ಬಾಲಿವುಡ್ ಅಂಗಳದಲ್ಲಿ ಹೋಳಿಯ ರಂಗು..! ಬಣ್ಣದಲ್ಲಿ ಮಿಂದೆದ್ದ ಬಿಟೌನ್ ಸೆಲೆಬ್ರಿಟಿಗಳು..!

ಭಾರತದಾದ್ಯಂತ ಹೋಳಿ ಆಚರಣೆ ಜೋರಾಗಿದೆ. ಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ಅನೇಕರು ಬಣ್ಣದ ಹಬ್ಬದಲ್ಲಿ ಮಿಂದೆದ್ದಿದ್ದಾರೆ. ಇದೀಗ ಬಾಲಿವುಡ್ ಅಂಗಳದಲ್ಲಿ ಹೋಳಿ ರಂಗು ರಂಗಾಗಿದೆ. ಬಿಟೌನ್ ಸೆಲೆಬ್ರಿಟಿಗಳು ಬಣ್ಣದಲ್ಲಿ ಮಿಂದೆದ್ದಿದ್ದಾರೆ. 

First Published Mar 26, 2024, 11:37 AM IST | Last Updated Mar 26, 2024, 11:37 AM IST

ನಟಿ ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ದಂಪತಿ ಹೋಳಿ ಹಬ್ಬ ಆಚರಿಸಿದ್ದಾರೆ. ಪರಸ್ಪರ ಬಣ್ಣ ಬಳಿದುಕೊಂಡು ಪೋಸ್ ಕೊಟ್ಟಿದ್ದಾರೆ. ಕೃತಿ ಸನೋನ್ ಮನೆಯಲ್ಲೂ ಹೋಳಿ(Holi) ಆಚರಣೆ ಜೋರಾಗಿದೆ. ಬಣ್ಣದಲ್ಲಿ ಇವರು ಮಿಂದೆದ್ದಿದ್ದಾರೆ. ಆಲಿಯಾ ಭಟ್(Alia Bhatt) ಕೂಡ ಹೋಳಿ ಆಚರಣೆಯಲ್ಲಿ ಹಿಂದೆ ಬಿದ್ದಿಲ್ಲ. ಬಣ್ಣದ ಸ್ನಾನ ಮಾಡಿ ಮ್ಯೂಸಿಕ್ಗೆ ಹೆಜ್ಜೆ ಹಾಕಿದ್ದಾರೆ. ಕರೀನಾ ಕಪೂರ್ ಮಕ್ಕಳ ಜೊತೆ ಹೋಳಿ ಆಚರಿಸಿದ್ದಾರೆ. ಪ್ರೀತಿ ಜಿಂಟಾ, ಸಿದ್ದಾರ್ಥ್ ಮಲ್ಹೋತ್ರಾ ಹಾಗೂ ಕಿಯಾರಾ ಮಸ್ತ್ ಎಂಜಾಯ್ ಮಾಡಿದ್ದಾರೆ. ಇನ್ನು ಬಾಲಿವುಡ್ ನಟ ಅಕ್ಷನ್ ಕುಮಾರ್ ತನ್ನ ಬಡೇ ಮಿಯಾ ಚೋಟಾ ಮಿಯಾ ಚಿತ್ರತಂಡದ ಜತೆ ಹೋಳಿ ಹಬ್ಬ ಆಚರಿಸಿದ್ದಾರೆ. ಇನ್ನು ನಮ್ ಸ್ಯಾಂಡಲ್‌ವುಡ್‌ (Sandalwood)ಮಂದಿಯೂ ಹೋಳಿ ಆಚರಿಸೋದ್ರಲ್ಲಿ ಹಿಂದೆ ಬಿದ್ದಿಲ್ಲ. ಸದಾಶಿವ ನಗರದಲ್ಲಿರೋ ಉಪೇಂದ್ರ(Upendra) ಅವರ ಮನೆಯಲ್ಲಿ ರಂಗೀನ್ ಹಬ್ಬ ರಂಗು ರಂಗಾಗಿ ನಡೆದಿದೆ. ಉಪ್ರಿ ಪ್ರಿಯಾಂಕ ಮಸ್ತ್ ಡಾನ್ಸ್ ಮಾಡಿದ್ದಾರೆ. ಈ ಹಬ್ಬದಲ್ಲಿ ನಟ ಗಣೇಶ್ ಫ್ಯಾಮಿಲಿ ಕೂಡ ಭಾಗಿ ಆಗಿದ್ದಾರೆ. ನಟ ರಾಮ್ ಚರಣ್, ಅನು ಪ್ರಭಕರ್ ದಂಪತಿ, ನಟಿ ರಶ್ಮಿಕಾ ಮಂದಣ್ಣ ಸೇರಿದಂತೆ, ಹೀಗೆ ಹಲವು ಕಲಾವಿಧರು ಹೋಳಿ ಹಬ್ಬದಲ್ಲಿ ಮಿಂದೆದ್ದಿದ್ದಾರೆ.

ಇದನ್ನೂ ವೀಕ್ಷಿಸಿ: 'ಟಾಕ್ಸಿಕ್'ಗೆ ಕಿಕ್ ಸ್ಟಾರ್ಟ್ ಕೊಟ್ಟ ನ್ಯಾಷನಲ್ ಸ್ಟಾರ್! ಸಿನಿಮಾ ಶೂಟಿಂಗ್ ಪ್ಲ್ಯಾನ್‌ನ ಫೋಟೋ ವೈರಲ್..!

Video Top Stories