ಮಾರಣಾಂತಿಕ ಅಪಘಾತದ ನಂತ್ರ ಬೋಯಿಂಗ್ ಸಿಇಒ ಸ್ಥಾನಕ್ಕೆ ಡೆನ್ನಿಸ್ ಗುಡ್ ಬೈ!
ಎರಡು ಮಾರಣಾಂತಿಕ ಅಪಘಾತಗಳ ನಂತರ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿರುವ ಬೋಯಿಂಗ್ ಸಿಇಒ ಡೆನ್ನಿಸ್ ಮುಯಿಲೆನ್ಬರ್ಗ್ ಹುದ್ದೆಯಿಂದ ಕೆಳಗಿಳಿದಿದ್ದಾರೆ.
ಮುಯಿಲೆನ್‌ಬರ್ಗ್ ಸ್ಥಾನಕ್ಕೆ ಅಧ್ಯಕ್ಷ ಡೇವಿಡ್ ಕ್ಯಾಲ್ಹೌನ್ ಮುಂಬರುವ ಜನವರಿ 13, 2020 ಸಿಇಒ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಈ ಕುರಿತು ಬೋಯಿಂಗ್ (ಬಿಎ) ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಡೆನ್ನಿಸ್ ಮುಯಿಲೆನ್ಬರ್ಗ್ ಅವರನ್ನು ಸಿಇಒ ಹುದ್ದೆಯಿಂದ ಕೆಳಗಿಳಿಯುವಂತೆ ನಿರ್ದೇಶಕರ ಮಂಡಳಿ ಸೂಚಿಸಿದೆ ಎಂದು ಹೇಳಿದೆ.
ಇಥಿಯೋಪಿಯಾ ದುರಂತ, ಪಾಠ ಕಲಿತ ಭಾರತ: ಬೋಯಿಂಗ್ 737 ವಿಮಾನ ನಿಷೇಧ!
55 ವರ್ಷದ ಮುಯಿಲೆನ್‌ಬರ್ಗ್ ಜುಲೈ 2015 ರಲ್ಲಿ ವಿಶ್ವದ ಅತಿದೊಡ್ಡ ಏರೋಸ್ಪೇಸ್ ಕಂಪನಿಯ ಸಿಇಒ ಆಗಿ ಅಧಿಕಾರವಹಿಸಿಕೊಂಡಿದ್ದರು. ಈ ಹಿಂದೆ ಅವರು ಕಂಪನಿಯ ಅಧ್ಯಕ್ಷರಾಗಿದ್ದು, ಕಳೆದ ಅಕ್ಟೋಬರ್‌ನಲ್ಲಿ ಆ ಸ್ಥಾನವನ್ನು ತ್ಯಜಿಸಿದ್ದರು. ಡೆನ್ನಿಸ್ ಮುಯಿಲೆನ್ಬರ್ಗ್ 1985 ರಿಂದ ಬೋಯಿಂಗ್‌ನಲ್ಲಿ ವಿವಿಧ ಸ್ತರಗಳಲ್ಲಿ ಕೆಲಸ ಮಾಡಿದ್ದಾರೆ.
ರನ್ ವೇ ಮೇಲಿಂದ ನದಿಗುರುಳಿದ 136 ಪ್ರಯಾಣಿಕರಿದ್ದ ವಿಮಾನ
ಅತಿ ಹೆಚ್ಚು ಮಾರಾಟಗೊಂಡ ವಾಣಿಜ್ಯ ಜೆಟ್ ಅನ್ನು 2019 ರ ಮಾರ್ಚ್‌ನಲ್ಲಿ ವಿಶ್ವದಾದ್ಯಂತ ಪರಿಚಯಿಸಲಾಯಿತು. ಆದರೆ ಎರಡು ಮಾರಣಾಂತಿಕ ಅಪಘಾತಗಳು 346 ಜನರನ್ನು ಬಲಿಪಡೆದ ಬಳಿಕ, ಈ ಜೆಟ್ ಗಳ ಹಾರಾಟಕ್ಕೆ ನಿರ್ಬಂಧ ವಿಧಿಸಲಾಯಿತು.
ಇನ್ನು ನೂತನ ಸಿಇಒ ಆಗಿ ನೇಮಕಗೊಳ್ಳಲಿರುವ ಕ್ಯಾಲ್ಹೌನ್ 2009 ರಿಂದ ಬೋಯಿಂಗ್ ಮಂಡಳಿಯಲ್ಲಿ ಸೇವೆ ಸಲ್ಲಿಸಿದ್ದು, ಬ್ಲಾಕ್‌ಸ್ಟೋನ್ ಗ್ರೂಪ್‌ನಲ್ಲಿ ಹಿರಿಯ ವ್ಯವಸ್ಥಾಪಕ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಈ ಹಿಂದೆ ಅವರು ನೀಲ್ಸನ್ ಹೋಲ್ಡಿಂಗ್ಸ್‌ನ ಅಧ್ಯಕ್ಷ ಮತ್ತು ಸಿಇಒ ಆಗಿ ಕೆಲಸ ನಿರ್ವಹಿಸಿದ್ದ ಅನುಭವ ಹೊಂದಿದ್ದಾರೆ.