ಆದಾಯ ತೆರಿಗೆಯ ಹೊಸ ಪೋರ್ಟಲ್: ಈಗ ಎಲ್ಲವೂ ಸರಳ, ಸುಲಭ!
ಆದಾಯ ತೆರಿಗೆದಾರರ ಹಿತವನ್ನು ಗಮನದಲ್ಲಿಟ್ಟುಕೊಂಡು ಆದಾಯ ತೆರಿಗೆಯ ಇ- ಫೈಲಿಂಗ್ ವೆಬ್‌ಸೈಟ್ ಕೆಲ ಬದಲಾವಣೆಗಳೊಂದಿಗೆ ಮತ್ತೆ ಆರಂಭವಾಗಿದೆ. ಹೌದು ಮೇ 31 ರಂದು ಹಳೆ ವೆಬ್‌ಸೈಟ್ ಕಾರ್ಯ ನಿರ್ವಹಣೆ ನಿಲ್ಲಿಸಿದ್ದು, ಹೊಸ ವೆಬ್‌ಸೈಟ್ ಆರಂಭಗೊಂಡಿದೆ. ಇದರೊಂದಿಗೆ ಇ- ಪೈಲಿಂಗ್ ಮಾಡುವ ಅಡ್ರೆಸ್ ಕೂಡಾ ಸಣ್ಣದಾಗಿದೆ.
ನವದೆಹಲಿ(ಜೂ.10): ಆದಾಯ ತೆರಿಗೆದಾರರ ಹಿತವನ್ನು ಗಮನದಲ್ಲಿಟ್ಟುಕೊಂಡು ಆದಾಯ ತೆರಿಗೆಯ ಇ- ಫೈಲಿಂಗ್ ವೆಬ್‌ಸೈಟ್ ಕೆಲ ಬದಲಾವಣೆಗಳೊಂದಿಗೆ ಮತ್ತೆ ಆರಂಭವಾಗಿದೆ. ಹೌದು ಮೇ 31 ರಂದು ಹಳೆ ವೆಬ್‌ಸೈಟ್ ಕಾರ್ಯ ನಿರ್ವಹಣೆ ನಿಲ್ಲಿಸಿದ್ದು, ಹೊಸ ವೆಬ್‌ಸೈಟ್ ಆರಂಭಗೊಂಡಿದೆ. ಇದರೊಂದಿಗೆ ಇ- ಪೈಲಿಂಗ್ ಮಾಡುವ ಅಡ್ರೆಸ್ ಕೂಡಾ ಸಣ್ಣದಾಗಿದೆ.
ಐಟಿ ರಿಟರ್ನ್ಸ್‌ಗೆ ಹೊಸ ಪೋರ್ಟಲ್: ತೆರಿಗೆದಾರರಿಗಿಲ್ಲ ಹೊರೆ: ಈ ಎಲ್ಲಾ ಆಯ್ಕೆ ಇರುತ್ತೆ!
ಇನ್ನು ಇಲ್ಲಿ ಬದಲಾಗಿದ್ದು ಕೇವಲ ಅಡ್ರೆಸ್ ಮಾತ್ರನಾ? ಅನ್ನೋರು ಈ ಹೊಸ ವೆಬ್‌ಸೈಟಿನಲ್ಲಿರೋ ಲಾಭಗಳ ಬಗ್ಗೆ ತಿಳಿದುಕೊಳ್ಳಲೇಬೇಕು. ಇದರಲ್ಲಿರೋ ಆಪ್ಶನ್‌ಗಳ ಬಗ್ಗೆ ನೀವು ಯೋಚಿಸಿಯೂ ಇರಲಿಕ್ಕಿಲ್ಲ. ಉದಾಹರಣೆಗೆ ಇನ್ಮುಂದೆ ಈ ಪೋರ್ಟಲ್‌ನಲ್ಲಿ ಆದಾಯ ತೆರಿಗೆ ಪಾವತಿಸಬಹುದು. ಇಲ್ಲೇ ತೆರಿಗೆ ಸಂಬಂಧಿತ ಎಲ್ಲಾ ಮಾಹಿತಿಯೂ ಸಿಗಲಿದೆ. ಅವೆಲ್ಲಕ್ಕೂ ಮಿಗಿಲಾಗಿ ಕೂಡಲೇ ರಿಫಂಡ್ ಕೂಡಾ ಸಿಗಲಿದೆ. ಇದನ್ನು ಹೊರತುಪಡಿಸಿ ಇನ್ನೂ ಹಲವು ಸೌಲಭ್ಯಗಳಿವೆ. ಈ ಕುರಿತಾದ ಮಾಹಿತಿ ಇಲ್ಲಿದೆ ನೋಡಿ.