ರಾಜ ಕುಟುಂಬದಲ್ಲಿ ಜನಿಸೋದು ಸುಲಭವಲ್ಲ.. ಪಾಲಿಸ್ಬೇಕು ಅನೇಕ ನಿಯಮ!
ರಾಜಮನೆತನವೆಂದ್ರೆ ವಿಶೇಷ ಗೌರವ. ಅವರ ಮಾತಿಗೆ ಒಂದು ಘನತೆ ಇರುತ್ತೆ. ಅದೇ ರೀತಿ ಅವರ ಜೀವನ ಕೂಡ ಶಿಸ್ತಿನಿಂದ ಕೂಡಿರುತ್ತದೆ. ಕೆಲ ನಿಯಮಗಳನ್ನು ಅವರು ಕಟ್ಟುನಿಟ್ಟಾಗಿ ಪಾಲಿಸಬೇಕು.
ನಾವು ರಾಜಪರಿವಾರದವರು ಎನ್ನಲು ಏನೋ ಖುಷಿ. ರಾಜರ ಕುಟುಂಬದಲ್ಲಿ ಜನಿಸಿದವರಿಗೆ ಯಾವುದೇ ಕೊರತೆ ಇಲ್ಲ. ಐಷಾರಾಮಿ ಜೀವನ ನಡೆಸುತ್ತಾರೆ. ಕೈಗೊಂದು, ಕಾಲಿಗೊಂದು ಕೆಲಸದಾಳುಗಳು ಇರ್ತಾರೆ. ಅನೇಕ ದೇಶಗಳಲ್ಲಿ ರಾಜಪರಿವಾರಕ್ಕೆ ಹೆಚ್ಚಿನ ಮಹತ್ವವಿದೆ. ರಾಜಕುಟುಂಬದ ಆಜ್ಞೆಯಂತೆ ದೇಶದ ಆಡಳಿತವನ್ನು ನಡೆಸಲಾಗುತ್ತದೆ. ಅನೇಕ ಆದೇಶಗಳಿಗೆ, ಕಾನೂನಿಗೆ ರಾಜರ ಅಥವಾ ರಾಜ ಕುಟುಂಬದ ಸದಸ್ಯರ ಸಹಿ ಬೇಕು. ರಾಜಮನೆತನದ ಸದಸ್ಯರಾಗೋದು ಸುಲಭವಲ್ಲ. ಅವರು ಕೂಡ ಕೆಲ ನಿಯಮ ಹಾಗೂ ನಿಬಂಧನೆಗಳಿಗೆ ಒಳಗಾಗ್ತಾರೆ. ರಾಜ ಮನೆತನದ ಕಟ್ಟುಪಾಡುಗಳು ಏನು ಎಂಬುದನ್ನು ನಾವಿಂದು ನಿಮಗೆ ಹೇಳ್ತೇವೆ.
ರಾಜಮನೆತನ (Royalfamily) ದ ಜನರು ಪಾಲಿಸಬೇಕಾದ ನಿಯಮ :
ಸಾಮಾನ್ಯ ಜನರಂತೆ ಇರಲು ಸಾಧ್ಯವಿಲ್ಲ : ರಾಜಮನೆತನದ ಜನರು ಕೂಡ ಪ್ರೋಟೋಕಾಲ್ (Protocol) ಪಾಲಿಸಬೇಕು. ಅವರು ಜನಸಾಮಾನ್ಯರಂತೆ ಎಲ್ಲೆಂದರಲ್ಲಿ ಓಡಾಟ ಮಾಡುವಂತಿಲ್ಲ. ಜನರ ಮಧ್ಯೆ ಹೋಗುವ ವೇಳೆ ವಿಶೇಷ ಕಾಳಜಿವಹಿಸಬೇಕು. ಸಾಮಾನ್ಯ ಜನರನ್ನು ಅವರು ಮುಟ್ಟುವ, ಮಾತನಾಡಿಸುವ ಪ್ರಯತ್ನ ಮಾಡಬಾರದು. ಸಾರ್ವಜನಿಕ (Public) ರಿಂದ ಅವರು ಅಂತರ ಕಾಯ್ದುಕೊಳ್ಳುವುದು ಕಡ್ಡಾಯ. ಒಂದ್ವೇಳೆ ಈ ನಿಯಮ ತಪ್ಪಿದ್ರೆ ರಾಜಮನೆತನದವರು ಪ್ರೋಟೋಕಾಲ್ ಮುರಿದಿದ್ದಾರೆ ಎಂಬ ಆರೋಪ ಎದುರಿಸಬೇಕಾಗುತ್ತದೆ. ಬ್ರಿಟಿಷ್, ಜೋರ್ಡಾನ್, ಭೂತಾನ್ ಮತ್ತು ಓಮನ್ ರಾಜಮನೆತನದ ಕುಟುಂಬಗಳು ಈ ಸಂಪ್ರದಾಯವನ್ನು ಅನುಸರಿಸುತ್ತವೆ. ಆದ್ರೆ ಬ್ರಿಟಿಷ್ ರಾಜಮನೆತನಕ್ಕೆ ಇದ್ರಲ್ಲಿ ಕೆಲ ರಿಯಾಯಿತಿ ಸಿಗುತ್ತದೆ.
