Stars in Ram Mandir inauguration: ರಾಮ ಮಂದಿರ ಉದ್ಘಾಟನೆಯಲ್ಲಿ ಸ್ಟಾರ್ಸ್! ಪ್ರಾಣ ಪ್ರತಿಷ್ಠಾಪನೆಗೆ ಯಾರೆಲ್ಲಾ ಹೋಗುತ್ತಾರೆ ?

ಜನವರಿ 22 ರಂದು ನಡೆಯುವ ಬಾಲರಾಮನ ಪ್ರಾಣ ಪ್ರತಿಷ್ಠಾಪನೆಗಾಗಿ ಸಕಲ ಸಿದ್ಧತೆಗಳು ನಡೆಯುತ್ತಿವೆ. ಶ್ರೀರಾಮನ ಅದ್ಧೂರಿ ಕಾರ್ಯಕ್ರಮಕ್ಕೆ ದೇಶದ ಹಲವು ಸೆಲಬ್ರಿಟಿಗಳಿಗೆ ಆಹ್ವಾನ ಬಂದಿದೆ. ರಾಮನ ಪ್ರತಿಷ್ಠಾಪನೆಗೆ ಸ್ಯಾಂಡಲ್‌ವುಡ್‌ನಿಂದ ನಟ ರಿಷಬ್ ಶೆಟ್ಟಿ ಭಾಗವಹಿಸುತ್ತಿದ್ದಾರೆ.

First Published Jan 21, 2024, 10:29 AM IST | Last Updated Jan 21, 2024, 10:29 AM IST

ಶ್ರೀರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ರಾಮನ ಪ್ರಾಣ ಪ್ರತಿಷ್ಠಾಪನೆ ಆಗುತ್ತಿದೆ. ಈ ಕಾರ್ಯಕ್ರಮಕ್ಕೆ ಕನ್ನಡ ಚಿತ್ರರಂಗದಿಂದ ರಿಷಬ್ ಶೆಟ್ಟಿಗೆ(Rishabh shetty) ಆಹ್ವಾನ ಬಂದಿದೆ. ಈ ವಿಷಯವನ್ನ ನಟ ರಿಷಬ್ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ರಿಷಬ್ ಜೊತೆ ನಟ ರಾಕಿಂಗ್ ಸ್ಟಾರ್ ಯಶ್(Rocking star Yash) ಕೂಡ ರಾಮ ಮಂದಿರ ಉದ್ಘಾಟನೆಗೆ ಹೋಗುತ್ತಿದ್ದಾರೆ. ರಾಮ ಮಂದಿರ(Ram Mandir) ಉದ್ಘಾಟನೆಯಲ್ಲಿ ಪರಭಾಷಾ ಕಲಾವಿದರ ದಂಡೇ ಇದೆ. ಅಮಿತಾಭ್ ಬಚ್ಚನ್,  ರಜನಿಕಾಂತ್, ಮೋಹನ್ ಲಾಲ್, ಚಿರಂಜೀವಿ, ಪ್ರಭಾಸ್ ಅನುಪಮ್ ಖೇರ್, ಮಾಧುರಿ ದೀಕ್ಷಿತ್, ಅಜಯ್ ದೇವಗನ್, ಸನ್ನಿ ಡಿಯೋಲ್, ಸಂಜಯ್ ಲೀಲಾ ಬನ್ಸಾಲಿ, ಅಕ್ಷಯ್ ಕುಮಾರ್, ಧನುಷ್, ರಣ್‌ದೀಪ್ ಹೂಡ ರಣ್‌ಬೀರ್ ಕಪೂರ್, ಅನುಷ್ಕಾ ಶರ್ಮಾ, ಕಂಗನಾ ರಣಾವತ್, ಆಯುಷ್ಮಾನ್ ಖುರಾನ, ಆಲಿಯಾ ಭಟ್, ಜಾಕಿ ಶ್ರಾಫ್ ಭಾಗವಹಿಸುತ್ತಿದ್ದಾರೆ. ಅಯೋಧ್ಯೆ ರಾಮ ಮಂದಿರ ಪ್ರತಿಷ್ಠಾಪನಾ ಸಮಾರಂಭಕ್ಕೆ ಮುಂಚಿತವಾಗಿ ಸಿದ್ಧತೆಗಳಲ್ಲಿ ಅಯೋಧ್ಯೆ (Ayodhya)ತೊಡಗಿದೆ. ಸಾವಿರಾರು ಸ್ವಯಂ ಸೇವಕರು ಅಯೋಧ್ಯೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇದೇ ಸಮಯದಲ್ಲಿ ಅಯೋಧ್ಯೆ ರಾಮ ಮಂದಿರದ ಮೆಟ್ಟಿಲುಗಳನ್ನು ನಟ ಜಾಕಿ ಶ್ರಾಫ್‌ ಶುಚಿಗೊಳಿಸಿದ್ದಾರೆ. ಈ ವಿಡಿಯೋ ವೈರಲ್‌ ಆಗಿದೆ.

ಇದನ್ನೂ ವೀಕ್ಷಿಸಿ: Upadhyaksha Movie: ನಾಯಕ ನಟನಾಗಿ ಅದೃಷ್ಟ ಪರೀಕ್ಷೆಗಿಳಿದ ಕಾಮಿಡಿ ಕಿಲಾಡಿ ಚಿಕ್ಕಣ್ಣ..!

Video Top Stories