಧಾ ಹೆಗಡೆ ದೇಶದ ಜನರಿಗೆ ಮನವಿ ಮಾಡಿಕೊಂಡಿದ್ದಾರೆ.