ಮಾನ್ಯ ಮಹೋದಯರಿಗೆ ವಿವಿಐಪಿ ಪಟ್ಟ ಕೊಡೋದು ಗೊತ್ತು, ಭಾರತದ ಮರವೊಂದಕ್ಕಿದೆ ಆ ಸ್ಥಾನ!
ವಿವಿಐಪಿ ರಕ್ಷಣೆ ಬರೀ ಮನುಷ್ಯರಿಗೆ ಮಾತ್ರ ಸಿಗೋದಿಲ್ಲ. ವಸ್ತು, ಮರ, ಪ್ರಾಣಿಗಳಿಗೂ ಸಿಗುತ್ತದೆ. ಭಾರತದಲ್ಲಿ ವಿವಿಐಪಿ ಮರವೊಂದಿದೆ. ಅದರ ರಕ್ಷಣೆಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಲಾಗುತ್ತದೆ. ಅದ್ರ ವಿವರ ಇಲ್ಲಿದೆ.
ಅಮೂಲ್ಯ ವಸ್ತುಗಳನ್ನು ಅತ್ಯಂತ ಎಚ್ಚರಿಕೆಯಿಂದ ನೋಡಿಕೊಳ್ಳಬೇಕು. ವಸ್ತು ಸಂಗ್ರಹಾಲಯಗಳಲ್ಲಿ ನೀವು ಅಮೂಲ್ಯ ವಸ್ತುಗಳಿಗೆ ಹೆಚ್ಚಿನ ಭದ್ರತೆ ನೀಡಿರೋದನ್ನು ನೋಡಿರ್ತೀರಿ. ಒಂದೊಂದು ವಸ್ತುವೂ ಇತಿಹಾಸಕ್ಕೆ ಸಂಬಂಧಿಸಿದ ಕಥೆಯನ್ನು ಹೇಳುತ್ತದೆ. ಇಲ್ಲವೆ ಧಾರ್ಮಿಕವಾಗಿ ಜನರಿಗೆ ಹತ್ತಿರವಾಗಿರುತ್ತದೆ. ಸಾಂಚಿಯಲ್ಲಿರುವ ಈ ಮರ ಕೂಡ ವಿವಿಐಪಿ ಸ್ಥಾನವನ್ನು ಪಡೆದಿದೆ. ಈ ವೃಕ್ಷಕ್ಕೆ ಪೊಲೀಸ್ ಕಣ್ಗಾವಲಿದೆ. ಇದರ ಆರೈಕೆಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಲಾಗುತ್ತದೆ. ಸಣ್ಣ ಖಾಯಿಲೆ ಬಂದ್ರೂ ಅದಕ್ಕೆ ತಕ್ಷಣ ಚಿಕಿತ್ಸೆ ನೀಡಲಾಗುತ್ತದೆ. ಕಳೆದ ಹನ್ನೊಂದು ವರ್ಷಗಳಿಂದ ವಿವಿಐಪಿ ಸ್ಥಾನದಲ್ಲಿ ಎಲ್ಲರ ಗಮನ ಸೆಳೆದಿರುವ ಆ ವೃಕ್ಷ ಹಾಗೂ ಅದಕ್ಕೆ ಖರ್ಚಾದ ಹಣದ ಬಗ್ಗೆ ನಾವಿಂದು ನಿಮಗೆ ಮಾಹಿತಿ ನೀಡ್ತೇವೆ.
ವಿವಿಐಪಿ (Vvip) ವೃಕ್ಷ ಯಾವುದು? : ಸುಮಾರು 2500 ವರ್ಷಗಳ ಹಿಂದೆ, ಗೌತಮ ಬುದ್ಧ (Buddha) ನಿಗೆ ಬಿಹಾರದ ಗಯಾದಲ್ಲಿ ಜ್ಞಾನೋದಯವಾಯ್ತು. ಬುದ್ಧಿನಿಗೆ ಜ್ಞಾನೋದಯವಾಗಿದ್ದು ಬೋಧಿ (Bodhi) ವೃಕ್ಷದ ಕೆಳಗೆ ಎನ್ನುವುದು ನಿಮಗೆಲ್ಲ ಗೊತ್ತೆ ಇದೆ. ಗೌತಮ ಬುದ್ಧನ ಸ್ತೂಪಗಳಿಗೆ ವಿಶ್ವವಿಖ್ಯಾತವಾಗಿರುವ ಸಾಂಚಿಯಲ್ಲಿ ಬುದ್ಧನ ನೆನಪಿಗಾಗಿ ಬೋಧಿ ವೃಕ್ಷವನ್ನು ನಡೆಲಾಗಿದೆ. ಇದನ್ನೇ ವಿವಿಐಪಿ ವೃಕ್ಷ ಎಂದು ಕರೆಯಲಾಗುತ್ತದೆ.
