ಕೊರೋನಾ ಭೀತಿಯ ನಡುವೆ ವಿದ್ಯುತ್ ಗ್ರಾಹಕರಿಗೆ ರಿಲೀಫ್..!
ಮೊದಲೇ ಕೊರೋನಾ ವೈರಸ್‌ನಿಂದ ತತ್ತರಿಸಿ ಹೋಗಿರುವ ರಾಜ್ಯದ ಜನತೆಯ ಪಾಲಿಗೆ ಇಂಧನ ಇಲಾಖೆ ಸಮಾಧಾನಕರ ಸುದ್ದಿಯೊಂದನ್ನು ನೀಡಿದ್ದು, ಸದ್ಯ ವಿದ್ಯುತ್ ದರ ಪರಿಷ್ಕರಣೆಯನ್ನು ಮುಂದೂಡಿದೆ. ಈ ಮೂಲಕ ವಿದ್ಯುತ್ ಗ್ರಾಹಕರು ನಿರಾಳವಾಗುವಂತೆ ಮಾಡಿದ್ದಾರೆ.
ಬೆಂಗಳೂರು(ಮಾ.28): ಮೊದಲೇ ಕೊರೋನಾ ವೈರಸ್‌ನಿಂದ ತತ್ತರಿಸಿ ಹೋಗಿರುವ ರಾಜ್ಯದ ಜನತೆಯ ಪಾಲಿಗೆ ಇಂಧನ ಇಲಾಖೆ ಸಮಾಧಾನಕರ ಸುದ್ದಿಯೊಂದನ್ನು ನೀಡಿದ್ದು, ಸದ್ಯ ವಿದ್ಯುತ್ ದರ ಪರಿಷ್ಕರಣೆಯನ್ನು ಮುಂದೂಡಿದೆ. ಈ ಮೂಲಕ ವಿದ್ಯುತ್ ಗ್ರಾಹಕರು ನಿರಾಳವಾಗುವಂತೆ ಮಾಡಿದ್ದಾರೆ.
ಕೊರೋನಾ ತಾಂಡವ, ಕರುನಾಡಿನ ಜನತೆಗೆ ಒಂದು ಸಮಾಧಾನಕರ ಸುದ್ದಿ!
ಪ್ರತಿ ಬಾರಿಯೂ ಏಪ್ರಿಲ್ ಒಂದರಿಂದ ರಾಜ್ಯಾದ್ಯಂತ ವಿದ್ಯುತ್ ದರ ಪರಿಷ್ಕರಣೆಯಾಗುತ್ತಿತ್ತು. ಆದರೆ ಇದೀಗ ಭಾರತ ಲಾಕ್‌ಡೌನ್ ಹಿನ್ನಲೆಯಲ್ಲಿ ತಾತ್ಕಾಲಿಕವಾಗಿ ದರ ಪರಿಷ್ಕರಣೆ ಮಾಡುವುದನ್ನು ಮುಂದೂಡಿದೆ. ಒಂದು ವೇಳೆ ದರ ಏರಿಕೆ ಮಾಡಿದ್ದರೆ, ಗ್ರಾಹಕರ ಪರಿಸ್ಥಿತಿ ಗಾಯದ ಮೇಲೆ ಬರೆ ಎಳೆದಂತೆ ಆಗುತಿತ್ತು. ಈಗಾಗಲೇ ಪ್ರತಿ ಯೂನಿಟ್‌ಗೆ ದರ ಹೆಚ್ಚಳ ಮಾಡುವಂತೆ ವಿದ್ಯುತ್ ಸರಬರಾಜು ಕಂಪನಿಗಳು ಇಂಧನ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದವು. ಆದರೆ ಇಂಧನ ಸಂಸ್ಥೆ ದರ ಪರಿಷ್ಕರಣೆಗೆ ತಡೆ ನೀಡಿ ಅಧಿಕೃತ ಮಾಹಿತಿ ನೀಡಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.