ಅರೆ ಹೆಡ್ಲೈನ್ ನೋಡಿದ ಮೇಲೆ ಈ ಪ್ರಶ್ನೆ ನಿಮ್ಮನ್ನು ಕಾಡುತ್ತಿರಬೇಕಲ್ಲಾ... ನೋಟಿಸ್ ಮಾಡಿರಲೇ ಇಲ್ಲ, ಆದರೆ ಬಹುತೇಕ ಪ್ಯಾಸೆಂಜರ್ ಪ್ಲೇನ್‌ಗಳು ಬಿಳಿಯ ಬಣ್ಣದಲ್ಲೇ ಇರುವುದಂತೂ ಹೌದು. ಏಕೆ ಅವುಗಳಿಗೆ ಬೇರೆ ಬಣ್ಣ ಬಳಸುವುದಿಲ್ಲ? ಬಿಳಿ ಬಣ್ಣ ಇರುವುದರಿಂದ ಏನು ಲಾಭ? 

ಆಕಾಶದ ಬಣ್ಣಕ್ಕೆ ಮ್ಯಾಚ್ ಮಾಡುವುದರಿಂದೇನೋ ಲಾಭವಿರಬೇಕು, ಪಕ್ಷಿಗಳು ಬಿಳಿ ಬಣ್ಣ ಗುರುತಿಸುತ್ತವೇನೋ ಇತ್ಯಾದಿ ಇತ್ಯಾದಿ ಉತ್ತರಗಳು ತಲೆಯಲ್ಲಿ ಓಡುತ್ತಿವೆ ಅಲ್ಲವೇ? ಆದರೆ, ಇದರ ಉತ್ತರ ವಿಶಿಷ್ಠವಾಗಿದೆ. ಈ ಕುರಿತ ವಿವರ ಇಲ್ಲಿದೆ ನೋಡಿ.

ಸೆಕ್ಸ್‌ನಿಂದ ಪತ್ನಿಗೆ ವಿಚಿತ್ರ ಅಲರ್ಜಿ; ಕಾರಣ ತಿಳಿಯದೆ ಪತಿ ಕಂಗಾಲು!

ಕಲರ್‌ಲೆಸ್
ಸ್ವಲ್ಪ ಹಿಂದೆ ಹೋದರೆ ವಿಮಾನಗಳಿಗೆ ಬಣ್ಣವನ್ನೇ ಬಳಿಯುತ್ತಿರಲಿಲ್ಲ. ಆಗ ಇಡೀ ವಿಮಾನ ಮೆಟಲ್ ಬಣ್ಣದಲ್ಲೇ ಇರುತ್ತಿತ್ತು. ಅಂದರೆ ಅಡುಗೆ ಮನೆಯ ಪಾತ್ರೆಯ ಬಣ್ಣದಲ್ಲಿ ವಿಮಾನ ಕಂಗೊಳಿಸುತ್ತಿತ್ತು. ಆಕಾಶದಲ್ಲಿ ಸೂರ್ಯನ ಬೆಳಕಿಗೆ ಮಿಂಚುತ್ತಾ ಸಾಗುತ್ತಿದ್ದವು. ಈಗ ಇಂಥ ವಿಮಾನಗಳು ಕಾಣಸಿಗುವುದು ಅಪರೂಪ. ಈಗ ಬಹುತೇಕವು ಬಿಳಿ ಬಣ್ಣ ಹೊಡೆಸಿಕೊಂಡಿರುತ್ತವೆ. ಆದರೆ, ಆಗ ಏಕೆ ಪೇಂಟ್ ಮಾಡುತ್ತಿರಲಿಲ್ಲ ಎಂದು ಮೊದಲು ತಿಳಿದುಕೊಳ್ಳೋಣ. ಮೊದಲನೆಯ ಕಾರಣವೆಂದರೆ, ಮೆಟಲ್ ಮೇಲ್ಮೆಯ ಮೇಲೆ ಏನಾದರೂ ಮುರಿದಿದ್ದರೆ, ಕ್ರ್ಯಾಕ್ ಬಂದಿದ್ದರೆ ಸುಲಭವಾಗಿ ಕಾಣಿಸುತ್ತಿತ್ತು ಎಂಬುದು. ಮತ್ತೊಂದು ಕಾರಣವೆಂದರೆ ಏರ್‌ಲೈನ್‌ನ ಎಲ್ಲ ಭಾಗಗಳೂ ಮೆಟಲ್ ಬಣ್ಣದೊಂದಿಗೆ ಮ್ಯಾಚ್ ಆಗುತ್ತಿದ್ದವು ಎಂಬುದು. ಈ ಲಾಭಗಳಿದ್ದ ಮೇಲೆ ಬಣ್ಣ ಬಳಿವ ಮನಸ್ಸು ಮಾಡಿದ್ಯಾಕೆ ?

