ಬಿಡುಗಡೆಗೆ ಮುನ್ನವೇ ಕೆಜಿಎಫ್-2 ದಾಖಲೆ ಮುರಿದ ಪಠಾಣ್: ಏನದು ಗೊತ್ತಾ?

ವಿವಾದದ ನಡುವೆಯೂ ಪಠಾಣ್ ಸಿನಿಮಾ, ಕೆಜಿಎಫ್-2 ದಾಖಲೆಯನ್ನು ಹಿಂದಿಕ್ಕಿದೆ ಎಂದು ಹೇಳಲಾಗಿದೆ.
 

First Published Jan 24, 2023, 2:18 PM IST | Last Updated Jan 24, 2023, 2:22 PM IST

ಬಹು ವಿವಾದದ ಬಳಿಕ ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ ಅಭಿನಯದ ಪಠಾಣ್ ಚಿತ್ರ ತೆರೆ ಕಾಣಲು ಸಿದ್ಧವಾಗಿದೆ. ಹಿಂದಿಯಲ್ಲಿ ಅತಿ ದೊಡ್ಡ ಓಪನಿಂಗ್ ಪಡೆದ ಸಿನಿಮಾ ಎಂಬ ಹೆಗ್ಗಳಿಕೆ ಪಡೆದಿದ್ದ ‘ಕೆಜಿಎಫ್ 2’ ಸಿನಿಮಾವನ್ನು ಪಠಾಣ್ ಹಿಂದಿಕ್ಕಲಿ ಎಂದು ಶಾರುಖ್, ದೀಪಿಕಾ ಅಭಿಮಾನಿಗಳು ಪ್ರಾರ್ಥಿಸುತ್ತಲೇ ಬಂದಿದ್ದರು. ಕೆಜಿಎಫ್ 2 ಬಾಲಿವುಡ್'ನಲ್ಲಿ ಮೊದಲ ದಿನ 53.95 ಕೋಟಿ ರೂ. ಗಳಿಸಿತ್ತು. ಪಠಾಣ್ ಚಿತ್ರ ಬಿಡುಗಡೆಗೆ ಮುನ್ನವೇ  ಕೆಜಿಎಫ್ 2 ಚಿತ್ರದ ದಾಖಲೆಯನ್ನು ಮುರಿದಿದೆ. ಸಾಗರೋತ್ತರ ಮುಂಗಡ ಬುಕ್ಕಿಂಗ್ ವಿಚಾರದಲ್ಲಿ ಚಿತ್ರ ಮತ್ತೆ ಹೊಸ ದಾಖಲೆ ಸೃಷ್ಟಿಸಿದೆ. ಪಠಾಣ್ ಸಿನಿಮಾ 1.32 ಕೋಟಿ ಗಳಿಸಿದ್ದು, ಆದ್ದರಿಂದ 1.2 ಕೋಟಿ ರೂಪಾಯಿ ಗಳಿಸಿದ್ದ  ಕೆಜಿಎಫ್ 2 ದಾಖಲೆಯನ್ನು ಅದು ಹಿಂದಿಕ್ಕಿದೆ. ಶಾರುಖ್ ಖಾನ್ ಚಿತ್ರವು ಮುಂಗಡ ಬುಕ್ಕಿಂಗ್‌ನಲ್ಲಿ ಮುಂದುವರೆದರೆ, ಚಿತ್ರವು ಮೊದಲ ದಿನದಲ್ಲಿ ಬಾಕ್ಸ್ ಆಫೀಸ್ ಅನ್ನು ಚಿಂದಿ ಮಾಡಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

'ಯಶ್‌ ಬಾಸ್ 19ನೇ ಚಿತ್ರದ ಘೋಷಣೆ ಯಾವಾಗ'?: ರಾಕಿಂಗ್ ಸ್ಟಾರ್‌ಗೆ ಪತ್ರ ಬರೆದ ಅಭಿಮಾನಿಗಳು