Asianet Suvarna News Asianet Suvarna News

ಸಂಕ್ರಾಂತಿಯಲ್ಲಿ ಸೌತ್ ಸ್ಟಾರ್ಸ್ ದರ್ಬಾರ್: 700 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದ 4 ಸಿನಿಮಾಗಳು

ಸಂಕ್ರಾಂತಿ ಹಬ್ಬಕ್ಕೆ ರಿಲೀಸ್ ಆಗಿದ್ದ ತೆಲುಗು ಹಾಗೂ ತಮಿಳಿನ ಬಿಗ್ ಸ್ಟಾರ್ಸ್ ಸಿನಿಮಾಗಳು ಬಾಕ್ಸಾಫೀಸ್ ಅನ್ನು ಬಾಚಿಕೊಂಡಿವೆ. 
 

ವರ್ಷದ ಆರಂಭದಲ್ಲೇ ದಕ್ಷಿಣದ ಸಿನಿಮಾಗಳು ಭರ್ಜರಿ ಕಲೆಕ್ಷನ್ ಮಾಡಿವೆ.   ತೆಲುಗಿನಲ್ಲಿ ಮೆಗಾಸ್ಟಾರ್ ಚಿರಂಜೀವಿಯ ವಾಲ್ಟರ್ ವೀರಯ್ಯ ಹಾಗೂ ಬಾಲಯ್ಯ ನಟಿಸಿದ್ದ ವೀರ ಸಿಂಹ ರೆಡ್ಡಿ ಅಬ್ಬರಿಸಿದ್ವು. ತಮಿಳಿನಲ್ಲಿ ತಲಾ ಅಜಿತ್ ಅವರ ತುನಿವು ಸಿನಿಮಾ ಹಾಗೂ ದಳಪತಿ ವಿಜಯ್ ಅವರ ವಾರಿಸು ಸಿನಿಮಾ ಮಧ್ಯೆ ಬಾಕ್ಸಾಫಿಸ್'ನಲ್ಲಿ ಭರ್ಜರಿ ವಾರ್ ನಡೆದಿತ್ತು. ವಿಶೇಷ ಅಂದ್ರೆ ಈ ನಾಲ್ಕು ಸಿನಿಮಾಗಳು ಭಾರೀ ಕಲೆಕ್ಷನ್ ಮಾಡಿವೆ. ಈ ನಾಲ್ಕು ಸಿನಿಮಾಗಳಿಂದ ಒಟ್ಟು 700 ಕೋಟಿಗೂ ಅಧಿಕ ಕಲೆಕ್ಷನ್ ಆಗಿದೆ.