12 ಮಹಿಳೆಯರ ವಾಮಾಚಾರಕ್ಕೆ ಜಾಗ ಬಲಿ, 400 ವರ್ಷವಾದ್ರೂ ಜನರಿಗಿಲ್ಲ ಭಯ!
ಈ ಬೋಧಿ ವೃಕ್ಷವನ್ನು ಹನ್ನೊಂದು ವರ್ಷಗಳ ಹಿಂದೆ ಬೌದ್ಧ-ಭಾರತೀಯ ಜ್ಞಾನ ಅಧ್ಯಯನ ವಿಶ್ವವಿದ್ಯಾಲಯದ ಆವರಣದಲ್ಲಿ ನೆಡಲಾಯ್ತು. ಶ್ರೀಲಂಕಾದ ಮಾಜಿ ಅಧ್ಯಕ್ಷ ಮಹಿಂದಾ ರಾಜಪಕ್ಸೆ ಅವರು ಸೆಪ್ಟೆಂಬರ್ 21, 2012 ರಂದು ಇದನ್ನು ನೆಲಕ್ಕೂರಿದ್ರು. ಅಲ್ಲಿಂದ ಇಲ್ಲಿಯವರೆಗೆ ಅಂದ್ರೆ ಹನ್ನೊಂದು ವರ್ಷಗಳಿಂದ ಇದನ್ನು ಅತ್ಯಂತ ಕಾಳಜಿಯಿಂದ ಬೆಳೆಸಲಾಗ್ತಿದೆ.
ಡೀಫ್ ಪೇಕ್ ಟು ಸುಹಾಗ್ ರಾತ್ ಪಾನ್‌ವರೆಗೆ: ವರ್ಷಾಂತ್ಯದಲ್ಲಿ ಸಂಚಲನ ಸೃಷ್ಟಿಸಿದ ಕೆಲ ಸುದ್ದಿಗಳ ಹಿನ್ನೋಟ
ಹನ್ನೊಂದು ವರ್ಷದಲ್ಲಿ ವೃಕ್ಷಕ್ಕೆ ಇಷ್ಟು ಖರ್ಚು : ಈ ಬೋಧಿ ವೃಕ್ಷ ತನ್ನದೇ ವಿಶೇಷತೆ ಹೊಂದಿರುವ ಕಾರಣ ಸುರಕ್ಷತೆಗೆ ಹೆಚ್ಚು ಗಮನ ನೀಡಲಾಗಿದೆ. ವೃಕ್ಷದ ಸುತ್ತಲೂ 15 ಅಡಿ ಬೇಲಿಯನ್ನು ಹಾಕಲಾಗಿದೆ. ಮುನ್ಸಿಪಲ್ ಕೌನ್ಸಿಲ್, ತೋಟಗಾರಿಕೆ ಇಲಾಖೆ ಮತ್ತು, ಪೊಲೀಸ್ ಹಾಗೂ ಕಂದಾಯ ಇಲಾಖೆ ಈ ವೃಕ್ಷದ ನಿರಂತರ ಮೇಲ್ವಿಚಾರಣೆ ಮಾಡುತ್ತದೆ. ದಿನದ ಇಪ್ಪನ್ನಾಲ್ಕು ಗಂಟೆಯೂ ಇದಕ್ಕೆ ಪೊಲೀಸ್ ರಕ್ಷಣೆ ನೀಡಲಾಗುತ್ತದೆ. ನಾಲ್ಕು ಪೊಲೀಸರ ಕಣ್ಗಾವಲಿನಲ್ಲಿ ಇದು ಬೆಳೆಯುತ್ತಿದೆ. ಮರಕ್ಕೆ ಸಣ್ಣ ಪುಟ್ಟ ರೋಗ ಬಂದ್ರೂ ಕೀಟನಾಶಕ ಹಾಕಿ ಅದನ್ನು