ಸರ್ಕಾರಿ ಗೌರವ, ಸಾರ್ವಜನಿಕ ಪ್ರದರ್ಶನ ಯಾವುದೂ ಬೇಡ: ಕಾರ್ನಾಡರ ಕೊನೆಯ ಮಾತು ನೆನೆದ ನಿರ್ದೇಶಕ ಚೈತನ್ಯ
ಗಿರೀಶ್ ಕಾರ್ನಾಡ್ ನಿಧನರಾಗಿ ಐದು ವರ್ಷಗಳಾಗಿದ್ದು, ಅವರ ಕೊನೆ ದಿನಗಳ ಮಾತು ನೆನಪಿಸಿಕೊಂಡಿದ್ದಾರೆ ನಿರ್ದೇಶಕ ಕೆ.ಎಂ.ಚೈತನ್ಯ
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ, ನಟ ಗಿರೀಶ್ ಕಾರ್ನಾಡ್ ನಿಧನರಾಗಿ ಐದು ವರ್ಷಗಳೇ ಸಂದಿವೆ. 2019ರ ಜೂನ್ 10ರಂದು ಕಾರ್ನಾಡ್ ಅವರು ಇಹಲೋಕ ತ್ಯಜಿಸಿದರು. 81ನೇ ವಯಸ್ಸಿನಲ್ಲಿ ಅವರು ವಯೋಸಹಜ ಸಮಸ್ಯೆಯಿಂದ ಬಳಲುತ್ತಿದ್ದರು. ಅವರ ಅಂತ್ಯಕ್ರಿಯೆಯ ಸಂದರ್ಭ ಭಾರಿ ಸುದ್ದಿ ಮಾಡಿತ್ತು. ಇದಕ್ಕೆ ಕಾರಣ, ಸಹಜವಾಗಿ ಇಂಥ ಸಾಹಿತಿಗಳು ಹಾಗೂ ಸೆಲೆಬ್ರಿಟಿಗಳು ಮೃತಪಟ್ಟಾಗ ಸರ್ಕಾರಿ ಗೌರವ ಸಲ್ಲಿಸಲಾಗುತ್ತದೆ. ಅವರ ಪಾರ್ಥಿವ ಶರೀರವನ್ನು ಜನರ ದರ್ಶನಕ್ಕೆ ಇಡಲಾಗುತ್ತದೆ. ಹೀಗೆ ಹಲವಾರು ವಿಧಿ ವಿಧಾನಗಳನ್ನು ನೆರವೇರಿಸಲಾಗುತ್ತದೆ. ಆದರೆ ಗಿರೀಶ್ ಕಾರ್ನಾಡ್ ಅವರ ವಿಷಯದಲ್ಲಿ ಹಾಗೆ ಆಗಿರಲಿಲ್ಲ. ಯಾವುದೇ ಧರ್ಮದ ಸಂಪ್ರದಾಯ ಇಲ್ಲದೆ, ಸರ್ಕಾರಿ ಗೌರವಗಳೂ ಇಲ್ಲದೇ ಸರಳವಾಗಿ ಅಂತ್ಯಸಂಸ್ಕಾರ ನಡೆಸಲಾಗಿತ್ತು.
ಇದರ ಬಗ್ಗೆ ಇದೀಗ ಚಲನಚಿತ್ರ ನಿರ್ದೇಶಕ, ರಂಗಭೂಮಿ ಕಲಾವಿದ ಕೆ.ಎಂ.ಚೈತನ್ಯ ಅವರು ಮಾತನಾಡಿದ್ದಾರೆ. ರ್ಯಾಪಿಡ್ ರಶ್ಮಿ ಅವರ ಕಾರ್ಯಕ್ರಮದಲ್ಲಿ ಗಿರೀಶ್ ಕಾರ್ನಾಡರ ಅಂತಿಮ ದಿನಗಳ ಬಗ್ಗೆ ಮಾತನಾಡಿದ ಅವರು, ಕಾರ್ನಾಡ್ ಅವರು ನನಗೆ ಕೊನೆಯ ದಿನಗಳಲ್ಲಿ ಹೀಗೆಯೇ ಹೇಳಿದ್ದರು. ಯಾವುದೇ ಸರ್ಕಾರಿ ವಿಧಿ ವಿಧಾನ ಬೇಡ, ಅಂತಿಮ ದರ್ಶನಕ್ಕೆ ಜನರಿಗಾಗಿ ಇಟ್ಟು ನೂಕು ನುಗ್ಗಲು ಎಲ್ಲಾ ಮಾಡುವುದು ಬೇಡ. ಸಿಂಪಲ್ ಆಗಿ ಯಾವುದೇ ಗಲಾಟೆ ಇಲ್ಲದೆಯೇ ನೆರವೇರಬೇಕು ಎಂದು ಹೇಳಿದ್ದರು. ಅದರಂತೆಯೇ ನಾವು ನಡೆದುಕೊಂಡೆವು. ಗಿರೀಶ್ ಕಾರ್ನಾಡ್ ಹಿರಿಯ ಪುತ್ರ ರಘು ಕಾರ್ನಾಡ್ ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ಇದಕ್ಕೂ ಮುನ್ನ ಕೆಲವು ಗಣ್ಯರು ವಿದ್ಯುತ್ ಚಿತಾಗಾರಕ್ಕೆ ಭೇಟಿ ನೀಡಿ ಗಿರೀಶ್ ಕಾರ್ನಾಡ್ ಅವರಿಗೆ ಅಂತಿಮ ನಮನ ಸಲ್ಲಿಸಿದರು ಎಂದಿದ್ದಾರೆ.
