ರೈಲ್ವೆ ನಿಲ್ದಾಣದ ಬೋರ್ಡಲ್ಲಿ ಜಂಕ್ಷನ್, ಟರ್ಮಿನಲ್ ಅಂತ ಏಕಿರುತ್ತೆ?
ರೈಲು ನಿಲ್ದಾಣದ ಮುಂದೆ ಬೋರ್ಡ್ ಇದ್ದೇ ಇರುತ್ತೆ. ಆದ್ರೆ ಎಲ್ಲ ಬೋರ್ಡ್ ಬರಿ ಊರಿನ ಹೆಸರನ್ನು ಹೊಂದಿರೋದಿಲ್ಲ. ಅದ್ರ ಮುಂದೆ ಜಂಕ್ಷನ್, ಟರ್ಮಿನಲ್, ಸೆಂಟರ್ ಹೀಗೆ ಬೇರೆ ಬೇರೆ ಹೆಸರನ್ನು ನೀವು ನೋಡ್ಬಹುದು. ಅದ್ಯಾಕೆ ಈ ಎಲ್ಲ ಹೆಸರಿರುತ್ತೆ ಅಂತ ನಿಮಗೆ ಗೊತ್ತಾ?
ಪ್ರತಿ ನಿತ್ಯ ನಾವು ಅನೇಕ ಕೆಲಸಗಳನ್ನು ಮಾಡ್ತೇವೆ. ಅಲ್ಲಿ ಇಲ್ಲಿ ಪ್ರಯಾಣ ಬೆಳೆಸ್ತೇವೆ. ನಮ್ಮ ಪ್ರಯಾಣಕ್ಕೆ ರೈಲು ಕೂಡ ಸಹಕಾರಿ. ರೈಲಿನಲಿ ನಿತ್ಯ ಪ್ರಯಾಣಿಸುವವರು ಒಂದಿಷ್ಟು ಮಂದಿಯಾದ್ರೆ ಮತ್ತೆ ಕೆಲವರು ಅಪರೂಪಕ್ಕೆ ರೈಲಿನಲ್ಲಿ ಸಂಚರಿಸುತ್ತಾರೆ. ಇನ್ನು ಕೆಲವರು ಆಗಾಗ ರೈಲ್ವೆ ನಿಲ್ದಾಣಕ್ಕೆ ಹೋಗಿ ಬರ್ತಿರುತ್ತಾರೆ. ನಾವು ಸಂಚರಿಸುವಾಗ ರೈಲ್ವೆ ನಿಲ್ದಾಣದ ಬಳಿ ಇರುವ ಬೋರ್ಡ್ ನಮಗೆ ಕಾಣಿಸುತ್ತದೆ. ಆದ್ರೆ ನಾವು ಅದ್ರಲ್ಲಿರುವ ಹೆಸರು ಮಾತ್ರ ಗಮನಿಸ್ತೇವೆಯೇ ವಿನಃ ಅದ್ರಲ್ಲಿರುವ ಇನ್ನೂ ಕೆಲ ಮಾಹಿತಿಯ ಬಗ್ಗೆ ಹೆಚ್ಚು ಆಸಕ್ತಿ ತೋರುವುದಿಲ್ಲ. ರೈಲ್ವೆ ನಿಲ್ದಾಣದ ಬಳಿ ಇರುವ ಬೋರ್ಡ್ ಮೇಲೆ ಜಂಕ್ಷನ್, ಸೆಂಟ್ರಲ್, ಟರ್ಮಿನಲ್ ಹೀಗೆ ನಾನಾ ವಿಧದ ಬೋರ್ಡ್ ಗಳಿರುತ್ತವೆ. ಈ ಪದಗಳ ಅರ್ಥ ಅನೇಕರಿಗೆ ಗೊತ್ತಿಲ್ಲ. ಅದನ್ನು ಅದೇ ರೈಲ್ವೆ ನಿಲ್ದಾಣದಲ್ಲಿ ಹೇಗೆ ಹಾಕಿರುತ್ತಾರೆ ಎನ್ನುವುದು ಕೂಡ ತಿಳಿದಿರೋದಿಲ್ಲ. ನಾವಿಂದು ಟರ್ಮಿನಲ್, ಸೆಂಟ್ರಲ್ ಸೇರಿದಂತೆ ಜಂಕ್ಷನ್ ಎಂದು ಬೇರೆ ಬೇರೆ ಬೋರ್ಡ್ ಹಾಕಲು ಕಾರಣವೇನು ಎಂಬುದನ್ನು ನಿಮಗೆ ಹೇಳ್ತೇವೆ.
