COVID19 ಕೇಸ್ ಹೆಚ್ಚಳ: 200 ಕಲ್ಯಾಣ ಮಂಟಪ ಬುಕ್ ಮಾಡಿದ ಸರ್ಕಾರ

ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಹೋಗುತ್ತಿದ್ದು ಈ ನಿಟ್ಟಿನಲ್ಲಿ ಸರ್ಕಾರ ರೋಗಿಗಳ ಚಿಕಿತ್ಸೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ.

First Published Mar 28, 2020, 3:55 PM IST | Last Updated Mar 28, 2020, 3:55 PM IST

ಬೆಂಗಳೂರು(ಮಾ.28): ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಹೋಗುತ್ತಿದ್ದು ಈ ನಿಟ್ಟಿನಲ್ಲಿ ಸರ್ಕಾರ ರೋಗಿಗಳ ಚಿಕಿತ್ಸೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ.

ಈಗಾಗಲೇ ಬೆಂಗಳೂರಿನ 200 ಕಲ್ಯಾಣ ಮಂಟಪಗಳನ್ನು ಬುಕ್ ಮಾಡಲಾಗಿದೆ. ಈ ಮೂಲಕ ಕೊರೋನಾ ಸೋಂಕಿತರ ಚಿಕಿತ್ಸೆಗೆ ಉಂಟಾಗಬಹಹುದಾದ ಸ್ಥಳದ ಅಭಾವಕ್ಕೆ ತಯಾರಿ ನಡೆಸಲಾಗಿದೆ. ಈ ಕಲ್ಯಾಣ ಮಂಟಪಗಳನ್ನು ಆಹಾರ ದಾಸ್ತಾನು ಮಾಡಲು ಬಳಸಲಾಗುತ್ತದೆ ಎಂದು ಕೆಲವು ಮೂಲಗಳು ಹೇಳುತ್ತಿದ್ದು, ಇನ್ನೊಂದಷ್ಟು ಮೂಲಗಳು ಜನರ ಹೋಂ ಕ್ವಾರೆಂಟೈನ್‌ಗೆ ಬಳಸಲಾಗುತ್ತದೆ ಎನ್ನಲಾಗುತ್ತಿದೆ.

ಕೊರೋನಾ ಭೀತಿ: ಊರಿಗೆ ಬಂದ 156 ಜನರಿಗೆ ಹೋಂ ಕ್ವಾರಂಟೈನ್

200 ಕಲ್ಯಾಣ ಮಂಟಪಗಳನ್ನು ಹೋಂ ಕ್ವಾರೆಂಟೈನ್‌ಗಾಗಿ ಬಳಸಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ. ಸೋಂಕಿತರ ಸಂಖ್ಯೆ ಹೆಚ್ಚುತಿರುವ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಸರ್ಕಾರ ಈ ನಿರ್ಧಾರ ಮಾಡಿದೆ.