ಬಾಗಲಕೋಟೆಯಲ್ಲಿ ಎಲ್ಲೆಲ್ಲೂ ನೀರು, ಈರುಳ್ಳಿ ಬೆಳೆಗಾರರ ಕಣ್ಣಲ್ಲೂ....
ಬಾಗಲಕೋಟೆ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಮತ್ತೆ ನೆರೆಭೀತಿ ಎದುರಾಗಿದೆ. ಬಹುತೇಕ ಕಡೆ ಮನೆ-ಮಠ, ರಸ್ತೆ-ಮೈದಾನಗಳೆಲ್ಲವೂ ಜಲಾವೃತವಾಗಿವೆ. ಗದ್ದೆಗಳಲ್ಲಿ ನೀರು ತುಂಬಿ ಬೆಳೆ ನಾಶವಾಗಿದೆ. ವಿಶೇಷವಾಗಿ, ಈರುಳ್ಳಿ ಬೆಳೆದಿರುವವರ ಪಾಡು ಹೇಳತೀರದು.
ಬಾಗಲಕೋಟೆ (ಅ.22): ಬಾಗಲಕೋಟೆಯಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಮತ್ತೆ ನೆರೆಭೀತಿ ಎದುರಾಗಿದೆ. ಬಹುತೇಕ ಕಡೆ ಮನೆ-ಮಠ, ರಸ್ತೆ-ಮೈದಾನಗಳೆಲ್ಲವೂ ಜಲಾವೃತವಾಗಿವೆ. ಗದ್ದೆಗಳಲ್ಲಿ ನೀರು ತುಂಬಿ ಬೆಳೆ ನಾಶವಾಗಿದೆ.
ವಿಶೇಷವಾಗಿ, ಈರುಳ್ಳಿ ಬೆಳೆದಿರುವವರ ಪಾಡು ಹೇಳತೀರದು. ಮಳೆನೀರಿನಿಂದ ಈರುಳ್ಳಿ ಬೆಳೆ ಸಂಪೂರ್ಣ ನಾಶವಾಗಿದ್ದು, ಬೆಳೆಗಾರರ ಕಣ್ಣಲ್ಲಿ ನೀರು ತರಿಸಿದೆ.
ರಾಜ್ಯದ ಬಹುತೇಕ ಕಡೆ ಕಳೆದೆರಡು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಇನ್ನೂ 3-4 ದಿನ ಪರಿಸ್ಥಿತಿ ಇದೇ ರೀತಿ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಲವು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಕೂಡಾ ಘೋಷಿಸಲಾಗಿದೆ.