ಬದುಕಿಸಲಾಗುತ್ತದೆ. ಆರು ತಿಂಗಳ ಹಿಂದೆ ಬೋಧಿ ವೃಕ್ಷಕ್ಕೆ ಜಾಲ ರೋಗ ಕಾಣಿಸಿಕೊಂಡಿತ್ತು. ಅದಕ್ಕೆ ಕೀಟನಾಶಕ ಹಾಕಿ ಸರಿಪಡಿಸಲಾಗಿದೆ. ಮೇಲ್ವಿಚಾರಣೆ, ಕೀಟನಾಶಕ ಸೇರಿದಂತೆ ಬೋಧಿ ವೃಕ್ಷದ ಆರೈಕೆಗೆ ಇಲ್ಲಿಯವರೆಗೆ 70 ಲಕ್ಷಕ್ಕೂ ಹೆಚ್ಚು ಖರ್ಚಾಗಿದೆ.
ಹರಿದು ಬರುತ್ತೆ ಭಕ್ತರ ದಂಡು : ಬೋಧಿ ವೃಕ್ಷ ಪ್ರವಾಸಿ ಸ್ಥಳವಾಗಿದೆ. ಅನೇಕ ಪ್ರವಾಸಿಗರು ಇಲ್ಲಿಗೆ ಬಂದು ಹೋಗ್ತಾರೆ. ಅದ್ರಲ್ಲೂ ಬುದ್ಧನ ಅನುಯಾಯಿಗಳು ಇಲ್ಲಿಗೆ ಬರೋದು ಹೆಚ್ಚು. ವಿಶ್ವವಿದ್ಯಾನಿಲಯ ಇದನ್ನು ಇನ್ನಷ್ಟು ಪ್ರಸಿದ್ಧಿಗೊಳಿಸಲು ಸಿದ್ಧತೆ ನಡೆಯುತ್ತಿದೆ. ನಕ್ಷತ್ರ ವಾಟಿಕಾ ಮತ್ತು ಬೋಧಿ ವೃಕ್ಷದ ಸುತ್ತಲೂ ನವಗ್ರಹ ಉದ್ಯಾನ ನಿರ್ಮಾಣವಾಗ್ತಿದೆ.
ಸಾಂಚಿ ನಗರದ ವಿಶೇಷವೇನು? : ಸಾಂಚಿ ಭೋಪಾಲ್ ನಿಂದ 40 ಕಿಮೀ ದೂರದಲ್ಲಿದೆ. ಸಾಂಜಿ ಸೂಪ್ತಗಳಿಗೆ ಪ್ರಸಿದ್ಧಿ ಆಗಿದೆ. ಅಲ್ಲಿ ಅನೇಕ ಬೌದ್ಧ ಸ್ಮಾರಕಗಳನ್ನು ನೀವು ನೋಡ್ಬಹುದು. ಬೆಟ್ಟದ ಮೇಲೊಂದು ಸ್ತೂಪವಿದ್ದು ಅದನ್ನು ಮೌರ್ಯ ದೊರೆ ಅಶೋಕ ನಿರ್ಮಾಣ ಮಾಡಿದ್ದಾನೆ. ಯುನೆಸ್ಕೊ ಇದನ್ನು ವಿಶ್ವ ಪರಂಪರೆ ಪಟ್ಟಿಗೆ ಸೇರಿಸಿದೆ. ಇದಲ್ಲದೆ ಇಲ್ಲಿ ನೀವು ಅನೇಕ ದೇವಾಲಯಗಳು, ಮಠಗಳನ್ನು ನೋಡಬಹುದು. ಸಾಂಚಿಗೆ ಬಂದ್ರೆ ಬೋಧಿ ವೃಕ್ಷವನ್ನು ವೀಕ್ಷಣೆ ಮಾಡಲು ಮರೆಯಬೇಡಿ.