Travel Tips : ಇಲ್ಲಿಗೆಲ್ಲ ಮಹಿಳೆಯರು ಹೋಗೋ ಹಾಗಿಲ್ಲ
ಪ್ರಪಂಚದಲ್ಲಿ ಸಾಕಷ್ಟು ಪ್ರವಾಸಿ ತಾಣಗಳಿವೆ. ನಾನಾ ದೇವಸ್ಥಾನಗಳಿವೆ. ಅವೆಲ್ಲವೂ ಪ್ರವಾಸಿಗರಿಗೆ, ಭಕ್ತರಿಗೆ ತೆರೆದುಕೊಂಡಿರೋದಿಲ್ಲ. ಕೆಲ ಪ್ರದೇಶಗಳು ಪುರುಷರಿಗೆ ಮಾತ್ರ ಪ್ರವೇಶದ ಅವಕಾಶ ನೀಡುತ್ತವೆ. ಈಗಿನ ಕಾಲದಲ್ಲೂ ಹಳೇ ನಿಯಮ ಪಾಲನೆ ಮಾಡ್ತಿರುವ ಪ್ಲೇಸ್ ಯಾವುದು ಗೊತ್ತಾ?
ಮಹಿಳಾ ದಿನಾಚರಣೆ ಹತ್ತಿರ ಬರ್ತಿದೆ. ಮಹಿಳೆಯರನ್ನು ಹಾಡಿ ಹೊಗಳುವ ಕೆಲಸ ನಡೆಯುತ್ತಿದೆ. ಸಾಧಕಿಯರಿಗೆ ಗೌರವ ಸಲ್ಲಿಸುವ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಆದ್ರೆ ಮಹಿಳೆ ಎಷ್ಟೇ ಉನ್ನತ ಸ್ಥಾನದಲ್ಲಿರಲಿ, ಎಲ್ಲ ಕ್ಷೇತ್ರದಲ್ಲೂ ಸಾಧನೆ ಮಾಡಿರಲಿ, ಮಹಿಳೆಯನ್ನು ಈಗ್ಲೂ ಪುರುಷನ ಸಮಾನ ನೋಡಲಾಗ್ತಿಲ್ಲ. ಆಕೆಯನ್ನು ಈಗಲೂ ದುರ್ಬಲೆ ಎಂದೇ ನೋಡಲಾಗುತ್ತದೆ. ಮುಟ್ಟಿನ ಸಮಯದಲ್ಲಿ ಮೂಢನಂಬಿಕೆ ಹೆಸರಿನಲ್ಲಿ ಆಕೆಯನ್ನು ದೂರ ಇಡುವುದು ಮಾತ್ರವಲ್ಲದೆ ಕೆಲ ಪ್ರದೇಶಗಳಿಗೆ ಈಗ್ಲೂ ಆಕೆ ಪ್ರವೇಶವನ್ನು ನಿಷೇಧಿಸಲಾಗಿದೆ. ಭಾರತದಲ್ಲಿಯೂ ಕೆಲ ಪ್ರದೇಶಗಳಿಗೆ ಮಹಿಳೆ ಹೋಗುವಂತಿಲ್ಲ. ಹಾಗೆ ವಿಶ್ವದ ಕೆಲ ಪ್ರದೇಶಗಳಲ್ಲಿ ಇಂದಿಗೂ ಮಹಿಳೆಗೆ ಪ್ರವೇಶವಿಲ್ಲ. ನಾವಿಂದು, ಮಹಿಳೆಯನ್ನು ನಿಷೇಧಿಸಲಾದ ವಿಶ್ವದ 6 ಪ್ರಮುಖ ಜಾಗ ಯಾವುದು ಎಂಬುದನ್ನು ನಿಮಗೆ ಹೇಳ್ತೇವೆ.