ಬಣ್ಣ ಪಡೆದಿದ್ದು ಹೇಗೆ?
ಬಣ್ಣರಹಿತ ಪ್ಲೇನ್‌ಗಳು ಒಂದೇ ಬಹಳ ಚೆನ್ನಾಗಿ ಕಾಣಿಸುತ್ತಿದ್ದವು, ಇಲ್ಲವೇ ಬಹಳ ಕೆಟ್ಟದಾಗಿ ಕಾಣುತ್ತಿದ್ದವು. ಅಂದರೆ ಸ್ವಚ್ಛವಾಗಿದ್ದ ಮೆಟಲ್ ಮೇಲ್ಮೆಯ ವಿಮಾನಗಳು ಸುಂದರವೇ. ಆದರೆ, ನಿಧಾನವಾಗಿ ಅವುಗಳ ಮೇಲೆ ಕೊಳೆ, ಧೂಳು, ಮಣ್ಣು ಶೇಖರವಾದಂತೆಲ್ಲ ಅವು ಬಹಳ ಎದ್ದು ಕಾಣುತ್ತಿದ್ದವು. ಜೊತೆಗೆ, ಮೆಟಲ್ ಮೇಲೆ ಸ್ಕ್ರ್ಯಾಚ್ ಆದರೂ ದೊಡ್ಡ ಕಲೆಯಂತೆ ಕಾಣಿಸುತ್ತಿತ್ತು. ಇನ್ನು ಮೆಟಲ್ ಎಂದ ಮೇಲೆ ತುಕ್ಕು ಹಿಡಿಯುವ ಸಮಸ್ಯೆಯೂ ಹೊರತಲ್ಲ.
ಇವೆಲ್ಲದರ ಜೊತೆಗೆ ಏರ್‌ಕ್ರಾಫ್ಟ್‌ಗಳು ಹಾರಾಟ ನಡೆಸುವಾಗ ಗಂಭೀರ ಯುವಿ ರೇಡಿಯೇಶನ್‌ಗೆ ಮೈಯೊಡ್ಡುತ್ತವೆ. ಅವು ಎದುರಿಸಬೇಕಾದ ಉಷ್ಣತೆ ಬಹಳ ಹೆಚ್ಚು ಅಥವಾ ಬಹಳ ಕಡಿಮೆ ಇರುವ ಸಾಧ್ಯತೆಗಳೂ ಇರುತ್ತದೆ. ಹಾಗಾಗಿ ಅವುಗಳ ಮೇಲ್ಮೆ ಮೆಕ್ಯಾನಿಕಲ್ ಮತ್ತು ಥರ್ಮಲ್ ಶಾಕ್‌ಗಳನ್ನು ತೆಗೆದುಕೊಳ್ಳಲು ಸದಾ ರೆಡಿಯಿರಬೇಕು. ಇವೆಲ್ಲ ಸಮಸ್ಯೆಗಳಿಗೆ ಪೇಯಿಂಟ್ ಒಂದು ಪರಿಹಾರವಾಗಿ ಒದಗುತ್ತದೆ. 
ಹಾಗಾಗಿ, ಕ್ವಾಂಟಾಸ್, ಡೆಲ್ಟಾ, ಕಾಂಟಿನೆಂಟಲ್ ಮುಂತಾದ ಏರ್‌ಲೈನ್‌ಗಳು ತಮ್ಮ ವಿಮಾನಗಳಿಗೆ ಬಿಳಿಯ ಬಣ್ಣ ಹೊಡೆಸುವ ಮೂಲಕ ಪದೇ ಪದೆ ಮೆಟಲ್ ಮೇಲ್ಮೆ ಸ್ವಚ್ಛಗೊಳಿಸಿ ಪಾಲಿಶ್ ಹಾಕಿಸಲು ಬೇಕಾದ ಖರ್ಚು ಉಳಿಸುವ ನಿರ್ಧಾರಕ್ಕೆ ಬಂದವು. 

ಗರ್ಭಿಣಿಯರು ಕೊರೋನಾ ಸೋಂಕಿಗೆ ತುತ್ತಾಗುವ ಸಾಧ್ಯತೆ ಹೆಚ್ಚಿದೆಯಾ?

