Asianet Suvarna News Asianet Suvarna News

ಮತ್ತಷ್ಟು ಹಾಟ್ ಆಗಲು ಬೆಂಕಿ ಹಚ್ಚಿಕೊಂಡರಾ ಉರ್ಫಿ? ಒಂದೇ ಕ್ಷಣದಲ್ಲಿ ಧಗಧಗಿಸಿದ ಜ್ವಾಲೆ!

ಉರ್ಫಿ ಜಾವೇದ್ ಹೊಸ ಅವತರಾದ ಮೂಲಕ ಮಿಂಚುತ್ತಲೇ ಇರುತ್ತಾರೆ. ಪ್ರತಿ ಬಾರಿ ತುಂಡುಗೆ ಮೂಲಕ ಉರ್ಫಿ ಮೈಬಿಸಿ ಏರಿಸಿದ್ದಾರೆ. ಆದರೆ ಈ ಬಾರಿ ಹಾಟ್ ಅನ್ನೋ ಪದಕ್ಕೆ ಅಕ್ಷರಶ ಫೀಲ್ ನೀಡಲು ಬೆಂಕಿಯೇ ಹಚ್ಚಿಕೊಂಡಿದ್ದಾರೆ. 

Urfi javed become more hot after preforming fire stunts request not try this at home ckm
Author
First Published Aug 20, 2024, 7:31 PM IST | Last Updated Aug 20, 2024, 7:31 PM IST

ಮುಂಬೈ(ಆ.20) ಮಾಡೆಲ್ ಕಮ್ ನಟಿ ಉರ್ಫಿ ಜಾವೇದ್ ಫ್ಯಾಶನ್ ಸೆನ್ಸ್ ಊಹೆಗೂ ನಿಲುಕದ್ದು. ಪ್ರತಿ ಬಾರಿ ಉರ್ಫಿ ಒಂದೊಂದು ಅವತಾರದಲ್ಲಿ ಕಾಣಿಸಿಕೊಂಡು ಸಂಚಲನ ಸೃಷ್ಟಿಸಿದ್ದಾರೆ. ಬಾಲಿವುಡ್‌ನಲ್ಲೂ ಉರ್ಫಿ ಜಾವೇದ್ ಫ್ಯಾಶನ್ ಸೆನ್ಸ್‌ಗೆ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಪ್ರತಿ ಬಾರಿ ಉರ್ಫಿ ಬೋಲ್ಡ್ ಹಾಗೂ ಹಾಟ್ ಅವತರಾದಲ್ಲಿ ಕಾಣಿಸಿಕೊಂಡು ಕಣ್ಣು ಕುಕ್ಕಿದ್ದಾರೆ. ಈ ಬಾರಿ ಉರ್ಫಿ ನಿಜಕ್ಕೂ ಹಾಟ್ ಆಗಿದ್ದಾರೆ. ಬೆಂಕಿ ಹಚ್ಚಿಕೊಂಡು ಹಾಟ್ ಸ್ಟಂಟ್ ಮಾಡಿದ್ದಾರೆ. ಈ ವಿಡಿಯೋ ಪೋಸ್ಟ್ ಮಾಡಿ ಈ ಸಾಹಸವನ್ನು ಯಾರೂ ಪ್ರಯತ್ನಿಸಬೇಡಿ ಎಂದು ಮಾಡೆಲ್ ಮನವಿ ಮಾಡಿಕೊಂಡಿದ್ದಾರೆ.

ಉರ್ಫಿ ಜಾವೇದ್ ಈ ಬಾರಿ ಹಾಟ್ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಆದರೆ ಎಲ್ಲಕ್ಕಿಂತ ಭಿನ್ನವಾಗಿರುವ ಈ ಬಾರಿಯ ವಿಡಿಯೋ ಡ್ರೆಸ್ ಅಥವಾ ಬೋಲ್ಡ್ ನಡೆಯ ಮೂಲಕ ಉರ್ಫಿ ಹಾಟ್ ಆಗಿಲ್ಲ. ಬದಲಾಗಿ, ಬೆಂಕಿ ಹಚ್ಚಿಕೊಂಡು ಹಾಟ್ ಆಗಿದ್ದಾರೆ. ಬೆಂಕಿ ಕೆನ್ನಾಲಗೆ ಉರ್ಫಿ ಎತ್ತರಕ್ಕೂ ಹಾರಿದೆ. ಎದೆಗುಂದದೆ, ಉರ್ಫಿ ಹಾಟ್ ಅವತಾರ ಪ್ರದರ್ಶಿಸಿದ್ದಾರೆ. ಬೆಂಕಿಯಲ್ಲಿ ಅರಳಿ ಹೂವಾಗಿ ಉರ್ಫಿ ತಮ್ಮ ಫ್ಯಾಶನ್ ಸೆನ್ಸ್ ಮೆರೆದಿದ್ದಾರೆ

ಇವತ್ತು ಫುಲ್ ಟೈಟ್-ಬಿಟ್ಟುಬಿಡಿ, ಬ್ಯಾಕ್‌ಲೆಸ್ ಫೋಟೋಗೆ ಮುಗಿಬಿದ್ದ ಪಾಪ್ಸ್‌ಗೆ ಉರ್ಫಿ ಮನವಿ ವೈರಲ್!

