Allu Arjun-Atlee: ಅಲ್ಲು ಅರ್ಜುನ್‌ಗೆ ಜವಾನ್ ಡೈರೆಕ್ಟರ್ ಆ್ಯಕ್ಷನ್ ಕಟ್..! ಈ ಸಿನಿಮಾದಿಂದ ಬದಲಾಗಿದೆ ಅಟ್ಲಿ ರೇಂಜ್..!

ಟಾಲಿವುಡ್‌ನ ಪುಷ್ಪರಾಜ್ ಅಲ್ಲು ಅರ್ಜುನ್‌ಗೆ ಆಕ್ಷನ್ ಕಟ್ ಹೇಳೋಕೆ ಡೈರೆಕ್ಟರ್‌ಗಳ ಕ್ಯೂ ಇದೆ. ಆದ್ರೆ ಅಲ್ಲು ಮಾತ್ರ ಅಳೆದು ತೂಗಿ ನಿರ್ದೇಶಕರಿಗೆ ಅವಕಾಶ ಕೊಡ್ತಿದ್ದಾರೆ. ಹೀಗಾಗೆ ಅಲ್ಲು ಅರ್ಜುನ್ ಕಡೆಯಿಂದ ಪುಷ್ಪ ಅನ್ನೋ ಅದ್ಭುತ ಸಿನಿಮಾ ಬಂದಿದ್ದು. ಈಗ ಪುಷ್ಪ 2 ಸಿನಿಮಾ ಬಿಡುಗಡೆ ದಿನ ಎಣಿಸುತ್ತಿದೆ. ಈ ಟೈಂನಲ್ಲೇ ಸ್ಟೈಲೀಶ್ ಸ್ಟಾರ್ ಬಗ್ಗೆ ಹೊಸ ಸುದ್ದಿಯೊಂದು ಹೊರ ಬಂದಿದೆ.

First Published Dec 28, 2023, 11:02 AM IST | Last Updated Dec 28, 2023, 11:02 AM IST

ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಪುಷ್ಪ2 ಸಿನಿಮಾ ನೋಡೋಕೆ ಇನ್ನೂ ಅರ್ಧ ವರ್ಷ ಕಾಯ್ಬೇಕು. ಮುಂದಿನ ವರ್ಷ ಆಗಸ್ಟ್ 15ಕ್ಕೆ ಪುಷ್ಪ 2 ಸಿನಿಮಾ(Pushpa 2) ವರ್ಲ್ಡ್ ವೈಡ್ ರಿಲೀಸ್ ಆಗುತ್ತೆ. ಆದ್ರೆ ಪುಷ್ಪ2 ಬಿಡುಗಡೆ ಮೊದಲೇ ಅಲ್ಲು ಅರ್ಜುನ್(Allu Arjun) ಮತ್ತೊಂದು ಸಿನಿಮಾಗೆ ಕಮೀಟ್ ಆಗಿದ್ದಾರೆ ಅನ್ನೋ ಸುದ್ದಿ ಟಾಲಿವುಡ್(Tollywood) ಅಂಗಳದಿಂದ ಬಂದಿದೆ. ಸ್ಟೈಲೀಶ್ ಸ್ಟಾರ್ ಅಲ್ಲು ಅರ್ಜುನ್ ಆಯ್ಕೆ ಮಾಡೋ ಸಿನಿಮಾಗಳು ಪ್ಯಾನ್ ಇಂಡಿಯಾದಲ್ಲಿ ಸೌಂಡ್ ಮಾಡ್ಬೇಕು. ಹೀಗಾಗಿ ಅಂತಹ ಸಿನಿಮಾಗಳನ್ನ ಮಾಡೋ ಡೈರೆಕ್ಟರ್ಗಳನ್ನೇ ಅಲ್ಲು ಅರ್ಜುನ್ ತನ್ನ ಸಿನಿಮಾಗೆ ಆಯ್ಕೆ ಮಾಡ್ಕೊಳ್ಳಬೇಕು. ಇಂಡಿಯನ್ ಸಿನಿಮಾ ಜಗತ್ತಿನಲ್ಲಿ ಅಂತಹ ಪ್ಯಾನ್ ಇಂಡಿಯಾ ಸಿನಿಮಾ ಮಾಡೋ ಟ್ಯಾಲೆಂಟ್ ಇರೋ ಡೈರೆಕ್ಟರ್ ಇರೋದು ಬೆರಳೆಣಿಕೆಯಷ್ಟು. ಆ ನಿರ್ದೇಶಕರಲ್ಲಿ ಈ ವರ್ಷ 1000 ಕೋಟಿ ಕಲೆಕ್ಷನ್ ಮಾಡಿದ ಜವಾನ್ ಸಿನಿಮಾದ ಡೈರೆಕ್ಟರ್ ಅಟ್ಲಿ ಕೂಡ ಒಬ್ರು. ಈಗ ಇದೇ ಅಟ್ಲಿ ಅಲ್ಲು ಅರ್ಜುನ್ಗೆ ಆಕ್ಷನ್ ಕಟ್ ಹೇಳ್ತಾರಂತೆ. ಅಲ್ಲು ಅರ್ಜುನ್ ರೇಂಜ್ ಈಗ ಪ್ಯಾನ್ ಇಂಡಿಯಾದಲ್ಲಿ. ಅದೇ ತರ ಡೈರೆಕ್ಟರ್ ಅಟ್ಲಿ(Atlee Kumar) ರೇಂಜ್ ಕೂಡ ಪ್ಯಾನ್ ಇಂಡಿಯಾ ತುಂಬಾ ಹಬ್ಬಿದೆ. ಶಾರುಖ್ ಖಾನ್ ನಟನೆಯ ಜವಾನ್ ಸಿನಿಮಾದಿಂದ ಅಟ್ಲಿ ರೇಂಜ್ ಬದಲಾಗಿದೆ. ಇದನ್ನ ಗಮನಿಸಿರೋ ಅಲ್ಲು ಅರ್ಜುನ್ ನಿರ್ದೇಶಕ ಅಟ್ಲಿ ಒಪ್ಪಿಸಿದ್ದ ಕತೆ ಕೇಳಿ ಸಿನಿಮಾ ಮಾಡೋಕೆ ಒಕೆ ಎಂದಿದ್ದಾರಂತೆ. ಹೈದರಾಬಾದ್ನಲ್ಲಿ ನಿರ್ದೇಶಕ ಅಟ್ಲೀ ಹಾಗು ಅಲ್ಲು ಅರ್ಜುನ್ ಭೇಟಿಯಾಗಿದ್ದು, ಸ್ಟೋರಿ ಒಕೆ ಮಾಡಿಕೊಂಡಿದ್ದಾರೆ ಅಂತ ಹೇಳಲಾಗ್ತಿದೆ. 

ಇದನ್ನೂ ವೀಕ್ಷಿಸಿ:  Sandalwood: 2024ಕ್ಕೆ ಕನ್ನಡ ಚಿತ್ರ ಪ್ರೇಮಿಗಳಿಗೆ ಸಿನಿಮಾ ಹಬ್ಬ..! ಮುಂದಿನ ವರ್ಷ ಇಂಡಿಯಾದಲ್ಲಿ ಕನ್ನಡ ಚಿತ್ರಗಳದ್ದೇ ಸೌಂಡ್..!

Video Top Stories