ಬಿಳಿಯೇ ಏಕೆ?
ಬಣ್ಣ ಹಾಕಿದ್ದು ಓಕೆ, ಆದರೆ ಬಿಳಿಯೇ ಏಕೆ ಎಂಬ ಪ್ರಶ್ನೆ ಈಗ ಎದುರಾಗಿರಬಹುದು. ಇದಕ್ಕೊಂದು ವಿಶಿಷ್ಠ ಕಾರಣವಿದೆ. ಹೌದು, ಬಿಳಿಯ ಬಣ್ಣ ಉಳಿದೆಲ್ಲ ಬಣ್ಣಗಳಿಗಿಂತ ಹಗುರ ಎಂಬುದೇ ಆ ಕಾರಣ. ಅಂದರೆ ಬೋಯಿಂಗ್ 747ನಂಥ ವಿಮಾನಕ್ಕೆ ಪೂರ್ತಿ ಬಣ್ಣ ಬಳಿಯಲು ಬಿಳಿಯದಾದರೆ 250 ಕೆಜಿಯಷ್ಟು ಬಣ್ಣ ಬೇಕು. ಆದರೆ, ಬೇರೆ ಬಣ್ಣಗಳಾದರೆ ಅವು ಹೆಚ್ಚು ಭಾರವಿರುತ್ತವೆ. ಈ ಎಕ್ಸ್ಟ್ರಾ ತೂಕವನ್ನೂ ಏರ್‌ಲೈನ್ ಭರಿಸುವಂತೆ ವ್ಯವಸ್ಥೆ ಮಾಡಬೇಕಾಗುತ್ತದೆ. ಹಾಗಾಗಿ, ಇದ್ದಿದುದರಲ್ಲಿ ಬಿಳಿಬಣ್ಣವೇ ಹಗುರವಾಗಿದ್ದರಿಂದ, ಬಣ್ಣವಿಲ್ಲದೆ ಇದ್ದರೆ ಹಲವು ಸಮಸ್ಯೆಗಳು ಕಾಡುವುದರಿಂದ ಏರ್‌ಲೈನ್ಸ್‌ಗಳು ಬಿಳಿಬಣ್ಣವನ್ನು ಹಚ್ಚುವ ನಿರ್ಧಾರಕ್ಕೆ ಬಂದವು. 

ಬಣ್ಣವು ಏರ್‌ಕ್ರಾಫ್ಟ್‌ನ ಜೀವಿತಾವಧಿಯನ್ನು ಹೆಚ್ಚಿಸುತ್ತದೆ. ಅದು ಬಿಳಿಯಾದಾಗಿದದ್ದರೆ ಸೂರ್ಯನ ಕಿರಣಗಳನ್ನು ಪ್ರತಿಫಲಿಸುತ್ತದೆ. ಕಪ್ಪು ಬಣ್ಣಕ್ಕೆ ಹೋಲಿಸಿದರೆ  ಬಿಳಿಯ ಬಣ್ಣ ಬಿಸಿಲಿಗೆ ಹೆಚ್ಚು ಕಾಯುವುದಿಲ್ಲ. ಜೊತೆಗೆ, ಇತರೆ ಬಣ್ಣಗಳಂತೆ ಬಿಳಿ ಫೇಡ್ ಆಗುವುದಿಲ್ಲ ಕೂಡಾ. 

ವಾಟ್ಸ್ ಆ್ಯಪ್‌ನಲ್ಲಿ ಸುಳ್ಳು ಸುದ್ದಿ ಪತ್ತೆ ಹಚ್ಚಿ

ಹೇಗೆ ಬಣ್ಣ ಹಚ್ಚುತ್ತಾರೆ?
ಕಾರೊಂದಕ್ಕೆ ಹೇಗೆ ಬಣ್ಣ ಹಚ್ಚುತ್ತಾರೋ ಹಾಗೆಯೇ ವಿಮಾನಕ್ಕೆ ಕೂಡಾ ಬಣ್ಣ ಹಚ್ಚಲಾಗುತ್ತದೆ. ಅಂದರೆ ಸ್ಪ್ರೇ ಗನ್ ಬಳಸಿ ವಿಮಾನಕ್ಕೆ ಪೇಯಿಂಟ್ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ಕಿಟಕಿಗಳು ಸೇರಿದಂತೆ ಯಾವ ಭಾಗಕ್ಕೆ ಬಣ್ಣ ಬೇಡವೋ ಅವನ್ನು ಪೇಪರ್‌ನಿಂದ ಮುಚ್ಚಿಕೊಂಡಿರಲಾಗುತ್ತದೆ.