ಈ ಪ್ರದೇಶಕ್ಕೆ ಮಹಿಳೆ ಹೋಗುವಂತಿಲ್ಲ :
ಇರಾನಿ (Irani) ಸ್ಪೋರ್ಟ್ಸ್ ಸ್ಟೇಡಿಯಂ : ಇರಾನಿನ ಕ್ರೀಡಾಂಗಣಕ್ಕೆ ಮಹಿಳೆಯರು ಬಯಸಿದರೂ ಹೋಗುವಂತಿಲ್ಲ. ಮಹಿಳೆ (Woman) ಇಲ್ಲಿಗೆ ಬರುವುದನ್ನು ನಿಷೇಧಿಸಲಾಗಿದೆ. 1979 ರ ಕ್ರಾಂತಿಯ ನಂತರ, ಮಹಿಳೆಯರ ಪ್ರವೇಶವನ್ನು ನಿಷೇಧಿಸಲಾಯಿತು. ಪುರುಷರು ಶಾರ್ಟ್ ಧರಿಸಿ ಆಡುವುದನ್ನು ಮಹಿಳೆಯರು ನೋಡ್ತಾರೆ. ಇದು ಸರಿಯಲ್ಲವೆಂದು ಇರಾನ್ ಸರ್ಕಾರ ಭಾವಿಸಿದೆ. ಅನೇಕ ಬಾರಿ ಪುರುಷರು ಆಟದ ಸಮಯದಲ್ಲಿ ಅಸಭ್ಯ ಭಾಷೆಯನ್ನು ಬಳಸುತ್ತಾರೆ. ಮಹಿಳೆಯರು ಅಲ್ಲಿ ಹಾಜರಿದ್ದರೆ ಅವರು ಕೂಡ ಅಂಥಹ ಭಾಷೆಯನ್ನು ಬಳಸ್ತಾರೆ. ಇದು ಸೂಕ್ತವಲ್ಲವೆಂಬುದು ಸರ್ಕಾರದ ಅಭಿಪ್ರಾಯ.
ಬೇಸಿಗೆ ರಜೆಯಲ್ಲಿ ಕೂಲ್ ಆಗ್ಬೇಕೆಂದ್ರೆ ಇಲ್ಲಿಗೆ ಹೋಗಿ
ಕಾರ್ತಿಕೇಯ (Karthikeya) ದೇವಸ್ಥಾನ, ಭಾರತ : ರಾಜಸ್ಥಾನದ ಪುಷ್ಕರ್ ನಗರದಲ್ಲಿ ಕಾರ್ತಿಕೇಯ ದೇವಸ್ಥಾನ (Temple) ವಿದೆ. ಅಲ್ಲಿ ಮಹಿಳೆಯರ ಪ್ರವೇಶವನ್ನು ನಿಷೇಧಿಸಲಾಗಿದೆ. ಇದು ಭಗವಂತ ಕಾರ್ತಿಕೇಯನಿಗೆ ಸಮರ್ಪಿತವಾಗಿದೆ. ಇಲ್ಲಿ ಆತನ ಬ್ರಹ್ಮಚರ್ಯ ರೂಪವನ್ನು ತೋರಿಸಲಾಗಿದೆ. ಯಾವುದೇ ಮಹಿಳೆ ಅಪ್ಪಿತಪ್ಪಿ ಇಲ್ಲಿಗೆ ಹೋದ್ರು ಆಕೆ ಶಾಪಗ್ರಸ್ತಳಾಗುತ್ತಾಳೆ ಎಂದು ಹೇಳಲಾಗುತ್ತದೆ. ಹಾಗಾಗಿಯೇ ಯಾವ ಮಹಿಳೆಯೂ ಈ ದೇವಸ್ಥಾನಕ್ಕೆ ಹೋಗೋದಿಲ್ಲ.
ಬರ್ನಿಂಗ್ ಟ್ರೀ ಕ್ಲಬ್, ಅಮೆರಿಕಾ : ಅಮೆರಿಕಾದಲ್ಲಿ ಬರ್ನಿಂಗ್ ಟ್ರೀ ಕಂಟ್ರಿ ಹೆಸರಿನ ವಿಶಿಷ್ಟವಾದ ಗಾಲ್ಫ್ ಕ್ಲಬ್ ಇದೆ. ಇದನ್ನು ಹವ್ಯಾಸಕ್ಕಾಗಿ ಮಾಡಲಾಗಿದೆ. ಪುರುಷರು ಮಾತ್ರ ಇಲ್ಲಿಗೆ ಬರಬಹುದು. ಈ ಕ್ಲಬ್ ಬಹಳ ಪ್ರಸಿದ್ಧವಾಗಿದೆ. ಇಲ್ಲಿಗೆ ಅಧ್ಯಕ್ಷರಿಂದ ಹಿಡಿದು ನ್ಯಾಯಾಧೀಶರವರೆಗೆ ಎಲ್ಲರೂ ಬರ್ತಾರೆ. ಹಾಗಾಗಿ ಮಹಿಳೆಯರ ಪ್ರವೇಶವನ್ನು ನಿಷೇಧಿಸಲಾಗಿದೆ.