ವಿಶ್ವದ ಅತ್ಯಂತ ಚಿಕ್ಕ ಪಾರ್ಕ್ ನಲ್ಲಿ ಎಷ್ಟು ಗಿಡವಿದೆ ಗೊತ್ತಾ?
ಉತ್ತರಾಧಿಕಾರಿಗಳು ಒಟ್ಟಿಗೆ ಪ್ರಯಾಣ ಬೆಳೆಸುವಂತಿಲ್ಲ : ಸಾರ್ವಜನಿಕರ ಜೊತೆ ಬೆರೆಯೋದು ನಿಷಿದ್ಧ ಮಾತ್ರವಲ್ಲ ಪ್ರಯಾಣದಲ್ಲಿಯೂ ಕೆಲ ನಿಯಮಗಳನ್ನು ಪಾಲಿಸಬೇಕು. ಪ್ರಯಾಣದ ವೇಳೆ ಉತ್ತರಾಧಿಕಾರಿಗಳು ಒಟ್ಟಿಗೆ ಪ್ರಯಾಣ ಬೆಳೆಸುವಂತಿಲ್ಲ. ಮುಂದೆ ಸಿಂಹಾಸನಕ್ಕೆ ಏರುವ ಇಬ್ಬರು ಒಟ್ಟಿಗೆ ಪ್ರಯಾಣ ಬೆಳೆಸುವುದನ್ನು ನಿಷೇಧಿಸಲಾಗಿದೆ. ಮೊನಾಕೊ, ಡೆನ್ಮಾರ್ಕ್ ಮತ್ತು ನಾರ್ವೆಯ ರಾಜ ಕುಟುಂಬಗಳಲ್ಲಿ ಈ ನಿಯಮ ಕಟ್ಟುನಿಟ್ಟಾಗಿದೆ. ಇಲ್ಲಿನ ಉತ್ತರಾಧಿಕಾರಿಗಳು ವಿಮಾನದಲ್ಲಿ ಒಟ್ಟಿಗೆ ಕುಳಿತು ಪ್ರಯಾಣಿಸುವ ಅವಕಾಶವೂ ಇಲ್ಲ. ಭದ್ರತೆ ದೃಷ್ಟಿಯಿಂದ ಈ ನಿಯಮಗಳನ್ನು ಜಾರಿಗೆ ತರಲಾಗಿದೆ. ಅನಾಹುತ ನಡೆದು ಇಬ್ಬರು ಉತ್ತರಾಧಿಕಾರಿಗಳು ಸಾವನ್ನಪ್ಪಿದ್ರೆ ಅಥವಾ ತೊಂದರೆಗೊಳಗಾದ್ರೆ ಮುಂದೆ ರಾಜಮನೆತನಕ್ಕೆ ಸಮಸ್ಯೆ ಎನ್ನುವುದು ಈ ನಿಯಮದ ಹಿಂದಿರುವ ಉದ್ದೇಶ.
