ವಿವಾದದ ಕಿಚ್ಚು ಹತ್ತಿಸಿದೆ ಕಿಚ್ಚ ಕತ್ತರಿಸಿದ ಕೇಕ್; ಮ್ಯಾಕ್ಸ್ ಸಕ್ಸಸ್ ಬೆನ್ನಲ್ಲೇ ದರ್ಶನ್ಗೆ ಕಿಚ್ಚನ ಚಾಲೆಂಜ್
ಕಿಚ್ಚ ಸುದೀಪ್ ಅವರ 'ಮ್ಯಾಕ್ಸ್' ಸಿನಿಮಾ ಭರ್ಜರಿ ಓಪನಿಂಗ್ ಪಡೆದು 8.5 ಕೋಟಿ ಕಲೆಕ್ಷನ್ ಮಾಡಿದೆ. ಆದರೆ, ಚಿತ್ರತಂಡದ ಕೇಕ್ ಕಟಿಂಗ್ ಸಮಾರಂಭವು ದರ್ಶನ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. 'ಬಾಸಿಸಂ ಕಾಲ ಮುಗೀತು' ಎಂಬ ಸಾಲುಗಳು ವಿವಾದಕ್ಕೆ ಕಾರಣ.
ಕಿಚ್ಚ ಸುದೀಪ್ ನಟನೆಯ ಮ್ಯಾಕ್ಸ್ ಸಿನಿಮಾ ಮೆಗಾ ಓಪನಿಂಗ್ ಪಡೆದುಕೊಂಡಿದೆ. ಸಿನಿಮಾಗೆ ಸಖತ್ ಪಾಸಿಟಿವ್ ರಿವ್ಯೂಸ್ ಬರ್ತಾ ಇದ್ದು, ಸುದೀಪ್ ಫುಲ್ ಖುಷ್ ಆಗಿದ್ದಾರೆ. ಇದೇ ಖುಷಿಯಲ್ಲಿ ಚಿತ್ರತಂಡದ ಜೊತೆ ಪಾರ್ಟಿ ಮಾಡಿರೋ ಕಿಚ್ಚ, ಒಂದು ಕೇಕ್ ಕಟ್ ಮಾಡಿದ್ದಾರೆ. ಕಿಚ್ಚ ಕತ್ತರಿಸಿದ ಒಂದು ಕೇಕು ಈಗ ದೊಡ್ಡ ಸ್ಟಾರ್ವಾರ್ಗೆ ಕಾರಣವಾಗಿದೆ. ದರ್ಶನ್ ಫ್ಯಾನ್ಸ್ ಅಂತೂ ಕಿಚ್ಚನ ಮೇಲೆ ಕೆಂಡ ಕಾರ್ತಾ ಇದ್ದಾರೆ.ಮೊದಲ ದಿನದ ಅಂತ್ಯಕ್ಕೆ 8.5 ಕೋಟಿ ಬಾಕ್ಸಾಫೀಸ್ ಕಲೆಕ್ಷನ್ ಮಾಡಿರೋ ಸುದ್ದಿ ಬರ್ತಾ ಇದೆ. ಎರಡೂವರೇ ವರ್ಷಗಳ ಬಳಿಕ ಬಂದ ಕಿಚ್ಚನ ಸಿನಿಮಾವನ್ನ ಫ್ಯಾನ್ಸ್ ತುಂಬು ಹೃದಯದಿಂದ ಬರಮಾಡಿಕೊಂಡಿದ್ದಾರೆ.ಬಾಸಿಂಸಂ ಕಾಲ ಮುಗೀತು.. ಮ್ಯಾಕ್ಸಿಮಮ್ ಮಾಸ್ ಕಾಲ ಶುರುವಾಯ್ತು ಅಂತ ಬರೆದಿರೋ ಈ ಸಾಲುಗಳು ಕಿಡಿ ಹೊತ್ತಿಸಿವೆ. ಸಾಮಾನ್ಯವಾಗಿ ದರ್ಶನ್ ಫ್ಯಾನ್ಸ್ ತಮ್ಮ ನೆಚ್ಚಿನ ನಟನನ್ನ ಡಿ ಬಾಸ್ ಅಂತಾರೆ. ಸೋ ಬಾಸಿಸಂ ಮುಗೀತು ಅಂತ ಬರೆದಿರೋದು ಡಿ ಬಾಸ್ ಬಗ್ಗೆಯೇ ಅನ್ನೋದು ದಾಸನ ಫ್ಯಾನ್ಸ್ ಲೆಕ್ಕಾಚಾರ.
ಇನ್‌ಸ್ಟಾಗ್ರಾಂ ಫೋಟೋದಿಂದ 'ನೂರು ಜನ್ಮಕ್ಕೂ' ಅವಕಾಶ ಗಿಟ್ಟಿಸಿಕೊಂಡ ಶಿಲ್ಪಾ ಕಾಮತ್