ಬಳ್ಳಾರಿ ಪ್ರವಾಸಿಗರಿಗೆ ಉತ್ತರಖಂಡದಲ್ಲಿ ಆಸರೆಯಾದ ಕನ್ನಡದ ಐಪಿಎಸ್ ಅಧಿಕಾರಿ
ಬಳ್ಳಾರಿಯಿಂದ ಉತ್ತರಖಂಡದ ದರ್ಗಾ ಒಂದರ ದರ್ಶನಕ್ಕೆಂದು ತೆರಳಿದ್ದವರು ಮಾರ್ಚ್ 25 ಕ್ಕೆ ರೈಲಿನಲ್ಲಿ ರಿಟರ್ನ್ ಟಿಕೆಟ್ ಕೂಡಾ ಮಾಡಿಸಿದ್ದರು. ಆದರೆ 23 ರಂದೇ ಲಾಕ್‌ಡೌನ್ ಘೋಷಣೆಯಾದ್ದರಿಂದ ಫಜೀತಿಗೆ ಸಿಲುಕಿಕೊಂಡರು.
ಬಳ್ಳಾರಿ(ಮೇ.01): ಉತ್ತರಾಖಂಡದಲ್ಲಿ ಸಿಲುಕಿದ್ದ ಬಳ್ಳಾರಿ ಜನರಿಗೆ ಬಳ್ಳಾರಿ ಮೂಲದ ಐಪಿಎಸ್ ಅಧಿಕಾರಿಯೊಬ್ಬರು ಸಹಾಯ ಮಾಡಿದ್ದಾರೆ. ಪ್ರವಾಸಕ್ಕೆ ತೆರಳಿದ್ದ ಬಳ್ಳಾರಿಯ 10 ಜನ ಮತ್ತು ನೆರೆಯ ಆಂಧ್ರದ ಕಣೆಕಲ್‌ನ 8 ಮಂದಿ ಉತ್ತರಾಖಂಡ್‌ನಲ್ಲಿ ಸಿಲುಕಿದ್ದರು.
ದರ್ಗಾ ಒಂದರ ದರ್ಶನಕ್ಕೆಂದು ತೆರಳಿದ್ದವರು ಮಾರ್ಚ್ 25 ಕ್ಕೆ ರೈಲಿನಲ್ಲಿ ರಿಟರ್ನ್ ಟಿಕೆಟ್ ಕೂಡಾ ಮಾಡಿಸಿದ್ದರು. ಆದರೆ 23 ರಂದೇ ಲಾಕ್‌ಡೌನ್ ಘೋಷಣೆಯಾದ್ದರಿಂದ ಫಜೀತಿಗೆ ಸಿಲುಕಿಕೊಂಡರು.
ಸಾರ್ವಜನಿಕ ಸ್ಥಳಗಳಲ್ಲಿ ಕಟ್ಟು ನಿಟ್ಟಿನ ರೂಲ್ಸ್ ತಂದ ಡೆಲ್ಲಿ ಸರ್ಕಾರ
ಬಳ್ಳಾರಿ ಮುಲದ ವಿರೂಪಾಕ್ಷ ಬಳಿ ಸಮಸ್ಯೆ ಹೇಳಿದಾಗ ಜಾರ್ಖಂಡ್‌ನಲ್ಲಿರುವ ತಮ್ಮ ಪುತ್ರ ಐಪಿಎಸ್ ಅಧಿಕಾರಿ ಎಸ್ ರಮೇಶ್ ಅವರಿಗೆ ತಿಳಿಸಿ ಪ್ರವಾಸಿಗರನ್ನು ಕರೆ ತರುವ ವ್ಯವಸ್ಥೆ ಮಾಡಿದ್ದಾರೆ.