ಚಳಿಗಾಲದಲ್ಲಿ ಕಡಿಮೆ ಬಜೆಟ್‌ನಲ್ಲಿ ಹನಿಮೂನ್ ಹೋಗೋಕೆ ಬೆಸ್ಟ್ ಜಾಗಗಳಿವು
ಉಪನಾಮ ಇಡೋದು ಅಗೌರವ : ಸಾಮಾನ್ಯವಾಗಿ ನಮಗೆಲ್ಲ ಇಡುವ ಹೆಸರು ಒಂದಾದ್ರೆ ಕರೆಯುವ ಹೆಸರು ಇನ್ನೊಂದಾಗಿರುತ್ತದೆ. ರಾಜಮನೆತನದಲ್ಲಿ ಹೀಗೆ ಮಾಡುವಂತಿಲ್ಲ. ಥೈಲ್ಯಾಂಡ್, ಸೌದಿ ಅರೇಬಿಯಾ, ಮೊರಾಕೊ ಮತ್ತು ಬ್ರೂನಿ ರಾಜಮನೆತನಗಳಲ್ಲಿ ಇದನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತದೆ. ಬ್ರಿಟಿಷ್ ರಾಜಮನೆತನದಲ್ಲೂ ಇದು ಚಾಲ್ತಿಯಲ್ಲಿದೆ. ರಾಜ ಕುಟುಂಬದ ಯಾವುದೇ ಸದಸ್ಯರಿಗೆ ಉಪನಾಮ ಇಡುವಂತಿಲ್ಲ. ಇದನ್ನು ಅಗೌರವ ಎಂದು ಭಾವಿಸಲಾಗುತ್ತದೆ.
ರಾಜಕೀಯದಿಂದ ದೂರ : ರಾಜಮನೆತನದವರು ರಾಜಕೀಯದಿಂದ ದೂರ ಇರಬೇಕೆಂಬ ನಿಯಮವಿದೆ. ರಾಜಮನೆತನಗಳು ನಿಷ್ಪಕ್ಷಪಾತವಾಗಿ ಉಳಿಯಬೇಕು ಎನ್ನುವ ಕಾರಣಕ್ಕೆ ಈ ನಿಯಮ ಜಾರಿಯಲ್ಲಿದೆ.
ಕಪ್ಪು ಬಟ್ಟೆ : ರಾಜಮನೆತನದ ಸದಸ್ಯರು ವಿದೇಶಿ ಪ್ರವಾಸದ ವೇಳೆ ಕಪ್ಪು ಬಟ್ಟೆಯಲ್ಲೇ ಇರಬೇಕಾಗುತ್ತದೆ. ಶೋಕ ಸಂದರ್ಭದಲ್ಲೂ ರಾಜಮನೆತನದವರಿಗೆ ಈ ಪ್ರೋಟೋಕಾಲ್ ಇದೆ. ಆದ್ರೆ ಕೆಲವರು ಈ ನಿಯಮ ಮುರಿಯುತ್ತಾರೆ. ರಾಣಿ ಎಲಿಜಬೆತ್ II ತಮ್ಮ ತಂದೆಯ ಸಾವಿನ ಸುದ್ದಿ ಸ್ವೀಕರಿಸುವಾಗ ಈ ಪ್ರೊಟೋಕಾಲ್ ಮುರಿದಿದ್ದರು.
ಈ ಮೀನು ಸೇವನೆ ನಿಷಿದ್ಧ : ರಾಜಮನೆತನದವರಿಗೆ ಕೆಲ ಆಹಾರ ಸೇವನೆ ನಿಷಿದ್ಧ. ಅದ್ರಲ್ಲಿ ಶೆಲ್ಫಿಶ್ ಕೂಡ ಸೇರಿದೆ. ಚಿಪ್ಪು ಮೀನು ತಿನ್ನೋದ್ರಿಂದ ಹೆಚ್ಚಿನ ಅಪಾಯವಿದೆ. ಅದು ಅಲರ್ಜಿ ಸೇರಿದಂತೆ ಕೆಲ ಆರೋಗ್ಯ ಸಮಸ್ಯೆಯುಂಟು ಮಾಡುತ್ತದೆ ಎಂದು ನಂಬಲಾಗಿದೆ.