ಚಲಿಸುತ್ತಿರೋ ರೈಲಿನಿಂದ ಮೊಬೈಲ್/ಪರ್ಸ್ ಬಿದ್ರೆ ಮೊದಲು ಈ ಕೆಲಸಗಳನ್ನು ಮಾಡಿ
ಚಲಿಸುತ್ತಿರುವ ರೈಲಿನಿಂದ ಮೊಬೈಲ್, ಪರ್ಸ್ ಅಥವಾ ಇತರೆ ವಸ್ತುಗಳು ಬಿದ್ದರೆ ಆ ಕ್ಷಣ ಪ್ರಯಾಣಿಕರು ಮಾಡಬೇಕಾದ ಪ್ರಮುಖ ಕೆಲಸಗಳು. ಹೀಗಾದ್ರೆ ಮಾತ್ರ ನಿಮ್ಮ ವಸ್ತು ನಿಮಗೆ ಸಿಗುತ್ತದೆ.
ನವದೆಹಲಿ: ಚಲಿಸುತ್ತಿರುವ ವಾಹನದಿಂದ ಮೊಬೈಲ್, ಪರ್ಸ್ ಅಥವಾ ಇನ್ಯಾವುದೇ ವಸ್ತುಗಳ ಬಿದ್ದರೆ, ನಿಲ್ಲಿಸಿ ಎತ್ತಿಕೊಳ್ಳಬಹುದು. ಆದ್ರೆ ರೈಲು ಪ್ರಯಾಣದಲ್ಲಿ ಈ ರೀತಿ ಆಗಲ್ಲ. ಒಂದು ವೇಳೆ ಚಲಿಸುತ್ತಿರುವ ರೈಲಿನಿಂದ ಅಮೂಲ್ಯವಾದ ವಸ್ತು ಹೊರಗೆ ಬಿದ್ದರೆ ಏನು ಮಾಡೇಕು ಅನ್ನೋ ಪ್ರಶ್ನೆಗೆ ಉತ್ತರ ಇಲ್ಲಿದೆ. ಯಾವುದೇ ನಿಮ್ಮ ಅಮೂಲ್ಯವಾದ ವಸ್ತು ಕೆಳಗೆ ಬಿದ್ದರೆ, ಆತಂಕಕ್ಕೊಳಗಾಗದೇ ತತ್‌ಕ್ಷಣ ಕೆಲವೊಂದು ಕೆಲಸಗಳನ್ನು ಮಾಡಬೇಕು. ಹೀಗೆ ಮಾಡೋದರಿಂದ ನಿಮ್ಮ ವಸ್ತು ಸಿಗುತ್ತದೆ. ಮೊಬೈಲ್ ನಲ್ಲಿ ಬ್ಯಾಂಕ್ ಡೀಟೈಲ್ಸ್ , ಅವಶ್ಯಕ ಗುರುತಿನ ಚೀಟಿ ಫೋಟೋ ಸೇರಿದಂತೆ ಹಲವು ಮಾಹಿತಿಯನ್ನು ಸೇವ್ ಮಾಡಿಕೊಂಡಿರುತ್ತವೆ. ಒಂದು ವೇಳೆ ಮೊಬೈಲ್ ಚಲಿಸುತ್ತಿರುವ ರೈಲಿನಿಂದ ಕೆಳಗೆ ಬಿದ್ದರೆ ಅಥವಾ ಕಳ್ಳತನವಾದ್ರೆ ಆತಂಕವಾಗುತ್ತದೆ. ಡಿಜಿಟಲ್ ದುನಿಯಾದಲ್ಲಿ ನಿಮ್ಮ ಮಾಹಿತಿ ದುರ್ಬಳಕೆಯಾಗುವ ಸಾಧ್ಯತೆ ಅಧಿಕವಾಗಿರುತ್ತದೆ.
ಚಲಿಸುತ್ತಿರುವ ರೈಲಿನಿಂದ ಮೊಬೈಲ್ ಬೀಳುತ್ತಿದ್ದಂತೆ ಪ್ರಯಾಣಿಕರು ತಮಗೆ ಮೊದಲು ಕಾಣಿಸುವ ಟ್ರ್ಯಾಕ್ ಪಕ್ಕದ ಕಪ್ಪು-ಹಳದಿ ಕಂಬದ ಮೇಲಿರುವ ನಂಬರ್ ನೋಟ್ ಮಾಡಿಕೊಳ್ಳಬೇಕು. ಹಾಗೆ ಯಾವ ಎರಡು ರೈಲು ನಿಲ್ದಾಣಗಳ ಮಧ್ಯೆ ನಿಮ್ಮ ವಸ್ತು ಬಿದ್ದಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಇದಕ್ಕಾಗಿ ನೀವು ಸಹ ಪ್ರಯಾಣಿಕರು ಅಥವಾ ಟಿಟಿಇ ಅಥವಾ ಇನ್ನಿತರ ರೈಲ್ವೆ ಸಿಬ್ಬಂದಿಯ ಸಹಾಯ ಪಡೆದುಕೊಳ್ಳಬಹುದು. ನೀವು ಪ್ರಯಾಣಿಸುತ್ತಿರುವ ಮಾರ್ಗದ ಮಾಹಿತಿ ಇಲ್ಲದಿದ್ದರೆ, Where Is My Train App ಬಳಸಿ ರೈಲು ನಿಲ್ದಾಣದ ನಿಖರ ಮಾಹಿತಿಯನ್ನು ಸಂಗ್ರಹಿಸಬೇಕು.
