Union Budget 2022 : ಕಣ್ಣೊರೆಸುವ ತಂತ್ರವನ್ನು ಬಜೆಟ್ ನಲ್ಲಿ ಮಾಡಿಲ್ಲ
ಇದು ಜನಪ್ರಿಯ ಬಜೆಟ್ ಅಲ್ಲ
ಎಲೆಕ್ಷನ್ ಮರೆತು ದೇಶದ ಅಭಿವೃದ್ಧಿಗಾಗಿ ಮಂಡಿಸಿರುವ ಬಜೆಟ್
ಆರ್ಥಿಕ ತಜ್ಞ ರುದ್ರಮೂರ್ತಿ ಅಭಿಪ್ರಾಯ
ಬೆಂಗಳೂರು (ಫೆ.1): ಮುಂದಿನ ಪಂಚರಾಜ್ಯಗಳ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಮಾಡಿರುವಂಥ ಜನಪ್ರಿಯ ಬಜೆಟ್ (Union Budget)ಇದಲ್ಲ. ಯಾವುದೇ ಕಣ್ಣೊರೆಸುವ ತಂತ್ರವನ್ನು ಈ ಬಜೆಟ್ ನಲ್ಲಿ ಮಾಡಲಾಗಿಲ್ಲ. ದೇಶದ ಅಭಿವೃದ್ಧಿಗಾಗಿ ಮಂಡನೆಯಾಗಿರುವ ಬಜೆಟ್ ಎಂದು ಆರ್ಥಿಕ ತಜ್ಞ ರುದ್ರಮೂರ್ತಿ (Economist Rudramurthy) ಅಭಿಪ್ರಾಯಪಟ್ಟಿದ್ದಾರೆ. ಆದಾಯ ತೆರಿಗೆ ಮಿತಿ ಹೆಚ್ಚಿಸುವ, ಜನಪ್ರಿಯ ಘೋಷಣೆಗಳನ್ನು ಪ್ರಕಟಿಸುವ ಕೆಲಸಗಳನ್ನು ಈ ಬಜೆಟ್ ನಲ್ಲಿ ಮಾಡಿಲ್ಲ. ದೇಶದ ಸಮಗ್ರ ಅಭಿವೃದ್ಧಿಯ ದೃಷ್ಟಿಯಲ್ಲಿ ಮುಂಗಡ ಪತ್ರವನ್ನು ಮಂಡನೆ ಮಾಡಲಾಗಿದೆ ಎಂದಿದ್ದಾರೆ.
ಬಜೆಟ್ ಕುರಿತಾದ ಮತ್ತಷ್ಟು ಸುದ್ದಿಗಳು, ಅಭಿಪ್ರಾಯಗಳಿಗೆ ಇಲ್ಲಿ ಕ್ಲಿಕ್ ಮಾಡಿ
ದೇಶದಲ್ಲಿ 130 ಕೋಟಿಗೂ ಅಧಿಕ ಜನಸಂಖ್ಯೆ ಇದೆ. ಇದರಲ್ಲಿ ತೆರಿಗೆ ಪಾವತಿ ಮಾಡುವವರ ಸಂಖ್ಯೆ ಕೇವಲ 2 ಕೋಟಿಗೂ ಕಡಿಮೆ ಇದೆ. ಆದಾಯ ತೆರಿಗೆಯಲ್ಲಿ (Income Tax) ದೊಡ್ಡ ಘೋಷಣೆ ಮಾಡಿದರೂ ಇದರಿಂದ ಹೆಚ್ಚಿನ ಜನರಿಗೆ ಲಾಭವಾಗುವುದಿಲ್ಲ. ಅದರ ಬದಲಿಗೆ ಕ್ಯಾಪಿಟಲ್ ಎಕ್ಸ್ ಪೆಂಡೀಚರ್ ಕಡೆ ಸರ್ಕಾರ ಹೆಚ್ಚಿನ ಗಮನವಹಿಸಿದೆ. ಕ್ಯಾಪೆಕ್ಸ್ ಏರಿಸುವ ಬಗ್ಗೆ ದೊಡ್ಡ ಮಟ್ಟದಲ್ಲಿ ಸರ್ಕಾರ ಯೋಜನೆ ರೂಪಿಸಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.