ಸೀರಿಯಲ್ನಲ್ಲಿ ಜೀವ ಕಳಕೊಂಡು ಪಾತ್ರ ಮುಗಿಸಿದ ಪುಟ್ಟಕ್ಕನ ಮಗಳು ಸ್ನೇಹಾ ಸೀಕ್ರೇಟ್ ಹೇಳೇಬಿಟ್ರು!
ಆದರೆ ಅದು ಹೇಳದ್ದಷ್ಟು ಸುಲಭವಾಗಿರಲಿಲ್ಲ. ಗಿರೀಶ್ ಕಾರ್ನಾಡ್ ಅವರಂಥ ವ್ಯಕ್ತಿ ನಿಧನರಾದಾಗ, ಅವರ ಅಂತ್ಯಕ್ರಿಯೆ ಅಷ್ಟು ಸುಲಭದಲ್ಲಿ ಅವರ ಆಸೆಯಂತೆ ಈಡೇರಿಸುವುದು ಕಷ್ಟವೇ ಆಗೋಯ್ತು. ಅವರ ಅಂತಿಮ ದರ್ಶನ ಪಡೆಯಬೇಕು, ಅವರ ದೇಹವನ್ನು ಪ್ರದರ್ಶನಕ್ಕಾಗಿ ಇಡಿ ಎಂದೆಲ್ಲಾ ಹಲವರು ಹೇಳಿದರು. ಸರ್ಕಾರಿ ಮರ್ಯಾದೆಯೊಂದಿಗೆ ಅಂತ್ಯಕ್ರಿಯೆ ನಡೆಯಬೇಕು ಎಂಬ ಮಾತೂ ಕೇಳಿ ಬಂತು. ಆದರೆ ಬಹಳ ಶ್ರಮವಹಿಸಿ ಅವರ ಇಚ್ಛೆಯನ್ನು ಈಡೇರಿಸಲಾಯಿತು ಎಂದಿದ್ದಾರೆ ಚೈತನ್ಯ. ಅವರ ಅಂತಿಮ ಇಚ್ಛೆಯಂತೆ, ಸಾರ್ವಜನಿಕರ ದರ್ಶನಕ್ಕೆ ವಿಶೇಷ ವ್ಯವಸ್ಥೆ ಇರುವುದಿಲ್ಲ. ಅಂತಿಮ ದರ್ಶನ ಮಾಡಲು ಬಯಸುವವರು ಕಲ್ಲಹಳ್ಳಿ ಚಿತಾಗಾರಕ್ಕೆ ಬರಬೇಕೆಂದು ಕಾರ್ನಾಡ್ ಅವರ ಪುತ್ರ ರಘು ಕರ್ನಾಡ್ ಮನವಿ ಮಾಡಿದ್ದರು ಎಂದು ಹೇಳಿದರು.
ಅಂದಹಾಗೆ, ಗಿರೀಶ್ ಕಾರ್ನಾಡ್ ಅವರ ಪರಿಚಯ ಹೆಚ್ಚಿಗೆ ಮಾಡಬೇಕಾದ ಅಗತ್ಯವೇ ಇಲ್ಲ. ಜ್ಞಾನಪೀಠ ಪ್ರಶಸ್ತಿ ಪಡೆದ 8 ಕನ್ನಡಿಗರ ಪೈಕಿ ಇವರೂ ಒಬ್ಬರು. ಹುಟ್ಟಿದ್ದು ಮಹಾರಾಷ್ಟ್ರದ ಮಾಥೇರಾನದಲ್ಲಿ. ಆದರೆ ವಿದ್ಯಾಭ್ಯಾಸ ಎಲ್ಲವೂ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ನಡೆಯಿತು. ಧಾರವಾಡದಲ್ಲಿ ಪ್ರೌಢಶಿಕ್ಷಣ ಮತ್ತು ಪದವಿ ಬಳಿಕ, ಹೋರ್ಡ್ಸ್ ಸ್ಕಾಲರ್‌ಶಿಪ್‌ನೊಂದಿಗೆ ಆಕ್ಸ್‌ಫರ್ಡ್‌ನಲ್ಲಿ ಹೆಚ್ಚಿನ ವ್ಯಾಸಾಂಗ ಮಾಡಿದರು. ಆಕ್ಸ್‌ಫರ್ಡ್ ಡಿಬೇಟ್ ಕ್ಲಬ್‌ಗೆ ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಈ ಗೌರವ ಪಡೆದ ಮೊದಲ ಏಷ್ಯಾದ ಪ್ರಜೆ ಎಂಬ ಖ್ಯಾತಿ ಗಳಿಸಿದರು. ಷಿಕಾಗೋ ವಿಶ್ವವಿದ್ಯಾಲಯದಲ್ಲಿ ಸಂದರ್ಶನ ಪ್ರಾಧ್ಯಾಪಕರಾಗಿ ಸಲ್ಲಿಸಿದರು. ಇವರು ಕನ್ನಡವಲ್ಲದೆ ಹಿಂದಿ, ಪಂಜಾಬಿ, ಮರಾಠಿ ಹಾಗೂ ಭಾರತೀಯ ಹಲವು ಭಾಷೆಗಳಿಗೆ ತಮ್ಮ ನಾಟಕಗಳು ಅನುವಾದಗೊಂಡು, ಪ್ರದರ್ಶನಗೊಂಡವು.
ಬಿಗ್ಬಾಸ್ಗೆ ಪುನಃ ಹೋಗ್ತಾರಾ ಜಗದೀಶ್? ನೇರ ಪ್ರಸಾರದಲ್ಲಿ ದೊಡ್ಮನೆಯ ಗುಟ್ಟು ಬಿಚ್ಚಿಟ್ಟ ಲಾಯರ್ ಹೇಳಿದ್ದೇನು?