ಈ ಮೇಲಿನ ಎಲ್ಲಾ ಮಾಹಿತಿಯನ್ನು ಸಂಗ್ರಹಿಸಿದ ಬಳಿಕ ರೈಲ್ವೆ ಪೊಲೀಸ್ ಫೋರ್ಸ್ ಸಹಾಯವಾಣಿ 182 ಅಥವಾ ರೈಲ್ವೆ ಸಹಾಯವಾಣಿ 139 ಸಂಖ್ಯೆಗೆ ಕರೆ ಮಾಡಿ ಕಳೆದುಕೊಂಡಿರುವ ವಸ್ತು ಮತ್ತು ಅದರ ಸಂಪೂರ್ಣ ಮಾಹಿತಿಯನ್ನು ನೀಡಬೇಕು. ನಂತರ ನೀವು ಸಂಗ್ರಹಿಸಿರುವ ಮಾಹಿತಿಯನ್ನು ಸಹ ಒದಗಿಸಬೇಕು. ನಿಮ್ಮ ಪ್ರಯಾಣಿಸುತ್ತಿರುವ ರೈಲಿನಲ್ಲಿರುವ RPF ಸಿಬ್ಬಂದಿ ಜೊತೆಯಲ್ಲಿಯೂ ಈ ಮಾಹಿತಿಯನ್ನು ಹಂಚಿಕೊಳ್ಳಬೇಕು. ಕಂಬದ ಸಂಖ್ಯೆಯ ಸಹಾಯದಿಂದ ಪೊಲೀಸರಿಗೆ ನಿಮ್ಮ ವಸ್ತು ಪತ್ತೆ ಮಾಡಲು ಸಹಾಯ ಆಗುತ್ತದೆ.
ಇದನ್ನೂ ಓದಿ: IRCTC ಮಾತ್ರವಲ್ಲ, ಇಲ್ಲಿಯೂ ಸುಲಭವಾಗಿ ರೈಲು ಟಿಕೆಟ್‌ಗಳನ್ನು ಬುಕ್ಕಿಂಗ್ ಮಾಡಬಹುದು!
ಎಮೆರ್ಜೆನ್ಸಿ ಚೈನ್ ಎಳೆಯಹುದೇ?
ಚಿಕ್ಕ ಪುಟ್ಟ ವಿಷಯಗಳಿಗೆ ಎಮೆರ್ಜೆನ್ಸಿ ಚೈನ್ ಅಪರಾಧವಾಗುತ್ತದೆ. ಎಮೆರ್ಜೆನ್ಸಿ ಚೈನ್ ಎಳೆಯಬಹುದು. ನಿಮ್ಮೊಂದಿಗೆ ಪ್ರಯಾಣಿಸುವ ಮಗು ಅಥವಾ ವಯಸ್ಸಾದ ವ್ಯಕ್ತಿ, ಅಂಗವಿಕಲ ವ್ಯಕ್ತಿಯನ್ನು ನಿಲ್ದಾಣದಲ್ಲಿ ಬಿಟ್ಟು ರೈಲು ಪ್ರಾರಂಭವಾದರೆ, ಅಂತಹ ಪರಿಸ್ಥಿತಿಯಲ್ಲಿ ಚೈನ್ ಎಳೆಯಬಹುದು. ರೈಲಿನಲ್ಲಿ ಬೆಂಕಿ, ದರೋಡೆ ಅಥವಾ ಯಾವುದೇ ತುರ್ತು ಸಂದರ್ಭದಲ್ಲೂ ಚೈನ್ ಎಳೆಯಬಹುದು.
ಇದನ್ನೂ ಓದಿ: ತತ್ಕಾಲ್ ಟಿಕೆಟ್ ಕ್ಯಾನ್ಸಲ್ ಮಾಡಿದ್ರೆ ಎಷ್ಟು ಗಂಟೆಯಲ್ಲಿ ಹಣ ಸಿಗುತ್ತೆ?