ವಿದೇಶಿ ಪ್ರೇಕ್ಷಕರಿಗೆ ಮೊದಲು ದರ್ಶನ ಕೊಡುತ್ತಾನೆ 'ಆದಿಪುರುಷ' !
ಟ್ರಿಬೆಕಾ ಉತ್ಸವದಲ್ಲಿ ಪ್ರಭಾಸ್ ಸಿನಿಮಾ ಪ್ರೀಮಿಯರ್
ಅಮೆರಿಕಾದಲ್ಲಿ ನಡೆಯಲಿರುವ ಟ್ರಿಬೆಕಾ ಫಿಲ್ಮ್ ಫೆಸ್ಟಿವೆಲ್
ಟೀಸರ್‌ನಿಂದ ಟೀಕೆಗೆ ಗುರಿಯಾಗಿರುವ ಸಿನಿಮಾ
'ಆದಿಪುರುಷ' ಸಿನಿಮಾ ಬಗ್ಗೆ ಹೊಸ ಸುದ್ದಿಯೊಂದು ಹೊರ ಬಿದ್ದಿದೆ. ಆದಿಪುರುಷ ಸಿನಿಮಾ ಭಾರತಕ್ಕಿಂತ ಮೊದಲು ಅಮೆರಿಕಾದಲ್ಲಿ ರಿಲೀಸ್ ಆಗಲಿದೆ ಎನ್ನಲಾಗ್ತಿದೆ. ಜೂನ್ 16ರಂದು ಭಾರತದಲ್ಲಿ ಈ ಸಿನಿಮಾ ರಿಲೀಸ್ ಆಗಲಿದೆ. ಆದ್ರೆ ಇದಕ್ಕೂ ಎರಡು ದಿನ ಮೊದಲೇ ಜೂನ್ 13 ರಂದು ನ್ಯೂಯರ್ಕ್‌ನಲ್ಲಿ ನಡೆಯಲಿರುವ ಟ್ರಿಬೆಕಾ ಫೆಸ್ಟಿವಲ್‌ನಲ್ಲಿ ಆದಿಪುರುಷ ಸಿನಿಮಾ ಪ್ರಥಮ ಪ್ರದರ್ಶನ ಕಾಣಲಿದೆ. ಈ ಬಗ್ಗೆ ಚಿತ್ರತಂಡ ಘೋಷಣೆ ಮಾಡಿದೆ. ಟೀಸರ್‌ನಿಂದ ಓಂ ರಾವುತ್ ನಿರ್ದೇಶನದ ಈ ಸಿನಿಮಾ ಎಲ್ಲರ ಟೀಕೆಗೆ ಗುರಿಯಾಗಿತ್ತು.
ಇದನ್ನೂ ವೀಕ್ಷಿಸಿ: ರಾಮಸೇತು, ಆದಿಪುರುಷ್ ಚಿತ್ರದ ಶೂಟಿಂಗ್ ಆಗಿದ್ದ ಹೈಟೆಕ್ ಫಿಲ್ಮ್ ಸ್ಟುಡಿಯೋ ಧ್ವಂಸ ಮಾಡಿದ ಬಿಎಂಸಿ!