ಉರ್ಫಿ ಹೊಸ ಫ್ಯಾಶನ್ ಡ್ರೆಸ್ ಪರಿಚಯಿಸಲು ಈ ಸ್ಟಂಟ್ ಮಾಡಿದ್ದಾರೆ. ವೃತ್ತಿಪರ, ಅನುಭವಿ ತಜ್ಞರ ನೆರವಿನಲ್ಲಿ ಈ ಸ್ಟಂಟ್ ಮಾಡಿದ್ದಾರೆ. ಕುರ್ಚಿ ಮೇಲೆ ನಿಂತು ಕೊಂಡ ಉರ್ಫಿಗೆ ಈ ವಿಶೇಷ ಉಡುಪು ತೊಡಿಸಲಾಗಿದೆ. ಬ್ಲಾಕ್ ಗೌನ್ ಡ್ರೆಸ್ ತೊಟ್ಟ ಉರ್ಫಿ, ಎತ್ತರದ ಅರ್ಧ ಗೋಳದ ಮೇಲೆ ನಿಂತಿದ್ದಾರೆ. ಬಳಿಕ ಉರ್ಫಿ ಚಪ್ಪಾಳೆ ತಟ್ಟುತ್ತಿದ್ದಂತೆ ಕೆಳಗಿನ ಅರ್ಧ ಗೋಳಾಕಾರದಲ್ಲಿ ಬೆಂಕಿ ಹೊತ್ತಿಕೊಂಡಿದೆ. ಒಂದೇ ಕ್ಷಣದಲ್ಲಿ ಬೆಂಕಿ ಧಗಧಗನೆ ಉರಿದಿದೆ.

 

 
 
 
 
 
 
 
 
 
 
 
 
 
 
 

A post shared by Uorfi (@urf7i)

 

ಧೃತಿಗೆಡದೆ ಧೈರ್ಯವಾಗಿ ನಿಂತ ಉರ್ಫಿ ಜಾವೇದ್ ಸ್ಟಂಟ್ ಪೂರೈಸಿದ್ದಾರೆ. ಇದು ಪ್ರಾಯೋಜಕತ್ವದ ಜಾಹೀರಾತಿಗಾಗಿ ಮಾಡಿದ ಸ್ಟಂಟ್. ಉರ್ಫಿ ಜಾವೇದ್ ಹಲವು ಬ್ರ್ಯಾಂಡ್‌ಗಳ ಪ್ರಮೋಶನ್‌ನಲ್ಲೂ ಸಕ್ರಿಯವಾಗಿದ್ದಾರೆ. ಇದೀಗ ಬೆಂಕಿ ಹಚ್ಚಿಕೊಳ್ಳುವ ಸಾಹಸ ಮಾಡಿದ್ದಾರೆ. ಇದೇ ವೇಳೆ ಉರ್ಫಿ ಜಾವೇದ್ ವಿಶೇಷ ಮನವಿಯೊಂದನ್ನು ಮಾಡಿದ್ದಾರೆ.ಈ ಸ್ಟಂಟ್‌ನ್ನು ಅನುಭವಿ ವೃತ್ತಿಪರ ತಜ್ಞರ ನೆರವಿನಿಂದ ಮಾಡಲಾಗಿದೆ. ಇದಕ್ಕಾಗಿ ವಿಶೇಷ ವಾತಾವರಣ ನಿರ್ಮಾಣ ಮಾಡಲಾಗಿದೆ. ಅಪಾಯಾಕಾರಿ ಸ್ಟಂಟ್‌ನ್ನು ಯಾರು ಮನೆಯಲ್ಲಿ ಪ್ರಯತ್ನಿಸಬೇಡಿ ಎಂದು ಉರ್ಫಿ ಮನವಿ ಮಾಡಿದ್ದಾರೆ.  ಉರ್ಫಿ ಜಾವೇದ್ ಸೋಶಿಯಲ್ ಮೀಡಿಯಾದಲ್ಲಿ  ಚಿತ್ರ ವಿಚಿತ್ರ ಡ್ರೆಸ್ ಮೂಲಕವೂ ಗಮನ ಸೆಳೆದಿದ್ದಾರೆ. 

ಕಣ್ಣು ಕದ್ದು ನೋಡ್ತಿದೆ-ಮನಸ್ಸು ಮುದ್ದು ಮಾಡ್ತಿದೆ,ಸೀರೆಯಲ್ಲಿ ಟೆಂಪರೇಚರ್ ಹೆಚ್ಚಿಸಿದ ಉರ್ಫಿ!
 

Latest Videos
Follow Us:
Download App:
  • android
  • ios