Asianet Suvarna News Asianet Suvarna News

ಇದು ಅಂತಿಂಥಾ ಕಾರಲ್ಲ, ನೆಲ, ಆಗಸ ಎರಡರಲ್ಲೂ ಸಂಚರಿಸಬಲ್ಲ ಕಾರು..!

- ಹಾರುವ ಕಾರಿನ ಕನಸು ನನಸು

- ಸ್ಲೋವಾಕಿಯಾದ 2 ನಗರಗಳ ಮಧ್ಯೆ ಕಾರಿನ ಮೊದಲ ಹಾರಾಟ ಯಶಸ್ವಿ

- ನಿತ್ರಾ ನಗರದಿಂದ ಬ್ರಾಟಿಸ್ಲಾವಾಕ್ಕೆ ಹಾರಾಟ ನಡೆಸಿದ ಏರ್‌ಕಾರ್‌

ಬ್ರಾಟಿಸ್ಲಾವಾ (ಜು. 03): ಹಾಲಿವುಡ್‌ ಚಿತ್ರಗಳಲ್ಲಿ ಕಂಡುಬರುತ್ತಿದ್ದ ಹಾರುವ ಕಾರಿನ ಕನಸು ನನಸಾಗುವ ಕ್ಷಣ ಕೊನೆಗೂ ಸನ್ನಿಹಿತವಾಗಿದೆ. ಸ್ಲೋವಾಕಿಯಾ ಮೂಲದ ಕ್ಲೈನ್‌ ವಿಷನ್‌ ಕಂಪನಿ ಅಭಿವೃದ್ಧಿಪಡಿಸಿರುವ ‘ಏರ್‌ ಕಾರ್‌’ ಇದೆ ಮೊದಲ ಬಾರಿಗೆ ಎರಡು ನಗರಗಳ ನಡುವೆ ಯಶಸ್ವಿಯಾಗಿ ಸಂಚಾರ ನಡೆಸಿದೆ. ಈ ಮೂಲಕ ನೆಲ ಮತ್ತು ಆಗಸ ಎರಡರಲ್ಲೂ ಸಂಚರಿಸಬಲ್ಲ ಕಾರು ಬಳಕೆದಾರರಿಗೆ ಲಭ್ಯವಾಗುವ ಸಮಯ ಸನ್ನಿಹಿತವಾಗಿದೆ. 

5 ಲಕ್ಷ ರೂ ನೀಡಿ ಬುಕ್ ಮಾಡಿ Audi ಇ ಟ್ರಾನ್ ಎಲೆಕ್ಟ್ರಿಕ್ ಕಾರು!

ಜೂ.28ರಂದು ಸ್ಲೋವಾಕಿಯಾದ ನಿತ್ರಾ ವಿಮಾನ ನಿಲ್ದಾಣದಿಂದ ಹಾರಾಟ ಕೈಗೊಂಡ ‘ಏರ್‌ ಕಾರ್‌’ ಬ್ರಾಟಿಸ್ಲಾವಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೇವಲ 35 ನಿಮಿಷದಲ್ಲಿ ಬಂದು ತಲುಪಿದೆ. ಸ್ಲೋವಾಕಿಯಾದ ನಾಗರಿಕ ವಿಮಾನಯಾನ ಸಂಸ್ಥೆಯ ಮೇಲ್ವಿಚಾರಣೆಯಲ್ಲಿ ಏರ್‌ ಕಾರ್‌ ಈಗಾಗಲೇ 40 ಗಂಟೆಗಳ ಪ್ರಯಾಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಈ ಕಾರಿನ ವಿಶೇಷತೆಗಳೇನು.?