ಮೈಮೇಲೆ ಮಲಗಿ ತುಟಿಗೆ ತುಟಿ ಸವರಿದರೂ, ವಿರೋಧಿಸದೆ ತಬ್ಬಿಕೊಂಡ ಪಡುಕೋಣೆ!

ಮನೆಯಲ್ಲಿ ಹಾಸಿಗೆಯ ಮೇಲೆ ಮಲಗಿರುವಾಗ ಮೈಮೇಲೆ ಬಂದು ತುಟಿಗೆ ತುಟಿ ಸವರಿದರೂ ವಿರೋಧಿಸದೇ ತಬ್ಬಿಕೊಂಡು ಮುದ್ದಾಡಿದ ಪಡುಕೋಣೆಯ ವೀಡಿಯೋ ವೈರಲ್‌ ಆಗಿದೆ.

kuttee Lying on the Ashika padukone and kissing lips but she was hug the dog sat

ಸಿನಿಮಾ ಇರಲಿ, ಕಿರುತೆರೆ ಇರಲಿ ಟಿವಿ ಪರದೆಯಲ್ಲಿ ಕಾಣಿಸಿಕೊಂಡರೆಂದರೆ ಅವರನ್ನು ಸೆಲೆಬ್ರಿಟಿಯನ್ನಾಗಿ ಮಾಡುವ ಅಭಿಮಾನಿಗಳು ಅವರನ್ನು ಫಾಲೋ ಮಾಡಲು ಶುರು ಮಾಡುತ್ತಾರೆ. ಇನ್ನು ಸೆಲೆಬ್ರಿಟಿ ಎನಿಸಿಕೊಂಡ ನಂತರ ಅವರು ಯಾವುದೇ ಕೆಲಸ ಮಾಡಿದರೂ ದೊಡ್ಡ ಸುದ್ದಿಯೇ ಆಗುತ್ತದೆ. ಇಲ್ಲಿಯೂ ಕೂಡ ಮಂಗಳೂರು ಬೆಡಗಿ ನಟಿ ಪಡುಕೋಣೆಯ ಮೈಮೇಲೆ ಮಲಗಿ ತುಟಿಗೆ ಮುತ್ತು ನೀಡುವಾಗ ಮೇಲ್ನೋಟಕ್ಕೆ ವಿರೋಧಿಸಿದರೂ ನಂತರ ತಬ್ಬಿಕೊಂಡು ಮಲಗಿದ ವೀಡಿಯೋ ವೈರಲ್‌ ಆಗಿದೆ.

ಹೌದು, ಈಗಾಗಲೇ ಸಿನಿಮಾ ನಟ- ನಟಿಯರು ಹಲವು ಗಾಸಿಪ್‌ಗಳನ್ನು ಮಾಡಿಕೊಳ್ಳುತ್ತಾರೆ. ಇನ್ನು ಕೆಲವರು ತಾವು ಮಾಡಿದ ಸಣ್ಣ ವಿಚಾರವೂ ಗಾಸಿಪ್‌ ಆಗುತ್ತದೆ. ಕರ್ನಾಟಕ ಮಂಗಳೂರು ಮೂಲದ ಬೆಡಗಿ ಆಶಿಕಾ ಪಡುಕೋಣೆ ಅವರು ತಮ್ಮ ನಾಯಿಯನ್ನು ಮುದ್ದಾಡುವಾಗ ನಡೆದ ದೃಶ್ಯಗಳು ಈಗ ವೈರಲ್‌ ಆಗುತ್ತಿದೆ. ಬಹುತೇಕ ಸೆಲೆಬ್ರಿಟಿಗಳು ಹಾಗೂ ಪ್ರಾಣಿ ಪ್ರಿಯರು ತಮ್ಮ ಮನೆಗಳಲ್ಲಿ ಸಾಕಿಕೊಳ್ಳುವ ನಾಯಿಗಳನ್ನು ತಮ್ಮ ಕುಟುಂಬ ಸದಸ್ಯರಂತೆ, ತಮ್ಮ ಪುಟಾಣಿ ಮಕ್ಕಳಂತೆ ಕೇರ್‌ ಮಾಡುತ್ತಾರೆ.

ಮಂಗಳೂರು ಬೆಡಗಿ ಆಶಿಕಾ ಪಡುಕೋಣೆ ಹಾಟ್‌ ಲುಕ್‌ ನೋಡಿ: ಇವಳೇನಾ ಸೀರೆಯುಡುವ 'ತ್ರಿನಯನಿ'

