ಲಾಕ್‌ಡೌನ್: ಉತ್ತಮ ಇಳುವರಿ ಬಂದ್ರೂ ಮಾರಾಟ ಮಾಡೋಕಾಗ್ತಿಲ್ಲ..!
ವ್ಯಾಪಾರ ಮಾಡುವ ಸಾಧ್ಯತೆ ಇರುವಾಗ ಬೆಳೆ, ಇಳುವರಿ ಚೆನ್ನಾಗಿ ಬರುವುದಿಲ್ಲ, ಇಲ್ಲ ರೋಗ ಬಾಧೇಯಿಂದ ಬೆಳೆ ನಾಶವಾಗುವಂತಹ ಘಟನೆ ನಡೆದು ರೈತ ನಷ್ಟ ಅನುಭವಿಸುತ್ತಾನೆ.
ಚಿಕ್ಕಬಳ್ಳಾಪುರ(ಮಾ.28): ವ್ಯಾಪಾರ ಮಾಡುವ ಸಾಧ್ಯತೆ ಇರುವಾಗ ಬೆಳೆ, ಇಳುವರಿ ಚೆನ್ನಾಗಿ ಬರುವುದಿಲ್ಲ, ಇಲ್ಲ ರೋಗ ಬಾಧೇಯಿಂದ ಬೆಳೆ ನಾಶವಾಗುವಂತಹ ಘಟನೆ ನಡೆದು ರೈತ ನಷ್ಟ ಅನುಭವಿಸುತ್ತಾನೆ.
ಆದರೆ ಚಿಕ್ಕಬಳ್ಳಾಪುರದ ರೈತರೊಬ್ಬರಿಗೆ ಉತ್ತಮ ಇಳುವರಿ ಇದ್ದರೂ ಅದನ್ನು ಮಾರಾಟ ಮಾಡುವುದಕ್ಕೆ ಮಾತ್ರ ಸಾಧ್ಯವಾಗುತ್ತಿಲ್ಲ. ಕೊರೋನಾ ಭೀತಿಯಿಂದಾಗಿ ದ್ರಾಕ್ಷಿ ಕಠಾವಿಗೂ ಜನ ಸಿಗುತ್ತಿಲ್ಲ. ಹಾಗೆಯೇ ದೂರದಿಂದ ಕಾರ್ಮಿಕರು ಬರುತ್ತಿದ್ದರೂ ಲಾಕ್‌ಡೌನ್‌ನಿಂದ ಕಾರ್ಮಿಕರು ಬರಲು ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ.
COVID19 ಕೇಸ್ ಹೆಚ್ಚಳ: 200 ಕಲ್ಯಾಣ ಮಂಟಪ ಬುಕ್ ಮಾಡಿದ ಸರ್ಕಾರ
ಸರ್ಕಾರ ದ್ರಾಕ್ಷಿ ಖರೀದಿಸಬೇಕು. ಅದನ್ನು ಕೋಲ್ಡ್ ಸ್ಟೋರೆಜ್‌ನಲ್ಲಿಟ್ಟು ಆಮೇಲೆ ಮಾರಾಟ ಮಾಡಬಹುದು. ಅಥವಾ ಎಲ್ಲಾ ಮುಂಜಾಗೃತಾ ಕ್ರಮಗಳೊಂದಿಗೆ ರೈತರಿಗೆ ಬೆಳೆ ಕಠಾವಿಗೆ ಅನುವು ಮಾಡಿಕೊಡಬೇಕೆಂದು ಕೇಳಿಕೊಂಡಿದ್ದಾರೆ.