ಸೆಂಟ್ರಲ್ (Central ) ಸ್ಟೇಷನ್ ಎಂದರೇನು? : ಭಾರತ (India) ದಲ್ಲಿ ಬರೀ ಐದು ಸೆಂಟ್ರಲ್ ರೈಲ್ವೆ (Railways) ಸ್ಟೇಷನ್ ಗಳಿವೆ. ಸೆಂಟ್ರಲ್ ಸ್ಟೇಷನ್ ಎಂದರೆ ಅದು ಆ ನಗರದ ಪ್ರಮುಖ ನಿಲ್ದಾಣ. ಸೆಂಟ್ರಲ್ ಸ್ಟೇಷನ್ ನಗರದ ಅತ್ಯಂತ ಪ್ರಮುಖ ಮತ್ತು ಜನನಿಬಿಡ ನಿಲ್ದಾಣವಾಗಿದೆ. ಇದು ನಗರದ ಅತ್ಯಂತ ಹಳೆಯ ನಿಲ್ದಾಣವಾಗಿದೆ. ಇದರ ಮೂಲಕ ಹೆಚ್ಚಿನ ಸಂಖ್ಯೆಯ ರೈಲುಗಳು ಹಾದುಹೋಗುತ್ತವೆ. ಪ್ರತಿ ನಗರಕ್ಕೂ ಕೇಂದ್ರ ನಿಲ್ದಾಣವಿದೆ ಎಂದು ಇದರ ಅರ್ಥವಲ್ಲ. ಆದರೆ, ಮೊದಲು ಆಕ್ಯುಪೆನ್ಸಿ ಆಧಾರದ ಮೇಲೆ ಸೆಂಟ್ರಲ್ ನಿಲ್ದಾಣವನ್ನು ನಿರ್ಮಿಸಲಾಯಿತು ಮತ್ತು ಇದು ನಗರದ ಅತ್ಯಂತ ಜನನಿಬಿಡ ನಿಲ್ದಾಣವಾಗಿದೆ.
ಹಾವು – ಇಲಿ ತಿನ್ನೋರಿಗೆ ಹಾಲು ಜೀರ್ಣಿಸಿಕೊಳ್ಳೇಕೆ ಸಾಧ್ಯವಿಲ್ಲ!
ಜಂಕ್ಷನ್ : ಕೆಲ ರೈಲ್ವೆ ನಿಲ್ದಾಣಗಳ ಮುಂದೆ ಜಂಕ್ಷನ್ ಎಂದು ಬರೆದಿರಲಾಗುತ್ತದೆ. ಜಂಕ್ಷನ್ ಎಂಬ ಪದವು ಸಂಪರ್ಕಿಸುವುದು ಎಂದರ್ಥ. ಈ ನಿಲ್ದಾಣಕ್ಕೆ ವಿವಿಧ ಮಾರ್ಗಗಳ ರೈಲುಗಳು ಬಂದರೆ ಅದು ಜಂಕ್ಷನ್ ಎಂದು ಅರ್ಥಮಾಡಿಕೊಳ್ಳಿ. ಮೂರಕ್ಕಿಂತ ಹೆಚ್ಚು ಮಾರ್ಗಗಳು ಇಲ್ಲಿ ಸಂಪರ್ಕಿಸುತ್ತವೆ. ಅದನ್ನು ಜಂಕ್ಷನ್ ಎಂದು ಹೆಸರಿಸಲಾಗುತ್ತದೆ.
