Shakuntala Satellite Launch ಕನ್ನಡಿಗ ಆವೇಜ್ ಅಹಮದ್ ವಿಶಿಷ್ಟ ಸಾಧನೆ
- ನಭಕ್ಕೆ ಹಾರಿದ ಆಲ್ದೂರಿನ ಯುವಕನ ಶಕುಂತಲಾ ಉಪಗ್ರಹ
- ಅಮೆರಿಕದ ಸ್ಪೆಸೆಕ್ಸ್‌ನಿಂದ ಉಡಾವಣೆಗೊಂಡ ಆವೇಜ್ ಅಹಮದ್ ಉಪಗ್ರಹ
- ಆವೇಜ್ ಅಹಮದ್‌ರ ಪಿಕ್ಸೆಲ್ ಏರೋಸ್ಪೇಸ್ ಕಂಪನಿಯಿಂದ ಉಡಾವಣೆ
ಇವ್ನ ಹೆಸ್ರು ಆವೇಜ್ ಅಹಮದ್. ಚಿಕ್ಕಮಗಳೂರು ತಾಲೂಕಿನ ಆಲ್ದೂರು ಗ್ರಾಮದ ಯುವಕ. ಇವ್ನಿಗೆ ಚಿಕ್ಕಂದಿನಿಂದಲೂ ವಿಜ್ಞಾನಿ ಆಗಬೇಕೆಂಬ ಬಯಕೆ ಇತ್ತು. ಇಂದು ತಾನು ಅಂದುಕೊಂಡಂತೆ ವಿಜ್ಞಾನಿಯಾಗಿದ್ದಾನೆ. ವಯಸ್ಸಿನ್ನು ಕೇವಲ 24. ಈ ವಯಸ್ಸಲ್ಲಿ ಬಹುತೇಕರು ಕೈಯಲ್ಲಿ ಬಯೋಡೇಟಾ ಇಟ್ಕೊಂಡು ಕೆಲಸಕ್ಕಾಗಿ ಅಲೆಯುತ್ತಿರುತ್ತಾರೆ. ಆದ್ರೆ, ಈತ ತನ್ನ 24ನೇ ವಯಸ್ಸಿಗೆ ಕಡಲನ್ನ ದಾಟಿ ಉಪಗ್ರಹವನ್ನ ಹಾರಿಸಿ ಹೊಸ ಮೈಲಿಗಲ್ಲು ಸೃಷ್ಠಿಸಿದ್ದಾನೆ.
ಅಮೆರಿಕದಿಂದ ನಭಕ್ಕೆ ಹಾರಿದ ಖಾಸಗಿ ಶಕುಂತಲಾ ಉಪಗ್ರಹ, ಕನ್ನಡಿಗನ ಸಾಧನೆ!
ಈ ವಯಸ್ಸಲ್ಲಿ ಅಮೆರಿಕದ ಸ್ಪೇಸ್ ಎಕ್ಸ್‌ನಿಂದ ಶಕುಂತಲಾ ಎಂಬ ಉಪಗ್ರಹವೊಂದನ್ನ ಬಾಹ್ಯಾಕಾಶಕ್ಕೆ ಯಶಸ್ವಿಯಾಗಿ ಹಾರಿಸಿದ್ದಾನೆ. ಬೇರೆ ಎಲ್ಲಾ ಉಪಗ್ರಹಗಳು ಯಾವ ರೀತಿ ಡೇಟಾವನ್ನ ಬಿಡುಗಡೆ ಮಾಡುತ್ತವೆಯೋ ಆವೆಜ್ ಅಹಮದ್ರವರ ಈ ಉಪಗ್ರಹ ಬೇರೆಲ್ಲಕ್ಕಿಂತ ಶೇಕಡ 50ಕ್ಕಿಂತ ಹೆಚ್ಚು ಡೇಟಾವನ್ನ ಬಿಡುಗಡೆ ಮಾಡುತ್ತೆ. ಭೂಮಿಯ ಚಲನವಲನದ ಫೋಟೋ, ಕೃಷಿ ಪ್ರಗತಿ, ಹವಾಮಾನದ ಮಾಹಿತಿ ಸೇರಿದಂತೆ ವಿವಿಧ ರೀತಿಯ ಮಾಹಿತಿ ರವಾನಿಸುತ್ತೆ. ಎಳೆ ವಯಸ್ಸಲ್ಲೇ ಮಗನ ಸಾಧನೆ ಕಂಡು ಆವೇಜ್ ಅಪ್ಪ ನದೀಮ್ ಮಗನ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.