Disha Patani: ಬಿಕಿನಿ ಅವತಾರ ನೋಡಲಾಗದೇ ಸೀರೆ, ಬುರ್ಕಾ, ಸ್ಕರ್ಟ್​ ತೊಡಿಸಿದ ನೆಟ್ಟಿಗರು

ಪ್ರತಿ ದಿನ ಜಿಮ್​ನಲ್ಲಿ ವರ್ಕೌಟ್​ ಮಾಡುವ ದಿಶಾ ಪಟಾನಿ ಬಳುಕುವ ಬಳ್ಳಿಯಂತೆ ತಮ್ಮ ದೇಹವನ್ನು ಫಿಟ್​ ಆಗಿ ಇಟ್ಟುಕೊಂಡಿದ್ದು, ಆಗಾಗ ಫೋಟೋಶೂಟ್​ ಮಾಡಿಸುವ ಮೂಲಕ ಮಿಂಚುತ್ತಾರೆ. ಇದೀಗ ದಿಶಾ ಪಟಾನಿ ಅಪ್​ಲೋಡ್​ ಮಾಡಿರುವ ಒಂದು ಫೋಟೋ ಸಿಕ್ಕಾಪಟ್ಟೆ ಹಾಟ್​ ಆಗಿದ್ದು, ವೈರಲ್ ಆಗಿದೆ.

First Published Jan 13, 2022, 2:53 PM IST | Last Updated Jan 13, 2022, 2:53 PM IST

ನಟಿ ದಿಶಾ ಪಟಾನಿ (Disha Patani) ಅವರು ಬಾಲಿವುಡ್​ನಲ್ಲಿ (Bollywood) ಸಖತ್​ ಬೇಡಿಕೆ ಹೊಂದಿದ್ದು, ಸೋಶಿಯಲ್​ ಮೀಡಿಯಾದಲ್ಲಿ (Social Media) ಸಖತ್​ ಆ್ಯಕ್ಟೀವ್​ ಆಗಿರುತ್ತಾರೆ.  ಈ ನಟಿ ಆಗಾಗ ತನ್ನ ಬಿಕಿನಿ ಫೋಟೋಗಳೊಂದಿಗೆ ಇಂಟರ್ನೆಟ್‌ನಲ್ಲಿ ಬಿಸಿ ಏರಿಸಿದ್ದಾರೆ. ಪ್ರತಿ ದಿನ ಜಿಮ್​ನಲ್ಲಿ ವರ್ಕೌಟ್​ ಮಾಡುವ ಅವರು ಬಳುಕುವ ಬಳ್ಳಿಯಂತೆ ತಮ್ಮ ದೇಹವನ್ನು ಫಿಟ್​ ಆಗಿ ಇಟ್ಟುಕೊಂಡಿದ್ದು, ಆಗಾಗ ಫೋಟೋಶೂಟ್​ ಮಾಡಿಸುವ ಮೂಲಕ ಮಿಂಚುತ್ತಾರೆ. ಇದೀಗ ದಿಶಾ ಪಟಾನಿ ಅಪ್​ಲೋಡ್​ ಮಾಡಿರುವ ಒಂದು ಫೋಟೋ ಸಿಕ್ಕಾಪಟ್ಟೆ ಹಾಟ್​ ಆಗಿದ್ದು, ವೈರಲ್ ಆಗಿದೆ.

Disha Patani Dance; ದಿಶಾ ಪಟಾಣಿ ಡ್ಯಾನ್ಸ್ ವಿಡಿಯೋ ವೈರಲ್, ಸಪೂರ ಸೊಂಟದ ಮೋಡಿ!

ಕಡಲ ಕಿನಾರೆಯಲ್ಲಿ ದಿಶಾ ಪಟಾನಿ ಬಿಕಿನಿ ಧರಿಸಿ ಕಾಲ ಕಳೆದಿದ್ದು, ಈ ವೇಳೆ ಕ್ಯಾಮೆರಾಗೆ ಪೋಸ್​ ನೀಡಿದ್ದಾರೆ. ಆ ಫೋಟೋವನ್ನು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದು, ಈಗ ಸಖತ್​ ವೈರಲ್​ ಆಗಿದೆ. ಇನ್ನು ದಿಶಾ ಬಿಕಿನಿ ಧರಿಸಿರುವ ಪೋಟೋ ಇಟ್ಟುಕೊಂಡು ಬಗೆಬಗೆಯಲ್ಲಿ ಮೀಮ್ಸ್‌ (Memes) ತಯಾರು ಮಾಡಿದ್ದಾರೆ. ಫೋಟೋಶಾಪ್ (Photoshop)​ ಮೂಲಕ ದಿಶಾ ಪಟಾನಿಗೆ ಬಟ್ಟೆ ತೊಡಿಸುವ ಪ್ರಯತ್ನ ಮಾಡಲಾಗಿದ್ದು, ನೆಟ್ಟಿಗರು ತಮ್ಮ ಕಸುಬುದಾರಿಕೆ ತೋರುತ್ತಿದ್ದಾರೆ. ದಿಶಾ ಪಟಾನಿಯ ಅತಿಯಾದ ಹಾಟ್​ ಅವತಾರಕ್ಕೆ ನೆಟ್ಟಿಗರು ಸೀರೆ, ಬುರ್ಕಾ, ಸ್ಕರ್ಟ್​, ಗೌನ್​ ತೊಡಿಸಿ ಅನೇಕ ಬಗೆಯಲ್ಲಿ ಮೀಮ್ಸ್​ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment