ಅರೆರೆ..! ಇಲ್ಲಿ ಇಷ್ಟೊಂದು ಬ್ರಾ ನೇತುಹಾಕಿದ್ಯಾಕೆ ಗೊತ್ತಾ?
ಬ್ರಾ, ಮಹಿಳೆಯರ ಒಳ ಉಡುಪು. ಬ್ರಾ ಬಗ್ಗೆ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ಈ ಬ್ರಾ ಮಹಿಳೆಯ ಉಡುಪಾಗಿ ಮಾತ್ರವಲ್ಲ ಗೋಡೆಯಾಗಿಯೂ ಪ್ರಸಿದ್ಧಿಪಡೆದಿದೆ. ನ್ಯೂಜಿಲ್ಯಾಂಡ್ ನ ಒಂದು ಪ್ರದೇಶದಲ್ಲಿ ಬ್ರಾ ವಾಲ್ ಇದೆ.
ನಮ್ಮ ದೇಶದಲ್ಲಿ ಮುಚ್ಚಿಡುವ ವಸ್ತುಗಳಲ್ಲಿ ಮಹಿಳೆಯರು ಧರಿಸುವ ಒಳ ಉಡುಪು ಕೂಡ ಸೇರಿದೆ. ಬ್ರಾ ಹೆಸರನ್ನು ದೊಡ್ಡದಾಗಿ ಹೇಳದಂತೆ ಹುಡುಗಿಯರಿಗೆ ಪಾಲಕರು ಸಲಹೆ ನೀಡ್ತಾರೆ. ಮನೆ ಟೆರೆಸ್ ಮೇಲೆ ಬ್ರಾ ನೇತಾಡಿದ್ರೆ ಅದನ್ನು ವಿಚಿತ್ರವಾಗಿ ನೋಡುವವರಿದ್ದಾರೆ. ವಿಶ್ವದಲ್ಲಿಯೇ ಹೆಚ್ಚು ಮಾರಾಟವಾಗುವ ಒಳ ಉಡುಪಾಗಿರುವ ಈ ಬ್ರಾ ಬಗ್ಗೆ ಭಾರತದಲ್ಲಿ ಮಡಿವಂತಿಕೆಯಿದೆ. ಬ್ರಾ ಧರಿಸಬೇಕು, ಬೇಡ ಎನ್ನುವ ಬಗ್ಗೆಯೂ ಸಾಕಷ್ಟು ಚರ್ಚೆಯಿದೆ. ಬ್ರಾ ವಿರೋಧಿ ಹೋರಾಟಗಳು ಕೂಡ ಆಗಾಗ ನಡೆಯುತ್ತಿರುತ್ತವೆ. ಅದೇನೇ ಇರಲಿ, ಇಲ್ಲೊಂದು ದೇಶದಲ್ಲಿ ಬ್ರಾ ನೇತು ಹಾಕುವುದಕ್ಕೆ ವಿಶೇಷ ಮಹತ್ವವಿದೆ. ಆ ದೇಶದ ಒಂದು ಜಾಗದಲ್ಲಿ ಸಾವಿರಾರು ಬ್ರಾಗಳನ್ನು ತೂಗು ಹಾಕಲಾಗಿದೆ. ನಾವಿಂದು ಬ್ರಾ ಗೋಡೆಯ ಬಗ್ಗೆ ನಿಮಗೆ ಮಾಹಿತಿ ನೀಡ್ತೆವೆ.
ಬ್ರಾ (Bra) ಗೋಡೆ ಎಲ್ಲಿದೆ?: ನ್ಯೂಜಿಲೆಂಡ್ (New Zealand) ನ ಕಾರ್ಡ್ರೋನಾ (Cardrona) ದಲ್ಲಿ ನೀವು ಈ ಬ್ರಾ ಗೋಡೆಯನ್ನು ನೋಡಬಹುದು. ಅದು ಅಕ್ಷರಶಃ ಗೋಡೆಯಲ್ಲ. ತಂತಿ (wire) ಗೆ ಬ್ರಾಗಳನ್ನು ನೇತು ಹಾಕಿದ್ದು, ಅದು ಗೋಡೆಯಂತೆ ಕಾಣಿಸುತ್ತದೆ.
ಈ ನಗರ (City) ದಲ್ಲಿ ಬ್ರಾ ಗೋಡೆ ಏಕೆ ನಿರ್ಮಾಣವಾಗಿದೆ ? : ಕಾರ್ಡ್ರೋನಾದಲ್ಲಿ ಅತ್ಯಂತ ಕಡಿಮೆ ಜನಸಂಖ್ಯೆಯಿದೆ. ಆದ್ರೂ ಇದು ವಿಶ್ವದಲ್ಲಿ ಹೆಚ್ಚು ಪ್ರಸಿದ್ಧಿ ಪಡೆದಿದೆ. ಅದಕ್ಕೆ ಕಾರಣ ಬ್ರಾ ವಾಲ್. ಬ್ರಾ ವಾಲ್, ಕಾರ್ಡ್ರೋನಾ ನಗರದಿಂದ ಸ್ವಲ್ಪ ದೂರದಲ್ಲಿದೆ. ಆದ್ರೆ ಅಲ್ಲಿಗೆ ಭೇಟಿ ನೀಡುವವರ ಸಂಖ್ಯೆ ಮಾತ್ರ ಕಡಿಮೆಯೇನಿಲ್ಲ.