ಕನ್ನಡ ಮೂಲದವಳಾದರೂ ಆಶಿಕಾ ಪಡುಕೋಣೆ ಅವರು ತೆಲುಗು ಧಾರವಾಹಿಗಳಲ್ಲೇ ಹೆಚ್ಚಾಗಿ ಮಿಂಚಿದ್ದಾರೆ. ಸದ್ಯಕ್ಕೆ ತೆಲುಗು ಜೀ ವಾಹಿನಿತ ಪ್ರಸಿದ್ಧ ಧಾರವಾಹಿ ಆಗಿರುವ 'ತ್ರಿನಯನಿ' ಧಾರವಾಹಿಯಲ್ಲಿ ನಾಯಕಿಯಾಗಿ ನಟಿಸುತ್ತಿರುವ ಆಶಿಕಾ ಪಡುಕೋಣೆ ವೀಡಿಯೋ ಈಗ ಮತ್ತೊಮ್ಮೆ ವೈರಲ್‌ ಆಗುತ್ತಿದೆ. ಕಳೆದ 2 ವರ್ಷಗಳ ಹಿಂದೆ ಸ್ವತಃ ಆಶಿಕಾಳೇ 'ಕ್ಯೂಟ್‌ ಕುಟ್ಟೀಸ್‌' ಟ್ಯಾಗ್‌ಲೈನ್‌ ನೀಡಿ ವಿಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಇನ್ನು ಮದುವೆಯೂ ಆಗಿ ಸಂಸಾರ ಮತ್ತು ನಟನಾ ವೃತ್ತಿಯನ್ನು ಸರಿಯಾಗಿ ತೂಗಿಸುತ್ತಿದ್ದಾರೆ. 

ಛೀ ಎಂದು ಕಮೆಂಟ್‌ ಮಾಡಿದ ನೆಟ್ಟಿಗರು:  ಆಶಿಕಾ ಪಡುಕೋಣೆ ತಮ್ಮ ಮನೆಯ ನಾಯಿಯನ್ನು ತಾವು ಮಲಗುವ ಬೆಡ್‌ ಮೇಲೆಯೇ ಎಳೆದು ಮತ್ತಾಡಿದ್ದಾರೆ. ಈ ವೇಳೆ ನಾಯಿಯು ಆಶಿಕಾಳ ತುಟಿಯನ್ನು ನೆಕ್ಕಲು ಮುಂದಾಗಿದೆ. ಇದರಿಂದ ತಪ್ಪಿಸಿಕೊಂಡ ಆಶಿಕಾ, ಅದರ ಮುಖವನ್ನು ನೋಡಿ ನಂತರ ಗಟ್ಟಿಯಾಗಿ ತಬ್ಬಿಕೊಂಡು ಪ್ರೀತಿಯನ್ನು ಕೊಟ್ಟಿದ್ದಾರೆ. ಇದಕ್ಕೆ ಹಲವರು ಛೀ ಎಂದು ಕಮೆಂಟ್‌ ಕೂ ಮಾಡಿದ್ದಾರೆ. ಇನ್ನು ಕೆಲವರು ನಾಯಿಯನ್ನು ಯಾಕೆ ಹಾಸಿಗೆ ಮೇಲೆ ಕರೆದುಕೊಂಡು ಮುದ್ದಾಡುತ್ತೀರಿ, ಅದರ ಬದಲು ಒಬ್ಬ ಹುಡುಗನನ್ನು ಕರೆದುಕೊಳ್ಳಬಾರದೇ ಎಂದು ಕಮೆಂಟ್‌ ಮಾಡಿದ್ದಾರೆ. ಆದರೆ, ಇದ್ಯಾವುದಕ್ಕೂ ಆಶಿಕಾ ಪ್ರತಿಕ್ರಿಯೆ ನೀಡಿಲ್ಲ.

ತೆಲುಗು ಸೀರಿಯಲ್‌ ಲೋಕವನ್ನು ಆಳುತ್ತಿರುವ ಕನ್ನಡಿಗರು: ಇವರ ನಟನೆಗೆ ಆಂಧ್ರದ ಜನತೆ ಕ್ಲೀನ್‌ ಬೋಲ್ಡ್‌

ಸಾಮಾಜಿಕ ಜಾಲತಾಣದಲ್ಲಿ ಫುಲ್‌ ಆಕ್ಟಿವ್: ಮಂಗಳೂರಿನ ಬೆಡಗಿ ಆಗಿರುವ ಆಶಿಕಾ ಪಡುಕೋಣೆ ತೆಲುಗು ಸೀರಿಯಲ್‌ ಇಂಡಸ್ಟ್ರಿಯ ನಂಬರ್‌ ಒನ್‌ ಬೇಡಿಕೆ ನಟಿಯರಲ್ಲಿ ಒಬ್ಬರಾಗಿದ್ದಾರೆ. ಮೂಲತಃ ಕನ್ನಡದವರಾದ ಆಶಿಕಾ ಪಡುಕೋಣೆ ತೆಲುಗಿನಲ್ಲಿಯೇ ಗಟ್ಟಿ ನೆಲೆಯೂರಿದ್ದು, ಅವಕಾಶ ಸಿಕ್ಕರೆ ಕನ್ನಡಕ್ಕೂ ಬರುವುದಾಗಿ ಹೇಳಿದ್ದಾರೆ. ಆಗಾಗ ಪ್ರವಾಸ ಕೈಗೊಳ್ಳುವ ಅವರು ಹಾಟ್‌ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ.

 

Latest Videos
Follow Us:
Download App:
  • android
  • ios