ಮೌಂಟ್ ಅಥೋಸ್, ಗ್ರೀಸ್ : ಗ್ರೀಸ್‌ನ ಅಥೋಸ್ ಪರ್ವತವು ತುಂಬಾ ಸುಂದರವಾಗಿದೆ. ವಿಚಿತ್ರವೆಂದರೆ 1,000 ವರ್ಷಗಳ ಹಿಂದೆಯೇ ಇಲ್ಲಿ ಮಹಿಳೆಯರ ಪ್ರವೇಶಕ್ಕೆ ಸಂಪೂರ್ಣ ನಿಷೇಧವಿತ್ತು. ಮಹಿಳೆಯರು ಯಾವುದೇ ರೂಪದಲ್ಲಿ ಇಲ್ಲಿಗೆ ಬರುವಂತಿಲ್ಲ. ಅಂದರೆ, ಹೆಣ್ಣು ಪ್ರಾಣಿ ಕೂಡ ಇಲ್ಲಿಗೆ ಬರಲು ಸಾಧ್ಯವಿಲ್ಲ. ಕೇವಲ 100 ಆರ್ಥೊಡಾಕ್ಸ್ ಮತ್ತು 100 ಆರ್ಥೊಡಾಕ್ಸ್ ಪುರುಷರು ಮಾತ್ರ ಇಲ್ಲಿಗೆ ಬರಬಹುದು. ಸ್ತ್ರೀಯರ ಆಗಮನದಿಂದ ಇಲ್ಲಿನ ಗುರುಗಳ ಜ್ಞಾನದ ಪಯಣ ನಿಧಾನವಾಗುತ್ತದೆ ಎಂದು ನಂಬಲಾಗಿದೆ.
ಶಬರಿಮಲೆ, ಕೇರಳ : ಭಾರತದ ಕೇರಳದ ಶಬರಿಮಲೆ ದೇವಸ್ಥಾನದಲ್ಲಿ ಮಹಿಳೆಯರ ಪ್ರವೇಶವನ್ನು ಸಹ ನಿಷೇಧಿಸಲಾಗಿದೆ. ಈ ಬಗ್ಗೆಯೂ ಚರ್ಚೆ ನಡೆಯುತ್ತಿದೆ. 10 ರಿಂದ 50 ವರ್ಷದೊಳಗಿನ ಮಹಿಳೆಯರು ಈ ದೇವಸ್ಥಾನಕ್ಕೆ ಪ್ರವೇಶಿಸುವಂತಿಲ್ಲ. ದೇವಸ್ಥಾನದ ದೇವರು ಬ್ರಹ್ಮಚಾರಿಯಾಗಿರುವುದು ಮಹಿಳೆಯರ ನಿಷೇಧಕ್ಕೆ ಪ್ರಮುಖ ಕಾರಣ.
ಬರ್ಸಾನಾದಲ್ಲಿ ಸಂಭ್ರಮದ ಲಾತ್ಮಾರ್ ಹೋಳಿ… ರಾಧಾ- ಕೃಷ್ಣರನ್ನು ನೆನಪಿಸುವ ಹಬ್ಬವಿದು
ಓಕಿನೋಶಿಮಾ ದ್ವೀಪ, ಜಪಾನ್ : ಒಕಿನೋಶಿಮಾ ಜಪಾನ್‌ನ ಪವಿತ್ರ ದ್ವೀಪವಾಗಿದೆ. ಇದನ್ನು UNESCO ವಿಶ್ವ ಪರಂಪರೆಯಲ್ಲೂ ಸೇರಿಸಿದೆ. ಶಿಂಟೋ ಸಂಪ್ರದಾಯದ ಕಾರಣ ಮಹಿಳೆಯರು ಇಲ್ಲಿಗೆ ಬರುವಂತಿಲ್ಲ. ಶಿಂಟೋ ಸಂಪ್ರದಾಯವು ಬೌದ್ಧಧರ್ಮ, ಕನ್ಫ್ಯೂಷಿಯನಿಸಂ, ಟಾವೊ ತತ್ತ್ವ ಮತ್ತು ಚೀನಾದ ಸಂಯೋಜನೆಯಾಗಿದೆ.