ಸಲ್ಮಾನ್ ಸಿನಿಮಾ ಹೊಸ ರೆಕಾರ್ಡ್ : ರಿಲೀಸ್‌ಗೂ ಮೊದಲೇ 23,000 ಟಿಕೆಟ್ ಸೇಲ್ !

ಸಲ್ಮಾನ್ ಖಾನ್ ನಟನೆಯ ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಚಿತ್ರದ 23 ಸಾವಿರ ಟಿಕೆಟ್‌ಗಳು ಮಾರಾಟವಾಗಿವೆ. ಅದು ಕೂಡ ಬಿಡುಗಡೆಗೂ ಮುನ್ನವೇ ಇಷ್ಟು ಟಿಕೆಟ್‌ಗಳು ಮಾರಾಟವಾಗಿರುವುದು ಅಚ್ಚರಿಗೆ ಕಾರಣವಾಗಿದೆ.

First Published Apr 21, 2023, 5:48 PM IST | Last Updated Apr 21, 2023, 5:48 PM IST

ನಟ ಸಲ್ಮಾನ್‌ ಖಾನ್‌ ಅಭಿನಯದ ‘ಕಿಸಿ ಕಾ ಭಾಯ್ ಕಿಸಿ ಕಿ ಜಾನ್’ ಸಿನಿಮಾದ ಟಿಕೆಟ್‌ಗಳು ಬಿಡುಗಡೆಗೂ ಮುನ್ನವೇ 23 ಸಾವಿರ ಸೇಲ್‌ ಆಗಿವೆ.  ಈದ್ ಪ್ರಯುಕ್ತ ಏ. 21ರಂದು ಸಿನಿಮಾ ಬಿಡುಗಡೆಯಾಗಿದೆ.  ಐನಾಕ್ಸ್, ಪಿವಿರ್, ಸಿನೆಪೊಲೀಸ್ ಇನ್ನಿತರೆ ಕೆಲವು ಪ್ರಮುಖ ಮಲ್ಟಿಪ್ಲೆಕ್ಸ್‌ನಲ್ಲಿ ರಿಲೀಸ್‌ಗೂ ಮೊದಲೇ ಸಿನಿಮಾದ 23 ಸಾವಿರಕ್ಕೂ ಹೆಚ್ಚು ಟಿಕೆಟ್‌ಗಳು ಮಾರಾಟವಾಗಿವೆ. ಹಾಗಾಗಿ ಈ ಸಿನಿಮಾ ಪಠಾಣ್‌ ಚಿತ್ರದಂತೆ ದೊಡ್ಡ ಓಪನಿಂಗ್ ಪಡೆಯಬಹುದು ಎಂದು ನಿರೀಕ್ಷಿಸಲಾಗಿದೆ. ಈ ಚಿತ್ರದಲ್ಲಿ ರಾಮ್ ಚರಣ್, ವೆಂಕಟೇಶ್ ಗೆಸ್ಟ್ ರೋಲ್ ನಿರ್ವಹಿಸಿದ್ದಾರೆ.

ಇದನ್ನೂ ವೀಕ್ಷಿಸಿ: ವಿದೇಶಿ ಪ್ರೇಕ್ಷಕರಿಗೆ ಮೊದಲು ದರ್ಶನ ಕೊಡುತ್ತಾನೆ 'ಆದಿಪುರುಷ' !