Asianet Suvarna News Asianet Suvarna News

ಒಲಿಂಪಿಕ್ಸ್ ಪದಕ ವಿಜೇತ ಪಿವಿ ಸಿಂಧುಗೆ ಟಾಲಿವುಡ್ ಸ್ಟಾರ್ಸ್ ಸನ್ಮಾನ!

Aug 29, 2021, 10:09 PM IST

ಹೈದರಾಬಾದ್(ಆ.29): ಟೋಕಿಯೋ ಒಲಿಂಪಿಕ್ಸ್ ಕ್ರೀಡೆಯಲ್ಲಿ ಕಂಚಿನ ಪದಕ ವಿಜೇತ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧೂಗೆ ಟಾಲಿವುಡ್ ನಟ ನಟಿಯರು ಸನ್ಮಾನ ಮಾಡಿದ್ದಾರೆ. ಮೆಗಸ್ಟಾರ್ ಮನೆಗೆ ಪಿವಿ ಸಿಂಧೂರನ್ನು ಕರೆಸಿಕೊಂಡ ನಟ ಚಿರಂಜೀವಿ ಸನ್ಮಾನ ಮಾಡಿದರು.  

Tokyo 2020: ಒಲಿಂಪಿಕ್ಸ್‌ ಸಾಧಕರನ್ನು ಮನೆಗೆ ಕರೆಸಿ ಐಸ್‌ ಕ್ರೀಂ ಪೇ ಚರ್ಚಾ ಮಾಡಿದ ಪ್ರಧಾನಿ ಮೋದಿ..!

ನಟ ಚಿರಂಜೀವಿ ಹಾಗೂ  ನಟ ಅಲ್ಲು ಅರ್ಜುನ್‌ ತಂದೆ  ಅಲ್ಲು ಅರವಿಂದ್ ಸಿಂಧೂಗೆ ಸನ್ಮಾನ ಮಾಡಿದರು. ಸಿಂಧು ಜೊತೆ ಮೆಡಲ್ ಹಿಡಿದು ಮೆಗಾಸ್ಟಾರ್ ಹಾಗೂ ಅಕ್ಕಿನೇನಿ ಫ್ಯಾಮಿಲಿ ಫೋಟೋ ಕ್ಲಿಕ್ಕಿಸಿಕೊಂಡರು. ಇದೇ ವೇಳೆ ಸಿಂಧೂಗೆ ದುರ್ಗಾ ದೇವಿ ಮೂರ್ತಿ ನೀಡಿ,  ಮತ್ತಷ್ಟು ಧೈರ್ಯ ಹಾಗೂ ಶಕ್ತಿ ಸಿಗಲಿ ಎಂದು ಚಿರಂಜೀವಿ ಹಾರೈಸಿದರು.

ಮೆಗಾಸ್ಟಾರ್ ಮನೆಯಲ್ಲಿ ನಡೆದ ಸುಂದರ ಸನ್ಮಾನ ಕಾರ್ಯಕ್ರಮದಲ್ಲಿ ನಟರಾದ ರಾಣಾದಗ್ಗುಬಾಟಿ ಹಾಗೂ ನಾಗಾರ್ಜುನ್, ರಾಧಿಕಾ ಶರತ್ ಕುಮಾರ್,  ಸುಹಾಸಿನಿ  ಸೇರಿದಂತೆ ಹಲವು ಸ್ಟಾರ್ ಪಾಲ್ಗೊಂಡಿದ್ದರು.