Asianet Suvarna News Asianet Suvarna News

ರೇವ್‌ಪಾರ್ಟಿಯಲ್ಲಿ ತಗ್ಲಾಕೊಂಡ ನಟಿ ಹೇಮಾಗೆ 2 ನೇ ನೋಟಿಸ್! ವಿಚಾರಣೆ ಹಾಜರಾಗುವಂತೆ ಸೂಚನೆ

ರೇವ್‌ಪಾರ್ಟಿಯಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ನಟಿ ಹೇಮಾಗೆ 2 ನೇ ನೋಟಿಸ್ ನೀಡಲಾಗಿದೆ. ಈ ಮೂಲಕ ವಿಚಾರಣೆಗೆ ಹಾಜರಾಗುವಂತೆ ನಟಿ ಹೇಮಾಗೆ ಸಿಸಿಬಿ ಸೂಚನೆ ನೀಡಿದೆ.

ರೇವ್‌ಪಾರ್ಟಿಯಲ್ಲಿ  (Rave Party) ತಗ್ಲಾಕೊಂಡ ನಟಿ ಹೇಮಾಗೆ (Actress Hem) 2 ನೇ ನೋಟಿಸ್ ನೀಡಲಾಗಿದೆ. ಈ ಮೂಲಕ ವಿಚಾರಣೆಗೆ ಹಾಜರಾಗುವಂತೆ ನಟಿ ಹೇಮಾಗೆ ಸಿಸಿಬಿ ಸೂಚನೆ ನೀಡಿದೆ. ನಟಿ ಹೇಮಾ ಮಾತ್ರವಲ್ಲದೆ ಇತರೆ ಏಳು ಮಂದಿಗೆ ಎರಡನೇ ನೋಟಿಸ್ ನೀಡಲಾಗಿದೆ. ಈ ನೋಟಿಸ್‌ನಲ್ಲಿ(Notice) ಜೂನ್ 1 ರಂದು ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ. ಕಳೆದ ಶನಿವಾರ ವಿಚಾರಣೆಗೆ ಬರುವಂತೆ ಸಿಸಿಬಿ ಸೂಚಿಸಿತ್ತು. ಆದರೆ, ಅನಾರೋಗ್ಯದ ನೆಪವೊಡ್ಡಿ ವಿಚಾರಣೆಗೆ  ನಟಿ ಹೇಮಾ ಗೈರಾಗಿದ್ದರು. ನಂತರದಲ್ಲಿ ವಿಚಾರಣೆಗೆ ಒಂದು ವಾರ ಸಮಯಾವಕಾಶ ಬೇಕು ಎಂದು ಕೇಳಿದ್ದರು. ಇದರ ಬೆನ್ನಲ್ಲೇ ಈಗ 2 ನೇ ನೋಟೀಸ್ ನೀಡಿ ವಿಚಾರಣೆ ಬರುವಂತೆ ಸೂಚನೆ ನೀಡಲಾಗಿದೆ.

ಇದನ್ನೂ ವೀಕ್ಷಿಸಿ:  ಇಡೀ ಸರ್ಕಾರಕ್ಕೆ ಕಾಂಗ್ರೆಸ್ ಅಧ್ಯಕ್ಷರ ಫರ್ಮಾನು..ಏನಿದರ ಗುಟ್ಟು..? ಏನಿದು ಬಂಡೆ ಮಾಡಿದ ಶಪಥ..?

Video Top Stories