ಟರ್ಮಿನಲ್ : ಟರ್ಮಿನಲ್ ನಿಲ್ದಾಣವು ಯಾವಾಗಲೂ ಯಾವುದೇ ಮಾರ್ಗದ ಕೊನೆಯ ನಿಲ್ದಾಣವಾಗಿರುತ್ತದೆ. ಯಾವುದೇ ರೈಲು ಅದರ ಮೂಲಕ ಹಾದುಹೋಗುವುದಿಲ್ಲ. ಟರ್ಮಿನಸ್ ಅಥವಾ ಟರ್ಮಿನಲ್ ನಡುವೆ ಯಾವುದೇ ವ್ಯತ್ಯಾಸವಿಲ್ಲ. ಟರ್ಮಿನಲ್ ಎಂದರೆ ರೈಲುಗಳು ಮುಂದುವರಿಯಲು ಯಾವುದೇ ಹಳಿ ಇಲ್ಲದಿರುವ ನಿಲ್ದಾಣ. ರೈಲುಗಳು ಈ ನಿಲ್ದಾಣದವರೆಗೆ ಬರುತ್ತವೆ ಆದ್ರೆ ಮುಂದೆ ಪ್ರಯಾಣಿಸುವುದಿಲ್ಲ. ಅಲ್ಲಿಂದಲೇ ವಾಪಸ್ ಆಗುತ್ತದೆ.
ರೋಡ್ : ಕೆಲ ರೈಲ್ವೆ ನಿಲ್ದಾಣದ ಮುಂದೆ ರೋಡ್ ಎಂದು ಹೆಸರಿರುತ್ತದೆ. ಗೋಕರ್ಣ ರೋಡ್ ರೈಲ್ವೆ ನಿಲ್ದಾಣ ಎಂದು ನೀವು ಬೋರ್ಡ್ ನೋಡಿರಬಹುದು. ಊರಿಗೆ ರೈಲ್ವೆ ಹಳಿ ನಿರ್ಮಾಣ ಸಾಧ್ಯವಿಲ್ಲ ಎನ್ನುವ ಪರಿಸ್ಥಿತಿಯಲ್ಲಿ ಅದರ ಪಕ್ಕದ ಹಳ್ಳಿಗೆ ರೈಲು ಸಂಚರಿಸುತ್ತದೆ. ಈ ಸಮಯದಲ್ಲಿ ಮುಂದಿನ ನಗರದ ಹೆಸರಿನ ಜೊತೆ ರೋಡ್ ಸೇರಿಸಿ ಬೋರ್ಡ್ ಹಾಕಲಾಗುತ್ತದೆ. ನಗರದ ದೂರ ನಿಶ್ಚಿತವಿಲ್ಲ. ಎರಡು ಕಿಲೋಮೀಟರ್ ನಿಂದ ನೂರು ಕಿಲೋಮೀಟರ್ ದೂರ ಇರಬಹುದು.
300 ಲಕ್ಷುರಿ ಕಾರ್ಸ್, ಖಾಸಗಿ ಸೇನೆ, ಜೆಟ್.. ಅಬ್ಬಬ್ಬಾ! ಮೈ ನವಿರೇಳಿಸುತ್ತೆ ಮಲೇಷ್ಯಾ ರಾಜನ ವೈಭೋಗ
ಕಂಟೋನ್ಮೆಂಟ್ : ಯಾವ ರೈಲ್ವೆ ನಿಲ್ದಾಣ ಆರ್ಮಿ ಬೇಸ್ ಪಕ್ಕದಲ್ಲಿರುತ್ತದೆಯೋ ಅದನ್ನು ಕಂಟೋನ್ಮೆಂಟ್ ಎಂದು ಕರೆಯಲಾಗುತ್ತದೆ. ಉದಾಹರಣೆಗೆ ಬೆಂಗಳೂರು ದಂಡು ರೈಲ್ವೆ ನಿಲ್ದಾಣ. ಇಲ್ಲಿ ಪಕ್ಕದಲ್ಲೇ ಆರ್ಮಿ ಬೇಸ್ ಇರುವ ಕಾರಣ ಅದಕ್ಕೆ ಕಂಟೋನ್ಮೆಂಟ್ ಎಂದು ಕರೆಯಲಾಗುತ್ತದೆ.