ಕಾರ್ಡ್ರೋನಾದಲ್ಲಿ ಎಷ್ಟು ಬ್ರಾ ನೇತುಹಾಕಲಾಗಿದೆ? : ಈ ಸ್ಥಳದಲ್ಲಿ ಸುಮಾರು 10,000 ಬ್ರಾಗಳಿವೆ. ಅವೆಲ್ಲವನ್ನೂ ಸಾಲಾಗಿ ನೇತುಹಾಕಲಾಗಿದೆ. ವಿಶ್ವ ದಾಖಲೆ ಬರೆಯಲು ಇನ್ನುಷ್ಟು ಬ್ರಾಗಳ ಅಗತ್ಯವಿದ್ರೂ ಕೆಲವೇ ದಿನಗಳಲ್ಲಿ ಇದು ವಿಶ್ವ ದಾಖಲೆ ಬರೆಯುವುದು ನಿಶ್ಚಿತ.
KNOWLEDGE : ಈ ದೇಶದಲ್ಲಿ ಅಪರಾಧಿಗಳೇ ಇಲ್ಲ…! ಹಾಗಾದ್ರೆ ಜೈಲು ಇನ್ಯಾಕೆ?
ಬ್ರಾ ವಾಲ್ ಇತಿಹಾಸ : ಈ ಬ್ರಾ ವಾಲ್ ಇತಿಹಾಸ ವಿಚಿತ್ರವಾಗಿದೆ. 1999 ರಲ್ಲಿ ಒಂದು ರಾತ್ರಿ ಇದ್ದಕ್ಕಿದ್ದಂತೆ ನಾಲ್ಕು ಬ್ರಾಗಳು ಇಲ್ಲಿ ನೇತಾಡಲು ಶುರು ಮಾಡಿದ್ದವು. ಇದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದ್ದರು. ಆದ್ರೆ ನಂತ್ರದ ದಿನಗಳಲ್ಲಿ ಇಲ್ಲಿ ಬ್ರಾಗಳ ಸಂಖ್ಯೆ ಹೆಚ್ಚಾಯ್ತು. ಆದ್ರೆ ಮೊದಲ ನಾಲ್ಕು ಬ್ರಾವನ್ನು ಯಾರು ಹಾಕಿದ್ರು ಎಂಬುದು ಯಾರಿಗೂ ತಿಳಿದಿಲ್ಲ. ದಿನಕಳೆದಂತೆ ಇಲ್ಲಿಗೆ ಬರುವ ಪ್ರವಾಸಿಗರು ತಮ್ಮ ಬ್ರಾವನ್ನ ಇಲ್ಲಿ ನೇತುಹಾಕಿ ಹೋಗ್ತಿದ್ದಾರೆ. ಬ್ರಾ ವಾಲ್ ಎಷ್ಟು ಪ್ರಸಿದ್ಧಿ ಪಡೆದಿದೆ ಅಂದ್ರೆ ಬೇರೆ ಬೇರೆ ದೇಶಗಳಿಂದ ಇದನ್ನು ನೋಡಲು ಜನರು ಬರ್ತಾರೆ. ಬಂದ ಜನರು ಇಲ್ಲಿಯೇ ಬ್ರಾ ಬಿಟ್ಟು ಹೋಗುವ ಕಾರಣ ಇದೊಂದು ಸಂಪ್ರದಾಯವಾಗಿದೆ. ಆರಂಭದಲ್ಲಿ ಬ್ರಾ ಕದಿಯುವವರ ಸಂಖ್ಯೆ ಕೂಡ ಕಡಿಮೆಯಿರಲಿಲ್ಲ. ಆದ್ರೆ ನಂತ್ರದ ದಿನಗಳಲ್ಲಿ ಅವರ ಸಂಖ್ಯೆ ಕಡಿಮೆಯಾಗಿದೆ. ಅಕಾ ಬ್ರಾ ವಾಲ್ ಹೆಚ್ಚು ಜನಪ್ರಿಯತೆ ಗಳಿಸಿದ ನಂತ್ರ ಟ್ರಾಫಿಕ್ ಜಾಮ್ ಹೆಚ್ಚಾಗತೊಡಗಿತ್ತು. ಆ ಕಾರಣಕ್ಕೆ ಸರ್ಕಾರ ಅದ್ರ ಜಾಗವನ್ನು ಬದಲಿಸಿದೆ.
Flight Journey: ವಿಮಾನದಲ್ಲಿ ದೌರ್ಜನ್ಯವಾದರೆ ಫೈಟ್ ಮಾಡೋದು ಹೇಗೆ?
ಬದಲಾದ ಹೆಸರು : ಬ್ರಾ ವಾಲ್ ಇರುವ ಜಾಗದ ಹೆಸರನ್ನು ಬದಲಿಸಲಾಗಿದೆ. 2015ರಲ್ಲಿ ಇದ್ರ ಹೆಸರನ್ನು ಬ್ರಾಡ್ರೋನಾ ಎಂದು ಬದಲಿಸಲಾಗಿದೆ. ಸ್ತನ ಕ್ಯಾನ್ಸರ್ ನಿಧಿಸಂಗ್ರಹಣೆ ಕಾರ್ಯಕ್ರಮದ ಅಡಿಯಲ್ಲಿ ಮರು ನಾಮಕರಣ ನಡೆಯಿತು. ಈ ವೇಳೆ 30,000 ಡಾಲರ ಹಣ ಸಂಗ್ರಹವಾಗಿತ್ತು. ಹಾಗೆಯೇ ಈ ಸ್ಥಳವನ್ನು ಕಾರ್ಡ್ರೋನಾದಿಂದ ಬ್ರಾಡ್ರೋನಾ ಎಂದು ಬದಲಾಯಿಸಲಾಯಿತು. ನೀವು ಕೂಡ ಕಾರ್ಡ್ರೋನಾಗೆ ಹೋದ್ರೆ ಬ್ರಾ ವಾಲ್ ನೋಡ್ದೆ ವಾಪಸ್ ಬರಬೇಡಿ.